ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ಗಳಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಯನ್ನು ದೊಡ್ಡ ಪರದೆಯಲ್ಲಿ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಇವರ ವೈವಾಹಿಕ ಜೀವನದ ವಿಚಾರ ಹೇಳುವುದಾದರೆ ಇಬ್ಬರು ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿರುವಂತೆ ಕಾಣುತ್ತದೆ. ವಿವಾಹವಾದ ದಿನದಿಂದ ಇಲ್ಲಿಯವರೆಗೆ ಈ ಜೋಡಿ ಬಗ್ಗೆಗಿನ ಯಾವುದೇ ನೆಗೆಟಿವ್ ವಿಷಯಗಳು ಕೇಳಿಬಂದಿಲ್ಲ. ಆದರೆ ಕತ್ತಿನಾ ಕೈಫ್ ತಮ್ಮ ಪತಿ ಬಗ್ಗೆ ಹೇಳುವ ಹೊಗಳಿಕೆ ಮಾತುಗಳು ಆಗಾಗ್ಗೆ ಸಾಮಾಜಿಕ ಜಾಲತಾಣಲ್ಲಿ ಮುನ್ನೆಲೆಗೆ ಬರುತ್ತಿರುತ್ತದೆ.
ಇದನ್ನು ಓದಿ: ಐಸಿಯುನಲ್ಲಿದ್ದ ಅಮಿತಾಭ್ ನೋಡಿ ಗಳಗಳನೆ ಅತ್ತಿದ್ದ ಇಂದಿರಾ ಗಾಂಧಿ; ಬಿಗ್ಬಿ ಮಾತಿಗೆ ಐರನ್ ಲೇಡಿ ರಿಯಾಕ್ಷನ್ ಹೀಗಿತ್ತು..
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಕತ್ರಿನಾ ಕೈಫ್ ತಮ್ಮ ಸಂಬಂಧದ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ತಮ್ಮ ಪತಿ ವಿಕ್ಕಿ ಕೌಶಲ್ ಎಷ್ಟು ಕೂಲ್ ಆಗಿರುತ್ತಾರೆ ಎಂಬುದನ್ನು ಬಣ್ಣಿಸಿದ್ದಾರೆ. ಬ್ಯೂಟಿ, ತೂಕ ಹೆಚ್ಚಾಗುವ ಕುರಿತು, ಔಟ್ಫಿಟ್ ಬಗ್ಗೆ ಮಾತನಾಡುವಾಗ ತಮ್ಮ ಪತಿಯ ಸಹಕಾರ ಹೇಗಿದೆ ಎಂಬುದನ್ನು ಉದಾಹರಣೆ ನೀಡುವ ಮೂಲಕ ಬಹಿರಂಗಪಡಿಸಿದ್ದಾರೆ.
ನಾನು ವಿಕ್ಕಿ ಜತೆ ಇದ್ದಾಗ ಅಥವಾ ಯಾವುದಾದರೂ ಈವೆಂಟ್ಗೆ ರೆಡಿಯಾಗುವಾಗ ನಾನು ತೂಕ ಹೆಚ್ಚಾಗಿರುವ ಬಗ್ಗೆ ಹಾಗೂ ನಾನು ಲುಕ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತೇನೆ. ನನ್ನನ್ನು ನಾನು ನೋಡಿಕೊಳ್ಳುತ್ತಿರುವುದು ನನಗೆ ಸಂತೋಷವಾಗುತ್ತಿಲ್ಲ. ನಾನು ತೂಕ ಹೆಚ್ಚಾಗಿದ್ದೇನೆ ಇದು ನನಗೆ ಕಂಫವರ್ಟ್ ಇಲ್ಲ ಎಂದೆಲ್ಲಾ ಕೇಳುತ್ತೇನೆ.
ಸ್ವಲ್ಪ ಸಮಯ ನನ್ನ ಬಳಿಯೇ ಕುಳಿತುಕೊಂಡು ವಿಕ್ಕಿ, ನೀವು ಹೇಗಿದ್ದರೂ ಪರವಾಗಿಲ್ಲ. ನೀನು ನೀವಾಗಿಯೇ ಇರು. ನೀವು ಹೇಗಿದ್ದೀರೋ ಹಾಗೆಯೇ ಇರಿ ಎಂದು ಎಲ್ಲರಿಗೂ ಹೇಳುವವರು ನೀವೇ ಅಲ್ಲವೆ ಎಂದು ಕೂಲ್ ಆಗಿಯೇ ಹೇಳುತ್ತಾರೆ. ಆಗ ನಾನು ವಿಕ್ಕಿಯನ್ನು ಒಂದು ರೀತಿ ನೋಡುತ್ತೇನೆ. ಬಳಿಕ ಅವನು ಹೇ..ಒಂದು ಸೆಕೆಂಡ್ ಎಂದು ಶಾಂತವಾಗಿಯೇ ಕುಳಿತಿರುತ್ತಾರೆ ಎಂದು ಹೇಳಿದ್ದಾರೆ. ಅವರು ನೀಡುವ ಧೈರ್ಯದಿಂದಲೇ ನಾನು ಇದನ್ನು (ಬ್ರಾಂಡ್) ಪ್ರಾರಂಭಿಸಿದೆ. ಅವರ ಮಾತುಗಳನ್ನು ಸದಾ ನೆನೆಯುತ್ತೇನೆ ಅದು ನನಗೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಕತ್ರಿನಾ ಕೈಫ್ ಶೂಟಿಂಗ್ ಬಳಿಕ ಮನೆಗೆ ಹಿಂತಿರುಗಿದಾಗ ಕೆಲವೊಮ್ಮೆ ಕೋಪವನ್ನು ವಿಕ್ಕಿ ಮೇಲೆ ತೋರಿಸುತ್ತೇನೆ. ಆದರೆ ಅವನಿಂದ ಯಾವುದೆ ನಕಾರಾತ್ಮಕ ಪ್ರತಿಕ್ರಿಯೆ ಬರುವುದಿಲ್ಲ. ಕೂಲ್ ಆಗಿಯೇ ಇರುತ್ತಾರೆ ಎಂದು ಹೇಳಿದ್ದರು. ಕತ್ರಿನಾ ಕೈಫ್ ವಿಜಯ್ ಸೇತುಪತಿ ಜತೆ ಮೆರ್ರಿ ಕ್ರಿಸ್ಮಸ್ನಲ್ಲಿ ಕೊನೆಯದಾಗಿ ಕಾಣಸಿಕೊಂಡಿದ್ದರು. ನಟನೆ ಜತೆಗೆ ಯಶಸ್ವಿ ಉದ್ಯಮಿಯಾಗುತ್ತ ಸಾಗಿರುವ ಕ್ಯಾಟ್ 2019ರಲ್ಲಿ ತಮ್ಮ ಸೌಂದರ್ಯ ಬ್ರ್ಯಾಂಡ್ ಕೇ ಬ್ಯೂಟಿ ಬೈ ಕತ್ರಿನಾವನ್ನು ಪ್ರಾರಂಭಿಸಿದರು. ಅಂದಿನಿಂದ ಇದು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.(ಏಜೆನ್ಸೀಸ್)
ದೀಪಿಕಾ ಕೆಲಸ ನೋಡಿಲ್ಲ.. ಶ್ರದ್ಧಾ ಬಗ್ಗೆ ಏನೂ ಗೊತ್ತಿಲ್ಲ!; ನವಾಜುದ್ದೀನ್ ಸಿದ್ದಿಕಿ ಹೀಗೆಳಿದ್ದೇಕೆ?