PHOTOS| ಸೂರ್ಯವಂಶಿ ಚಿತ್ರದಲ್ಲಿ ನಟ ಅಕ್ಷಯ್​ ಪಾತ್ರ ಪರಿಚಯಿಸಿದ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್​!

ಮುಂಬೈ: ಸಲ್ಮಾನ್ ಖಾನ್​ ಅಭಿನಯದ “ಭಾರತ್”​ ಚಿತ್ರದ ಬಳಿಕ ನಟಿ ಕತ್ರಿನಾ ಕೈಫ್​ ಮತ್ತೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ತಮ್ಮ ಮುಂದಿನ ಅಕ್ಷಯ್​​ ಕುಮಾರ್​ ನಟನೆಯ ಪೊಲೀಸ್​ ಕತೆ ಆಧಾರಿತ “ಸೂರ್ಯವಂಶಿ” ಚಿತ್ರದ ಪೋಸ್ಟರ್ ಅನ್ನು ಇನ್​ಸ್ಟಾಗ್ರಾಂನಲ್ಲಿ​ ಶೇರ್​ ಮಾಡುವ ಮೂಲಕ ಚಿತ್ರೀಕರಣದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.

ರೋಹಿತ್​ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಪಾತ್ರದ ಹೆಸರನ್ನು ಕತ್ರಿನಾ ಪೋಸ್ಟರ್​ ಶೇರ್​ ಮಾಡುವ ಮೂಲಕ ಎಲ್ಲರಿಗೂ ಪರಿಚಯಿಸಿದ್ದಾರೆ. ಚಿತ್ರದಲ್ಲಿ ಅಕ್ಷಯ್​, ವೀರ್​ ಸೂರ್ಯವಂಶಿಯಾಗಿ ಕಾಣಿಸಿಕೊಳ್ಳಲಿದ್ದು, ಪೋಸ್ಟರ್​ ನೋಡಿದ ಅಭಿಮಾನಿಗಳಲ್ಲಿ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಚಿತ್ರದಲ್ಲಿ ಅಕ್ಷಯ್​ ಡಿಸಿಪಿ ಆಗಿ ಪೊಲೀಸ್​ ಪಾತ್ರದಲ್ಲಿ ಆರ್ಭಟಿಸಲಿದ್ದು, ನಾಯಕಿಯಾಗಿ ಕತ್ರಿನಾ ಡುಯೆಟ್​​ ಆಡಲಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಅಕ್ಷಯ್​, ಅಜಯ್​ ದೇವಗನ್​ ಹಾಗೂ ರಣವೀರ್​ ಸಿಂಗ್​ ಸಾಕ್ಷಿಯಾಗುವ ಮುನ್ಸೂಚನೆ ದೊರಕಿದ್ದು, 2020ನೇ ಸಾಲಿನ ಸಾಕಷ್ಟು ಎದುರು ನೋಡುತ್ತಿರುವ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ.

ಈ ವರ್ಷದ ಆರಂಭದಲ್ಲೇ ಚಿತ್ರೀಕರಣ ಆರಂಭವಾಗಿದ್ದು, ಕತ್ರಿನಾ ಕೂಡ ತುಂಬಾ ಉತ್ಸುಕರಾಗಿದ್ದಾರೆ. ಅಲ್ಲದೆ, ಅಕ್ಷಯ್​ ಹಾಗೂ ನಟಿ ರವೀನಾ ಅಭಿನಯದ ಈ ಹಿಂದಿನ ಚಿತ್ರವೊಂದರ ಪ್ರಖ್ಯಾತ ಹಾಡು ಟಿಪ್​ ಟಿಪ್​ ಬರಸಾನಿಯನ್ನು ಈ ಚಿತ್ರದಲ್ಲಿ ಮತ್ತೆ ಮರುನಿರ್ಮಿಸಲಾಗುತ್ತಿದೆ. ಇದರ ಒಂದು ಝಲಕ್​ ಅನ್ನು ಕತ್ರಿನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *