blank

ಶೀಘ್ರವೇ ಮದುವೆಯಾಗಲಿರುವ ವಿಕ್ಕಿ-ಕತ್ರಿನಾ ಬಾಲ್ಯದ ಫೋಟೋಗಳು ವೈರಲ್!

blank

ಮುಂಬೈ: ಇತ್ತೀಚೆಗೆ ಬಾಲಿವುಡ್​ನ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಮದುವೆಯ ಸುದ್ದಿಯದ್ದೇ ಸದ್ದು. 2003ರಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ 38 ವರ್ಷದ ನಟಿ ಕತ್ರಿನಾ ಮದುವೆ ಡಿ.9ರಂದು ರಾಜಸ್ಥಾನದ ಸವಾಯಿ ಮಾದೋಪುರದಲ್ಲಿ ನಡೆಯಲಿದೆ. ಈ ನಡುವೆ ಕತ್ರಿನಾ-ವಿಕ್ಕಿ ಅವರ ಬಾಲ್ಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ತಮ್ಮ ಬಾಲ್ಯದ ಫೋಟೋಗಳಲ್ಲಿ ಇಬ್ಬರೂ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಈ ಫೋಟೋಗಳನ್ನು ಕತ್ರಿನಾ ಹಾಗೂ ವಿಕ್ಕಿ ಅವರ ಹಲವಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೀಗೆ, ವೈರಲ್ ಆಗುತ್ತಿರುವ ಫೋಟೋಗಳ ಪೈಕಿ ಆರು ಚಿತ್ರಗಳೀಗ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಲಾಗಿರುವ ಫೋಟೋಗಳ ಪಟ್ಟಿಯಲ್ಲಿವೆ.

ಇದಲ್ಲದೆ, ಕತ್ರಿನಾ ಮತ್ತು ವಿಕ್ಕಿ ಚೈಲ್ಡ್​ಹುಡ್ ಚಿತ್ರಗಳನ್ನು ಟ್ರೋಲ್ ಮಾಡಲಾಗುತ್ತಿದೆ. 33 ವರ್ಷದ ನಟ ವಿಕ್ಕಿಯ ಒಂದು ಫೋಟೋ ಮೇಲೆ, ‘ಯಾರು ಊಹಿಸಿದ್ದರು, ಮುಂದೆ ಈ ಹುಡುಗ ಭಾರತ ದೇಶದ ಅತ್ಯಂತ ಸುಂದರಿಯರಲ್ಲಿ ಒಬ್ಬರು ಎನಿಸಿಕೊಂಡ ಕತ್ರಿನಾಳ ಗಂಡ ಆಗಬಹುದು’ ಎಂಬ ಟೈಟಲ್ ಹಾಕಿ ವೈರಲ್ ಮಾಡಲಾಗುತ್ತಿದೆ. ಮತ್ತೊಂದೆಡೆ ವಿಕ್ಕಿ ಮತ್ತು ಕತ್ರಿನಾ ನಡುವಿನ 5 ವರ್ಷದ ವಯಸ್ಸಿನ ಅಂತರವನ್ನು ಆಧರಿಸಿ ನೆಟ್ಟಿಗರು ಟ್ರೋಲ್​​ಗಳನ್ನು ಸೃಷ್ಟಿಸುತ್ತಿದ್ದಾರೆ.

ಹೀಗಾಗಿ, ‘ಮಗು.. ಒಬ್ಬ ಹೀರೋ ಆಗಿ ಹೀರೋಯಿನ್ ಅನ್ನು ಎಗರಿಸಿಕೊಂಡು ಹೋಗಿದ್ದು, ಬೇರೆ ಗಂಡಸರ ಕನಸಿಗೆ ತಣ್ಣೀರೆರಚಿದೆಯಲ್ಲಪ್ಪಾ ವಿಕ್ಕಿ’ ಎಂಬ ಕ್ಯಾಪ್ಷನ್​​ಗಳು ಇಂಟರ್ನೆಟ್ ಜೋನ್​ನಲ್ಲಿ ಗಮನ ಸೆಳೆಯುತ್ತಿವೆ. ಇನ್ನು, #Vickat ಎಂಬ ಹ್ಯಾಷ್​ಟ್ಯಾಗ್ ಕೂಡ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಬಾಲ್ಯದ ಫೋಟೋಗಳ ನಂತರ ತಾರಾಜೋಡಿಯ ಮದುವೆ ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುವುದರಲ್ಲಿ ಸಂಶಯವಿಲ್ಲ.

ಶೀಘ್ರವೇ ಮದುವೆಯಾಗಲಿರುವ ವಿಕ್ಕಿ-ಕತ್ರಿನಾ ಬಾಲ್ಯದ ಫೋಟೋಗಳು ವೈರಲ್! ಶೀಘ್ರವೇ ಮದುವೆಯಾಗಲಿರುವ ವಿಕ್ಕಿ-ಕತ್ರಿನಾ ಬಾಲ್ಯದ ಫೋಟೋಗಳು ವೈರಲ್! ಶೀಘ್ರವೇ ಮದುವೆಯಾಗಲಿರುವ ವಿಕ್ಕಿ-ಕತ್ರಿನಾ ಬಾಲ್ಯದ ಫೋಟೋಗಳು ವೈರಲ್!

ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನವರ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…