Friday, 16th November 2018  

Vijayavani

Breaking News

ಸಂತರ ಸಾಮ್ರಾಜ್ಯ ನಮ್ಮದು

Monday, 09.07.2018, 3:02 AM       No Comments

| ಗಂಗಾವತಿ ಪ್ರಾಣೇಶ್​

ಸಂತರು ಭಗವತ್ ಸ್ವರೂಪಿಗಳು. ಅವರ ಪವಿತ್ರ ಜೀವನದಲ್ಲಿ ವಿಶ್ವ ವ್ಯಾಪಕವಾದ ಭಗವದ್ರಸವು ಅಖಂಡವಾಗಿ ಪ್ರವಹಿಸುತ್ತಿರುತ್ತದೆ. ಆ ರಸವು ಜಗತ್ತಿನ ಜೀವರುಗಳನ್ನು ಭಯಂಕರವಾದ ಮೃತ್ಯು ಪಾಶದಿಂದ ಮುಕ್ತರಾಗಿಸಿ ಅಮೃತತ್ವವನ್ನು ದಯಪಾಲಿಸುತ್ತದೆ. ಸಂತರು ಜ್ಯೋತಿಸ್ವರೂಪರು. ಅಜ್ಞಾನಿಗಳು ಅಜ್ಞಾನವನ್ನು ದೂರವಾಗಿಸಿ ಅವರಲ್ಲಿ ಭಗವತ್ ಪ್ರಕಾಶವನ್ನು ತುಂಬುವರು. ಇಂತಹ ನೂರಾರು ಸಂತರನ್ನು ಪಡೆದ ಭಾರತ ಭೂಮಿ ಧನ್ಯ. ಸಂತರು ಹುಟ್ಟಿದ ಕುಲ ಪವಿತ್ರ, ಪಂಗಡ ಮತ್ತು ಸಮುದಾಯಗಳೂ ಪವಿತ್ರ. ಸಂತರ ಜೀವನವು ಲೋಕೋದ್ಧಾರಾರ್ಥ. ಅವರು ಮಥಗಳಿಂದ ಅತೀತರು, ನಿರಪೇಕ್ಷಿಗಳು, ಸರ್ವಜೀವಿಗಳಲ್ಲಿ ಸ್ವಾಮಿಯ ದರ್ಶನ ಮಾಡುವರು. ಸಂತರ ನಡೆ ಪಾವನ, ನುಡಿ ಅಮರ. ಆದಿಗುರು ಶಂಕರ, ಆಚಾರ್ಯ ಮಧ್ವ, ಸ್ವಾಮಿ ರಾಮತೀರ್ಥ, ಜ್ಞಾನದೇವ, ವಿವೇಕಾನಂದ, ಕಬೀರ, ಮೀರಾ, ಕನಕ, ಶಿಶುನಾಳ ಶರೀಫ- ಹೀಗೆ ಸಂತರ ಸಂತತಿ ನಮ್ಮದೆಂದು ಹೆಮ್ಮೆ ಪಡೋಣ. ಅದಕ್ಕೇ ಕವಿ ಹೇಳಿದ್ದು, ಭರತ ಭೂಮಿ ಎನ್ನ ತಾಯಿ ಎನ್ನ ಪೊರೆವ ತೊಟ್ಟಿಲು ಎಂದು.

Leave a Reply

Your email address will not be published. Required fields are marked *

Back To Top