Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಕಾಯುವ ದೈವವೇ ಮೇಲು

Tuesday, 10.07.2018, 3:02 AM       No Comments

| ಗಂಗಾವತಿ ಪ್ರಾಣೇಶ್

ಸಾತ್ವಿಕ ದಂಪತಿ ಒಮ್ಮೆ ಕೃಷ್ಣನ ದರ್ಶನಕ್ಕೆ ಬೃಂದಾವನಕ್ಕೆ ಹೋಗಬಯಸಿದರು. ವೃದ್ಧರಾದ ನಮಗೆ ದಾರಿಯಲ್ಲಿ ಸಹಾಯಕರಿಲ್ಲವಲ್ಲ ಎಂಬ ಚಿಂತೆ ಕಾಡಿತು. ಕೊನೆಗೆ ಭಗವಂತನಲ್ಲಿ ವಿಶ್ವಾಸವಿಟ್ಟು ಹೊರಟರು. ದಾರಿಯುದ್ದಕ್ಕೂ ಭಜನೆ, ಕೀರ್ತನೆ ಮಾಡುತ್ತ ಬೃಂದಾವನದ ಮಾರ್ಗ ಕ್ರಮಿಸಿದರು. ದೂರದಲ್ಲಿ ಇಬ್ಬರು ಕುಳಿತಿದ್ದರು. ಅವರನ್ನು ನೋಡುತ್ತಲೇ ಆನಂದ ಭರಿತರಾದ ವೃದ್ಧ ದಂಪತಿ ಭೇಟಿ ಮಾಡಿದರು. ಅದು ದರೋಡೆಕೋರರ ತಂಡವಾಗಿತ್ತು. ಯಾತ್ರಿಕರನ್ನು ದೋಚುವುದೇ ವೃತ್ತಿಯಾಗಿತ್ತು. ಏನೂ ಅರಿಯದ, ಕೇವಲ ದೇವರ ಬಗ್ಗೆ ಭಕ್ತಿ ಹೊಂದಿದ್ದ ವೃದ್ಧ ದಂಪತಿಯನ್ನು ಅವರು ಕಾಡಿನೊಳಗೆ ಸಲ್ಪ ದೂರ ಕರೆದೊಯ್ದು ಸೂಕ್ತ ವಸತಿ ಮಾಡಿಕೊಟ್ಟರು. ಇದೆಲ್ಲ ದೋಚುವ ನಾಟಕವಾಗಿತ್ತು. ವೃದ್ಧ ದಂಪತಿಗೆ ಪ್ರಯಾಣದ ಆಯಾಸದಿಂದ ಗಾಢ ನಿದ್ರೆ ಬಂತು. ತಡರಾತ್ರಿ ಇಬ್ಬರನ್ನೂ ಕೊಲ್ಲಲು ದರೋಡೆಕೋರರು ನಿರ್ಧರಿಸಿದ್ದರು. ಸಲ್ಪ ಸಮಯದ ನಂತರ ನೋಡಿದಾಗ ಮಲಗಿದ್ದ ಆ ದಂಪತಿ ಅಲ್ಲಿರಲೇ ಇಲ್ಲ. ಬೆಳಗ್ಗೆ ಕಣ್ಣು ತೆರೆದಾಗ ಬೃಂದಾವನದಲ್ಲೇ ಇದ್ದರು. ದೇವರ ದರ್ಶನದಿಂದ ದಿನಾರಂಭವಾಯಿತು! ಕೊಲ್ಲುವವರಿಗಿಂತಾ ಕಾಯುವವನೇ ಮೇಲು. ನಂಬಿಕೆಯೇ ದೇವರು.

Leave a Reply

Your email address will not be published. Required fields are marked *

Back To Top