Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ದ್ರೌಪದಿಯ ಮಾತೃಭಾವ

Thursday, 19.07.2018, 3:03 AM       No Comments

| ಗಂಗಾವತಿ ಪ್ರಾಣೇಶ್​

ಮಹಾಭಾರತ ಯುದ್ಧ ಸಮಾಪ್ತವಾದೊಡನೆ ಕೃಷ್ಣನು ಪಾಂಡವರನ್ನೊಡಗೊಂಡು ತನ್ನ ಶಿಬಿರಕ್ಕೆ ತೆರಳದೆ, ಸಾತ್ಯಕಿ ಜತೆ ಶಿಬಿರದಿಂದ ಬಹುದೂರ ಹೋದ. ಅಲ್ಲಿ ಯುದ್ಧ ಸಮಯದಲ್ಲಿ ದ್ರೌಪದಿ ಮತ್ತು ಇತರ ರಾಣಿಯರು ವಾಸಿಸುತ್ತಿದ್ದರು. ಅದೇ ದಿನ ರಾತ್ರಿ ಪಾಂಡವರ ಶಿಬಿರಕ್ಕೆ ಬೆಂಕಿ ಹಚ್ಚಿ, ದ್ರೌಪದಿಯ ಐವರು ವೀರ ಮಕ್ಕಳನ್ನು ಅಶ್ವತ್ಥಾಮ ಸಂಹರಿಸಿದ್ದ. ಬೆಳಗ್ಗೆ ಕೃಷ್ಣನೊಡನೆ ಬಂದ ಪಾಂಡವರು ಶಿಬಿರದಲ್ಲಿ ದ್ರೌಪದಿಯ ಐದು ಮಕ್ಕಳ ರುಂಡಗಳನ್ನು ಕಂಡು ದುಃಖ ಸಾಗರದಲ್ಲಿ ಮುಳುಗಿದರು. ಅಶ್ವತ್ಥಾಮನನ್ನು ಅರ್ಜುನ ಬಂಧಿಸಿ ದ್ರೌಪದಿ ಮುಂದೆ ನಿಲ್ಲಿಸಿದ. ದಯಾಮಯಳಾದ ದ್ರೌಪದಿ ಚಿಂತನೆ ಬೇರೆಯಾಗಿತ್ತು. ಅವಳ ಮುಂದೆ ಐವರು ಮಕ್ಕಳ ಶವವಿದ್ದು, ಹತ್ಯಾಕಾಂಡ ಇದ್ದರೂ ಅವಳು ಪುತ್ರ ಶೋಕವನ್ನು ಮರೆತು ಪಶುಗಳಂತೆ ಕಟ್ಟಿ ತಂದ ಅಶ್ವತ್ಥಾಮ ತಲೆ ತಗ್ಗಿಸಿ ನಿಂತಿರುವುದನ್ನು ಕಂಡು, ‘ಯಾರ ಕೃಪೆಯಿಂದ ಎಲ್ಲ ಅಸ್ತ್ರವಿದ್ಯೆಗಳನ್ನು ಕಲಿತರೋ ಅವರ ಪುತ್ರನು ಇಲ್ಲಿ ನಿಂತಿದ್ದಾನೆ. ಕೂಡಲೇ ಬಂಧನ ಬಿಡಿಸಿರಿ. ಪುತ್ರಶೋಕ ಯಾವ ರೀತಿಯದು ಎಂದು ಅನುಭವಿಸುತ್ತಿದ್ದೇನೆ. ಇವರ ತಾಯಿ ಕೃಪೀದೇವಿಗೆ ಈ ಶೋಕ ಬಾರದಿರಲಿ’ ಎಂದಳು.

Leave a Reply

Your email address will not be published. Required fields are marked *

Back To Top