Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವರ್ತಮಾನ ಕಾಲವೇ ಮಹತ್ವದ್ದು

Thursday, 14.06.2018, 3:03 AM       No Comments

| ನಿರೂಪಣೆ: ಗಂಗಾವತಿ ಪ್ರಾಣೇಶ್

ಒಬ್ಬ ರಾಜನ ಮನಸ್ಸಿನಲ್ಲಿ ಮೂರು ಪ್ರಶ್ನೆ ಉದ್ಭವಿಸಿದವು. ಪ್ರತ್ಯೇಕ ಕಾರ್ಯ ಮಾಡಲು ಮಹತ್ವ ಪೂರ್ಣವಾದ ಸಮಯ ಯಾವುದು? ಮಹತ್ವವಾದ ಕಾರ್ಯ ಯಾವುದು? ಎಲ್ಲರಿಗಿಂತ ಮಹತ್ವ ಪೂರ್ಣನಾದ ವ್ಯಕ್ತಿ ಯಾರು? ತನ್ನ ಮಂತ್ರಿಗಳು ಮತ್ತು ರಾಜ ಸಭೆಯ ವಿದ್ವಾಂಸರೊಡನೆ ಈ ಬಗ್ಗೆ ರಾಜ ಕೇಳಿದ. ಆದರೆ, ಯಾವ ಉತ್ತರಗಳಿಂದಲೂ ಸಂತೋಷವಾಗಲಿಲ್ಲ. ಕೊನೆಗೆ ನಗರದ ಆಚೆಯ ಕುಟೀರದಲ್ಲಿ ವಾಸಿಸುವ ಸಂತನ ಬಳಿಗೆ ರಾಜ ಹೋದ. ಆ ಸಮಯದಲ್ಲಿ ಸಂತನು ಹೂ ಗಿಡಗಳಿಗೆ ಪಾತಿ ಮಾಡುತ್ತಿದ್ದ. ರಾಜನು ತನ್ನ ಪ್ರಶ್ನೆಗಳನ್ನು ಸಂತನ ಮುಂದಿಟ್ಟ. ಆದರೆ ಸಂತ ಯಾವ ಉತ್ತರನ್ನೂ ಕೊಡದೆ ತನ್ನ ಕೆಲಸ ಮುಂದುವರಿಸಿದ. ಸಂತನ ಕೈಯಲ್ಲಿದ್ದ ಗುದ್ದಲಿಯನ್ನು ತೆಗೆದುಕೊಂಡು ರಾಜ ತಾನೇ ಅಗೆಯ ತೊಡಗಿದ. ಸಾಧುವು, ಅಲ್ಲಿ ಒಬ್ಬ ವ್ಯಕ್ತಿ ಓಡಿ ಬರುತ್ತಿದ್ದಾನೆ. ಅವನು ಏನು ಬಯಸುತ್ತಾನೆಂಬುದನ್ನು ಮೊದಲು ನೋಡೋಣ ಎಂದ. ಆ ವ್ಯಕಿಗೆ ಆಯುಧಗಳಿಂದ ಗಾಯವಾಗಿತ್ತು. ರಾಜ ಖುದ್ದಾಗಿ ಅವನನ್ನು ನೀರು ಕೊಟ್ಟು ಉಪಚರಿಸಿದ. ನನ್ನ ಅಪರಾಧವನ್ನು ಕ್ಷಮಿಸಿ ಎಂದು ರಾಜನಿಗೆ ಆತ ಬೇಡಿದ. ರಾಜ ಏಕೆ ಎಂದ. ಒಂದು ಯುದ್ಧದಲ್ಲಿ ನನ್ನ ಸಹೋದರ ನಿಮ್ಮಿಂದ ಹತನಾದ. ಅಂದಿನಿಂದಲೂ ನಿಮ್ಮನ್ನು ಕೊಂದು ನನ್ನ ಸೇಡನ್ನು ತೀರಿಸಕೊಳ್ಳಲು ಹವಣಿಸುತ್ತಿದ್ದೆ. ನೀವು ಈಗ ವನದತ್ತ ಬರುತ್ತಿರುವುದನ್ನು ಕಂಡು ರಹಸ್ಯವಾಗಿ ಕೊಲ್ಲಲು ಹಿಂಬಾಲಿಸಿದೆ. ನಿಮ್ಮ ಸೈನಿಕರು ನನ್ನನ್ನು ಬೆನ್ನಟ್ಟಿ ಹೊಡೆದರು. ನೀವು ರಕ್ಷಿಸಿದಿರಿ. ನೀವೆಷ್ಟು ದಯಾಳು ಎಂಬುದು ನನಗೆ ಈಗ ಗೊತ್ತಾಯಿತು ಎಂದ. ಸಂತ ಹೇಳಿದ, ರಾಜ, ನಿನ್ನ ಪ್ರಶ್ನೆಗಳಿಗೆ ಉತ್ತರ ದೊರಕಿತಲ್ಲಾ…

ಎಲ್ಲಕ್ಕಿಂತಲೂ ಮಹತ್ವ ಪೂರ್ಣವಾದ ಸಮಯ ವರ್ತಮಾನ ಕಾಲ. ಅದನ್ನು ಉತ್ತಮ ರೀತಿಯಲ್ಲಿ ನೀನು ಈಗ ಬಳಸಿಕೊಂಡಿರುವೆ. ಯಾವ ವ್ಯಕ್ತಿಯು ವರ್ತಮಾನದಲ್ಲಿ ನಿನ್ನ ಮುಂದಿರುವನೋ ಅವನೇ ಎಲ್ಲರಿಗಿಂತ ಮಹತ್ವಪೂರ್ಣ. ಅವನ ಜತೆಯಲ್ಲಿ ಸರಿಯಾದ ರೀತಿಯಲ್ಲಿ ವ್ಯವಹರಿಸು ಎಂದ ಸಂತ.

Leave a Reply

Your email address will not be published. Required fields are marked *

Back To Top