2025ರ ಈ ಹೊತ್ತಿಗೆ ಕಥಾ ಮತ್ತು ಕಾವ್ಯ ಪ್ರಶಸ್ತಿ ಪ್ರಕಟ: ಪೂರ್ಣಿಮಾ ಮತ್ತು ಡಾ. ಲಕ್ಷ್ಮಣಗೆ ಗೌರವ

ಬೆಂಗಳೂರು:  ಶಿರಸಿ ತಾಲ್ಲೂಕಿನ ಸಣ್ಣಕೇರಿವರಾದಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ, ‘ಕತೆ ಜಾರಿಯಲ್ಲಿರಲಿ’ ಅಪ್ರಕಟಿತ ಕಥಾಸಂಕಲನ, 2025ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಳಗಾವಿ ಜಿಲ್ಲೆಯ ಮೋಳೆಯರಾದ ಡಾ. ಲಕ್ಷ್ಮಣ ವಿ ಎ ಅವರ ‘ಪರಿಮಳದ ಬಾಕಿ ಮೊತ್ತ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ. ಎರಡೂ ಪ್ರಶಸ್ತಿಗಳು ತಲಾ ರೂ. 10,000 ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿವೆ.

ಪೂರ್ಣಿಮಾ ಭಟ್ಟ ಸಣ್ಣಕೇರಿ

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಇವರು ಕೆಲ ಕಾಲ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಕೆಲ ವರ್ಷ ಪತ್ರಿಕೆಗಳಲ್ಲಿ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ೩೦ ಮಕ್ಕಳಿಗೆ ಮನೆಪಾಠ ಮಾಡುವ ಮೂಲಕ ಕನ್ನಡ ಕಲಿಸುತ್ತಿದ್ದಾರೆ. ಇವರು ಬರೆದ ಕತೆ, ಕವನ, ಲೇಖನಗಳು ಪತ್ರಿಕೆಗಳಲ್ಲಿ-ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ. ನಾಡಿನ ಖ್ಯಾತ ಕತೆಗಾರರು, ಪತ್ರಕರ್ತರೂ ಆಗಿರುವ ಶ್ರೀ. ರಘುನಾಥ ಚ ಹ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.

ಇದನ್ನೂ ಓದಿ: ಇದು ಭಾರತೀಯರಿಗೆ ಮಾಡಿದ ಅವಮಾನ; ಮೋಹನ್ ಭಾಗವತ್ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ | Rahul Gandhi

ಡಾ. ಲಕ್ಷ್ಮಣ ವಿ ಎ

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ಡಾ. ಲಕ್ಷ್ಮಣ ವಿ ಎ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಪ್ರಕಟಿತ ಕೃತಿಗಳೆಂದರೆ, ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’, ‘ಅಪ್ಪನ ಅಂಗಿ’, ‘ಕಾಯಿನ್ ಬೂತ್’ ಕವನ ಸಂಕಲನಗಳು, ‘ಗರ್ದಿ ಗಮ್ಮತ್ತು ನೋಡಾ ಗೋಲಗುಮ್ಮಟ ನೋಡಾ’, ‘ಮಿಲ್ಟ್ರಿ ಟ್ರಂಕು’ ಎಂಬ ಕಿರು ಪ್ರಬಂಧ ಸಂಕಲನಗಳು, ‘ಕವಲುಗುಡ್ಡ’ ಕಾದಂಬರು ಮತ್ತು ‘ಜಿರಿಮಳೆಯ ಕಣ್ಣು’ ಕಥಾ ಸಂಕಲನ.ನಾಡಿನ ಖ್ಯಾತ ಕವಿ, ದೂರದರ್ಶನದ ನಿರ್ದೇಶಕರಾಗಿರುವ ಆರತಿ ಹೆಚ್ ಎನ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗಲಿದ್ದಾರೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ! ಕಾರಣ ಹೀಗಿದೆ… Rohit Sharma

ಪೂರ್ವ ಆಯ್ಕೆ ಸಮಿತಿ: ಕಾವ್ಯ ವಿಭಾಗದಲ್ಲಿ, ಮಾಲಿನಿ ಗುರುಪ್ರಸನ್ನ ಮತ್ತು ಆನಂದ ಕುಂಚನೂರ್ ಹಾಗೂ ಕಥಾ ವಿಭಾಗದಲ್ಲಿ, ತೇಜಸ್ವಿನಿ ಹೆಗಡೆ ಮತ್ತು ಪ್ರವೀಣ್ ಕುಮಾರ್ ಜಿ ಅವರು ಮೊದಲ ಸುತ್ತಿನಲ್ಲಿ ತಲಾ ೧೦ ಮತ್ತು ೧೦ ಉತ್ತಮ ಸಂಕಲನಗಳು ಆಯ್ಕೆ ಮಾಡಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗಲಿದ್ದಾರೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ! ಕಾರಣ ಹೀಗಿದೆ… Rohit Sharma

ಇದೇ ಮಾರ್ಚ್ ತಿಂಗಳಲ್ಲಿ, ಬೆಂಗಳೂರಿನಲ್ಲಿ ನಡೆಯಲಿರುವ, ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಗೇಮ್​ ಚೇಂಚರ್​ ಸಿನಿಮಾ ನನಗೆ ಪೂರ್ಣ ತೃಪ್ತಿ ನೀಡಿಲ್ಲ; ಹೀಗ್ಯಾಕಂದ್ರು ನಿರ್ದೇಶಕ ಶಂಕರ್​? | Game Changer

Share This Article

ladies finger Benefits : ಬೆಂಡೆಕಾಯಿ ಒಳ್ಳೆಯದು, ಆದ್ರೆ ಅಪ್ಪಿತಪ್ಪಿಯೂ ಸಹ ಇವ್ರು ಬೆಂಡೆಕಾಯಿ ತಿನ್ನಲೇಬಾರದು..!

ladies finger Benefits : ತರಕಾರಿಗಳಲ್ಲಿ ಒಂದಾದ ಬೆಂಡೆಕಾಯಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…

ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake

Snake : ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ…

ಚಳಿಗಾಲದಲ್ಲಿ ನೀವು ಹೆಚ್ಚು ನಿದ್ರೆ ಮಾಡುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ… Sleep

Sleep : ಚಳಿಗಾಲ ಬಂದಾಗ ಬಹುತೇಕರಿಗೆ ತುಂಬಾ ಆಲಸ್ಯವಾಗುತ್ತದೆ. ಏನೂ ಮಾಡಲೂ ಮನಸಿರುವುದಿಲ್ಲ. ಸೋಮಾರಿತನ ಕಾಡುತ್ತದೆ.…