ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ 2020ರ ಜ.30ರಂದು ಬ್ರಹ್ಮಕಲಶೋತ್ಸವ

 ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2020ರ ಜನವರಿ 30ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಸೇವೆ ನಡೆಯಲಿದೆ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು, ಭಕ್ತರ ಅನುಕೂಲಕ್ಕಾಗಿ ದೇವಳದಲ್ಲಿ ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆಯಲಾಗಿದೆ ಎಂದರು.

ದೇವಸ್ಥಾನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಕೌಂಟರ್ ಉದ್ಘಾಟಿಸಿದರು. ಭಕ್ತರಿಗೆ ಅನುಕೂಲವಾಗುವಂತೆ ಬ್ರಹ್ಮಕಲಶೋತ್ಸವ ಕಾಣಿಕೆ ಹುಂಡಿ ಪ್ರಾರಂಭಿಸಲಾಯಿತು.

ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕುಮಾರ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಹರಿಕೃಷ್ಣ ಪುನರೂರು, ಜಿಪಂ ಉಪಾಧ್ಯಕ್ಷೆ, ಕಸ್ತೂರಿ ಪಂಜ, ತಾಪಂ ಸದಸ್ಯ ಸುಕುಮಾರ್ ಸನಿಲ್, ಕಟೀಲು ಪಂಚಾಯಿತಿ ಉಪಾಧ್ಯಕ್ಷೆ ಕಿರಣ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಮರವೂರು, ಸಚ್ಚಿದಾನಂದ ಶೆಟ್ಟಿ ಬೋಂಡಾಲ, ಮಹಾಬಲ ಶೆಟ್ಟಿ ಐಕಳ, ಶೇಖರ ಶೆಟ್ಟಿ ಪೆರ್ಮುದೆ, ಭುಜಂಗ ಶೆಟ್ಟಿ ಪೆರ್ಮುದೆ, ದೊಡ್ಡಯ್ಯ ಮೂಲ್ಯ ಲೋಕಯ್ಯ ಸಾಲಿಯಾನ್, ಜೀವನ್ ಶೆಟ್ಟಿ ಮೂಲ್ಕಿ, ಗಿರೀಶ್ ಎಂ. ಶೆಟ್ಟಿ ಕಟೀಲು, ಉಮೇಶ್ ರಾವ್ ಎಕ್ಕಾರು, ಪಿ.ಸತೀಶ್ ರಾವ್, ಯಾದವ ಕೋಟ್ಯಾನ್ ಪೆರ್ಮುದೆ, ಮಧುಕರ ಅಮೀನ್, ಸುಬ್ರಮಣ್ಯ ಆಚಾರ್ ಕೋರಿಯರ್, ಈಶ್ವರ್ ಕಟೀಲು, ತಿಮ್ಮಪ್ಪ ಕೋಟ್ಯಾನ್, ನಿಲಯ್ಯ ಕೋಟ್ಯಾನ್, ಪೃಥ್ವಿರಾಜ ಆಚಾರ್ಯ ಅನುಗ್ರಹ, ಜೀವನ್ ಶೆಟ್ಟಿ, ಭುವನಾಭಿರಾಮ ಉಡುಪ, ಬಿ.ಡಿ.ರಾಮಚಂದ್ರ ಆಚಾರ್ಯ, ರಾಘವೇಂದ್ರ ಆಚಾರ್ಯ ಬಜಪೆ, ರವಿರಾಜ ಆಚಾರ್ಯ ಬಜಪೆ, ಧರ್ಮದರ್ಶಿ ಹರೀಶ್ ಪೂಜಾರಿ ಉಲ್ಲಂಜೆ, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ಲಕ್ಷ್ಮೀಪ್ರಕಾಶ್ ಶೆಟ್ಟಿ, ಸುರೇಶ್ ಶೆಟ್ಟಿ ಕೊಡೆತ್ತೂರು, ಪ್ರಸಾದ್ ಆಚಾರ್ಯ ಬಜಪೆ ಮತ್ತಿತರರು ಉಪಸ್ಥಿತರಿದ್ದರು.

ಚಿನ್ನದ ಧ್ವಜಸ್ತಂಭ, ಭೋಜನ ಶಾಲೆ,ಕಲ್ಯಾಣ ಮಂಟಪ ಯೋಜನೆ: ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಅನೇಕ ಯೋಜನೆಗಳೀಗೆ ಸಂಕಲ್ಪಿಸಲಾಗಿದೆ. ದೇವಳದಲ್ಲಿ ಚಿನ್ನದ ಧ್ವಜಸ್ತಂಭ ನಿರ್ಮಾಣ, 3000 ಭಕ್ತರು ಕುಳಿತು ಅನ್ನಪ್ರಸಾದ ಸ್ವೀಕರಿಸುವಂತಹ ಭೋಜನ ನೂತನ ಭೋಜನ ಶಾಲೆ, ದೇವಳದಲ್ಲಿ ವರ್ಷಕ್ಕೆ ನೂರಾರು ಸರಳ ವಿವಾಹ ನಡೆಯುವುದರಿಂದ ಲಕ್ಷ್ಮೀಸ್ವಯಂವರ ಕಲ್ಯಾಣ ಮಂಟಪ, ದೇವಳಕ್ಕೆ ಭೇಟಿ ನೀಡುವ ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ ಇನ್ನಿತರ ವ್ಯವಸ್ಥೆಗಳು ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು, ಭಕ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ಅನಂತಪದ್ಮನಾಭ ಆಸ್ರಣ್ಣ ಮನವಿ ಮಾಡಿದರು.