Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಭಕ್ತರಕ್ಷೆ ಎಂದರೆ ಹೀಗೆ

Saturday, 07.07.2018, 3:03 AM       No Comments

ರಾಜಾ ವೃದ್ಧಕ್ಷತ್ರ ತನ್ನ ಪುತ್ರ ಸೈಂಧವನಿಗೆ ‘ಯಾರು ನಿನ್ನ ಶಿರವನ್ನು ಧರೆಗುರುಳಿಸುವನೋ ಅವನ ತಲೆ ಸಹಸ್ರ ಹೋಳಾಗಲಿ’ ಎಂದು ವರವಿತ್ತ. ಇದರಿಂದ ಗರ್ವಿತನಾದ ಸೈಂಧವನಿಗೆ ತನಗೆ ಯಾರೂ ಸರಿಸಾಟಿ ಇಲ್ಲೆಂಬ ಅಹಂಕಾರ ಬಂತು. ಕುರುಕ್ಷೇತ್ರ ಯುದ್ಧದಲ್ಲಿ ಅವನು ಕೌರವನ ಪಕ್ಷದ ಬಲಿಷ್ಟ ಸೇನಾನಾಯಕನೆನಿಸಿದ. ಅಭಿಮನ್ಯುವಿನ ಮರಣಕ್ಕೆ ಕಾರಣನಾದ ಸೈಂಧವನನ್ನು ಸೂರ್ಯಾಸ್ತದೊಳಗೆ ಕೊಲ್ಲುವೆ ಎಂದು ಅರ್ಜುನ ಪ್ರತಿಜ್ಞೆ ಮಾಡಿದ. ಸೈಂಧವನನ್ನು ಕೌರವಾದಿಗಳು ಅಡಗಿಸಿಟ್ಟಿದ್ದರು. ಪಾರ್ಥ ರಣರಂಗದಲ್ಲಿ ಎಲ್ಲಿ ಹುಡುಕಿದರೂ ಸೈಂಧವ ಸಿಗಲಿಲ್ಲ. ಸೂರ್ಯಾಸ್ತವಾಯಿತು. ಅರ್ಜುನ ಅಗ್ನಿ ಪ್ರವೇಶಕ್ಕಣಿಯಾದ. ಸೈಂಧವ ಈ ದೃಷ್ಯ ನೋಡಲೆಂದು ಕೌರವ ಆತನನ್ನು ಅರ್ಜುನನಿಗೆ ಅಡ್ಡಲಾಗಿ ತಂದು ನಿಲ್ಲಿಸಿದ. ಕೂಡಲೇ ಕೃಷ್ಣ, ಪಾರ್ಥ ಇದೋ ಇನ್ನೂ ಸೂರ್ಯ ಇದ್ದಾನೆ. ಸೆ ೖಂಧ ವ ನ ು ಹೆ ೂಡಿ ಎಂದ.

ಅರ್ಜುನನ ಬಾಣದಿಂದ ಸೈಂಧವನ ಶಿರ ದೂರ ಸಾಗಿ ಅಘರ್Â ಕೊಡುವ ವೃದ್ಧಕ್ಷತ್ರನ ಕೈಯ್ಯಲ್ಲಿ ಬಿತ್ತು. ಇದೇನೆಂದು ಆತನು ಅದನ್ನು ಬಿಸುಡಲು ಅವನ ತಲೆ ಸಹಸ್ರಹೋಳಾಯಿತು. ದೇವರು ಹೀಗೆ ಮಾಡಿದ ಭಕ್ತರಕ್ಷೆ! ಎಷ್ಟು ದೊಡ್ಡದಲ್ಲವೇ.

Leave a Reply

Your email address will not be published. Required fields are marked *

Back To Top