More

  ರೈತರ ಸಮಸ್ಯೆಗಳ ಸರಮಾಲೆ: ವಿಜಯವಾಣಿ ಸಿನಿಮಾ ವಿಮರ್ಶೆ

  • ಚಿತ್ರ: ಕಾಸಿನ ಸರ.
  • ನಿರ್ದೇಶನ: ನಂಜುಂಡೇಗೌಡ
  • ನಿರ್ಮಾಣ: ದೊಡ್ಡನಾಗಯ್ಯ.
  • ತಾರಾಗಣ: ವಿಜಯ್​ ರಾವೇಂದ್ರ, ಹರ್ಷಿಕಾ ಪೂಣಚ್ಛ, ಉಮಾಶ್ರೀ, ಹನುಮಂತೇಗೌಡ, ಅಶ್ವತ್ಥ್​ ನೀನಾಸಂ, ಮಂಡ್ಯ ರಮೇಶ್​, ಸಂಗೀತಾ ಮುಂತಾದವರು.

  | ಚೇತನ್ ನಾಡಿಗೇರ್

  ‘ಇದು ಬದಲಾಗಬೇಕು. ನಮ್ಮ ಕಾಲಕ್ಕಾದರೂ ಬದಲಾಗಿ ಎಲ್ಲವೂ ಸರಿ ಹೋಗಬೇಕು …’

  ಹಾಗಂತ ಆಸೆ ಪಡುತ್ತಾನೆ ನಾಯಕ. ಆದರೆ, ಇದು ಸಾಧ್ಯವಾ? ಒಂದು ಕಡೆ ದಲ್ಲಾಳಿಗಳ ಕಾಟ, ಇನ್ನೊಂದು ಕಡೆ ಸಾಲದ ಹೊರೆ, ಮತ್ತೊಂದು ಕಡೆ ರಾಸಾಯನಿಕಗಳ ಹಾವಳಿ, ಸಾಲದ್ದಕ್ಕೆ ವಿದೇಶಿ ಸಂಸ್ಥೆಗಳ ಷಡ್ಯಂತ್ರ… ಇದೆಲ್ಲದರಿಂದ ಈಗಾಗಲೇ ರೈತ ಹೈರಾಣಾಗಿದ್ದಾನೆ. ಈ ಸಮಸ್ಯೆಗಳಿಂದ ಅವನನ್ನು ಮೇಲೆತ್ತುವುದಕ್ಕೆ ಸಾಧ್ಯವಾ? ಈ ಕೆಟ್ಟ ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಸಾಧ್ಯವಾ? ರೈತನನ್ನು ಸ್ವಾವಲಂಬಿ ಮಾಡುವುದಕ್ಕೆ ಸಾಧ್ಯವಾ?

  ಇದನ್ನೂ ಓದಿ: ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?

  ‘ಕಾಸಿನ ಸರ’ ಒಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. ಅದರಲ್ಲೂ ಇಂದಿನ ರೈತರು ಅನುಭವಿಸುತ್ತಿರುವ ಹಲವು ಸಮಸ್ಯೆಗಳ ಕುರಿತಾದ ಚಿತ್ರ. ಭೂಮಿ ಆರೋಗ್ಯವಾಗಿದ್ದರೆ ಬೆಳೆ, ಬೆಳೆ ಆರೋಗ್ಯವಾಗಿದ್ದರೆ ಬದುಕು ಎಂಬ ಆಶಯದ ಮೇಲೆ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಇಲ್ಲಿ ನಾಯಕ ಸುಂದರೇಶ್ (ವಿಜಯ್ ರಾಘವೇಂದ್ರ) ಕೃಷಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಹಳ್ಳಿಗೆ ವಾಪಸ್ಸು ಬಂದವನು. ತಮ್ಮ ಪೂರ್ವಿಕರು ಅನುಸರಿಸಿದ ಸಾವಯವ ಕೃಷಿಯನ್ನು ಅನುಸರಿಸಿ ಬೆಳೆ ಬೆಳೆಯಬೇಕು ಎಂದು ಮುಂದಾದವನು. ಮಿಕ್ಕ ರೈತರೆಲ್ಲ ಒಂದು ಹಾದಿ ತುಳಿದರೆ, ತಾನೇ ಸ್ವತಂತ್ರ ಹಾದಿಯನ್ನು ಕಂಡುಕೊಂಡವನು. ಇದರಿಂದ ಮನೆಯಲ್ಲಿ ಮತ್ತು ಊರಲ್ಲಿ ಏನೆಲ್ಲಾ ಸಂಘರ್ಷಗಳು ಏರ್ಪಡುತ್ತೇವೆ? ಮತ್ತು ಈ ಸಂಘರ್ಷವನನ್ನು ಸುಂದರೇಶ, ತನ್ನ ಪತ್ನಿ ಸಂಪಿಗೆ (ಹರ್ಷಿಕಾ) ಮತ್ತು ತಾಯಿ ತಾಯವ್ವ (ಉಮಾಶ್ರೀ) ಜತೆಗೆ ಹೇಗೆ ಎದುರಿಸಿ, ಮಾದರಿ ಕೃಷಿಕನಾಗುತ್ತಾನೆ ಎಂಬುದು ಕಥೆಯ ತಿರುಳು.

  ಇದನ್ನೂ ಓದಿ: ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

  ಇಲ್ಲಿ ನಿರ್ದೇಶಕ ನಂಜುಂಡೇಗೌಡ ಅವರ ಉದ್ದೇಶ ಮತ್ತು ಕಾಳಜಿ ಮುಖ್ಯವಾಗುತ್ತದೆ. ಸಾವಯವ ಕೃಷಿ ಉಳಿಯಬೇಕು ಮತ್ತು ಫಲವತ್ತತೆ ಹೆಚ್ಚಬೇಕು ಎನ್ನುವ ಕಳಕಳಿ ಗಮನಸೆಳೆಯುತ್ತದೆ. ಇಲ್ಲಿ ಅವರು ಏಕಕಾಲಕ್ಕೆ ಎರಡು ವಿಷಯಗಳನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಒಂದು ಕಡೆ ಕೃಷಿ, ಬೆಳೆ, ಭೂಮಿ ಬಗ್ಗೆ ಮಾತನಾಡುತ್ತಲೇ, ಇನ್ನೊಂದು ಕಡೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಹೇಗೆ ಒಡೆಯುತ್ತಿವೆ, ಸಂಪ್ರದಾಯಗಳು ಹೇಗೆ ನಶಿಸುತ್ತಿವೆ ಎಂದು ಹೇಳಿದ್ದಾರೆ. ಇಷ್ಟೆಲ್ಲ ವಿಷಯಗಳಿರುವುದರಿಂದ ಚಿತ್ರ ಸ್ವಲ್ಪ ದೊಡ್ಡದಾಗಿದೆ. ಅಲ್ಲಲ್ಲಿ ಎಳೆದಂತೆ ಆಗಿದೆ. ಇದೊಂದನ್ನು ಹೊರತುಪಡಿಸಿದರೆ, ಮನೆಮಂದಿ ಎಲ್ಲಾ ಕುಳಿತು ನೋಡುವ ಚಿತ್ರ ‘ಕಾಸಿನ ಸರ’. ಯುವ ರೈತರಾಗಿ ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಉಮಾಶ್ರೀ, ನೀನಾಸಂ ಅಶ್ವತ್ಥ್, ಹನುಮಂತೇಗೌಡ, ಮಂಡ್ಯ ರಮೇಶ್ ಎಲ್ಲರೂ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕಥೆಗೆ ಪೂರಕವಾದ ಪರಿಸರವನ್ನು ಕಟ್ಟಿಕೊಡುವಲ್ಲಿ ಛಾಯಾಗ್ರಾಹಕ ವೇಣು ಗೆದ್ದಿದ್ದಾರೆ.

  ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts