ನವದೆಹಲಿ: ಕಳೆದ ಜುಲೈನಲ್ಲಿ ಸೇನಾ ದಾಳಿಯಲ್ಲಿ ಮೃತಪಟ್ಟ ಕಾಶ್ಮೀರ ಉಗ್ರ ಬುರ್ಹಾನ್ ವಾನಿ, ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಭಾರತದಲ್ಲಿ ಜಿಹಾದಿ ಹೋರಾಟ ಕುರಿತು ರ್ಚಚಿಸಿದ್ದ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಹತ್ಯೆಗೆ ಕೆಲದಿನ ಮೊದಲು ಪಾಕಿಸ್ತಾನಿ ಉಗ್ರ ಹಫೀಜ್ಗೆ ವಾನಿ ಮಾಡಿರುವ ಕರೆಯನ್ನು ಗುಪ್ತಚರ ಅಧಿಕಾರಿಗಳು ಧ್ವನಿಮುದ್ರಿಸಿಕೊಂಡಿದ್ದಾರೆ. ಕಾಶ್ಮೀರ ದಲ್ಲಿರುವ ಲಷ್ಕರ್ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರರಿಗೆ ಹೆಚ್ಚು ಹಣ, ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ವಾನಿ ಮನವಿ ಮಾಡಿದ್ದ. ಇದೇ ವೇಳೆ ವಾನಿಯ ಚಟುವಟಿಕೆ ಬಗ್ಗೆ ಹಫೀಜ್ ಶ್ಲಾಘನೆ ವ್ಯಕ್ತಪಡಿಸಿರುವುದು ಬಹಿರಂಗವಾಗಿದೆ. ಕಾಶ್ಮೀರದಲ್ಲಿ ಲಷ್ಕರ್ ಉಗ್ರರು ಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಈ ಕುರಿತು ಚಿಂತಿಸುವ ಅಗತ್ಯವಿಲ್ಲ. ನಿಮಗೆ ಯಾವ ರೀತಿಯ ಸಹಾಯ ಬೇಕು ಎಂಬುದನ್ನು ತಿಳಿಸಿ. ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಹಫೀಜ್ ಹೇಳಿದ್ದಾನೆ.
-ಏಜೆನ್ಸೀಸ್