ಬಾಗಲಕೋಟೆಯಲ್ಲಿ ಕಲಾಸಿಲ್ಕ್ ವಸ್ತ್ರೋತ್ಸವ

ಮಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ರೀತಿಯ ವಸ್ತುಗಳನ್ನೊಳಗೊಂಡ ‘ಕಲಾಸಿಲ್ಕ್ ವಸ್ತ್ರೋತ್ಸವ 2018- ಹ್ಯಾಂಡ್​ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ವಸ್ತುಗಳ ಮಾರಾಟ’ ಬಾಗಲಕೋಟೆಯ ವಿದ್ಯಾಗಿರಿ ಶ್ರೀ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಬಳಿಯ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. ಶುಕ್ರವಾರದಿಂದ ಪ್ರದರ್ಶನ ಆರಂಭಗೊಂಡಿದ್ದು, ಜ.17ರವರೆಗೆ ನಡೆಯಲಿದೆ.

ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್​ಗಳು ಇವೆ. ಆಂಧ್ರಪ್ರದೇಶ: ಧರ್ವವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ. ಅಸ್ಸಾಂ: ಮೂಗಾ ಎರಿ ಸಿಲ್ಕ್ಸ್. ಬಿಹಾರ್: ಬಾಗಲ್ಪುರ ಸಿಲ್ಕ್ ಟಸ್ಸರ್. ಛತ್ತೀಸ್​ಗಡ್: ಟ್ರಿಬಲ್

ವರ್ಕ್ಸ್ ಕೋಸಾ ಸಿಲ್ಕ್ಸ್. ಗುಜರಾತ್: ಬಾಂದನಿ, ಕಚ್ಚ ಎಂಬ್ರೖೆಡರಿ ಡ್ರೆಸ್ಸ್ ಸ್ಯಾರೀಸ್. ಜಮ್ಮು ಕಾಶ್ಮೀರ: ಎಂಬ್ರೈಡರಿ ಸ್ಯಾರಿಗಳು, ಡ್ರೆಸ್ ಮೆಟೀರಿಯಲ್ಸ್ ಪಾಸ್ಮಿನ ಶಾಲ್. ಕರ್ನಾಟಕ: ಕ್ರೇಪ್ ಪ್ರಿಂಟೆಡ್ ಸ್ಯಾರಿ, ಡ್ರೆಸ್ ಮೆಟೀರಿಯಲ್. ಮಧ್ಯಪ್ರದೇಶ: ಚಂದೇರಿ, ಮಹೇಶ್ವರಿ. ರಾಜಸ್ಥಾನ: ಕೋಟಾ, ಬಾಂದೇಜ್, ಬ್ಲಾಕ್ ಪ್ರಿಂಟ್ಸ್, ಸಂಗ್ನರಿ ಪ್ರಿಂಟ್ಸ್ ಡ್ರೆಸ್ ಮೆಟಿರಿಯಲ್ಸ್ ತೆಲಂಗಾಣ: ಗದ್ವಾಲ, ನಾರಾಯಣಪೇಟೆ ಪೋಚಂಪಳ್ಳಿ. ಉತ್ತರ ಪ್ರದೇಶ: ಜಮ್ದಾನಿ,ಬನಾರಸ್, ಲಕ್ನೋವಿ ಡ್ರೆಸ್ ಮೆಟಿರಿಯಲ್ಸ್. ಪಶ್ಚಿಮ ಬಂಗಾಳ: ಬಾಲುಚರಿ, ತಂಗಾಯಿ, ಕಾಂತಗಳು ರಿಯಾಯಿತಿ ದರದಲ್ಲಿ ಲಭ್ಯ. ಹರಿಯಾಣ ಬೆಡ್ ಕವರ್​ಗಳು, ಕುಶನ್ ಕವರ್ಸ್, ಲಕ್ನೋವಿ ಕುರ್ತಿಸ್ ಡ್ರೆಸ್ ಮೆಟೀರಿಯಲ್ಸ್, ಡೋರ್ ಕರ್ಟನ್ಸ್, ಜೈಪುರಿ ಸ್ಟೋನ್ ಜುವೆಲ್ಲರಿ, ಪರ್ಲ್ಸ್, ವುಡನ್ ಹ್ಯಾಂಡಿಕ್ರಾಫ್ಟ್, ಬಂಜಾರ ಕಲ್ಕತ್ತ ಬ್ಯಾಗ್ಸ್, ಜೈಪುರಿ ರಾಜ್ಹಿ, ಒರಿಸ್ಸಾ ಪೇಟಿಂಗ್, ಹ್ಯಾಂಡಿಕ್ರಾಫ್ಟ್ ಐಟಂ ಕೂಡ ಲಭ್ಯವಿವೆ.

ಮಕ್ಕಳಿಗೆ ಪ್ರತ್ಯೇಕ ಕೌಂಟರ್: ಮಕ್ಕಳಿಗಾಗಿ ಪ್ರತ್ಯೇಕ ಕೌಂಟರ್​ಗಳಿದ್ದು, ಶೇ.100 ಕಾಟನ್ ವೇರ್​ಗಳು ಕೇವಲ 19, 29, 39, 49, 59, 69, 99 ರೂ.ಗೆ ಲಭ್ಯವಿವೆ. ಗ್ರಾಹಕರ ಅನುಕೂಲಕ್ಕಾಗಿ ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಪ್ರದರ್ಶನ ತೆರೆದಿದೆ ಎಂದು ಕಂಪನಿ ವಕ್ತಾರ ಸಂಜಯ್ ತಿಳಿಸಿದ್ದಾರೆ.