More

    ವಿದ್ಯೆ ಮನುಷ್ಯನ ಶ್ರೇಷ್ಠ ಸಂಪತ್ತು

    ಧಾರವಾಡ: ಮನುಷ್ಯನು ಭೂಮಿ, ಧನ, ಆಸ್ತಿಯ ರೂಪದಲ್ಲಿ ಸಂಪಾದನೆ ಮಾಡುತ್ತಾನೆ. ಕ್ರಮೇಣ ಆ ಸಂಪತ್ತು ವ್ಯಯವಾಗುತ್ತ ಹೋಗುತ್ತದೆ. ಆದರೆ, ವಿದ್ಯೆ ಎನ್ನುವ ಸಂಪತ್ತು ಬಳಸಿದಂತೆ ಹೆಚ್ಚಾಗುತ್ತ ಹೋಗುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
    ತಾಲೂಕಿನ ಮುಮ್ಮಿಗಟ್ಟಿಯ ರಾಷ್ಟೊçÃತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಪಾಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳು ವಿದ್ಯಾ ಸಂಪತ್ತನ್ನು ಗಳಿಸುವತ್ತ ಗಮನ ಹರಿಸಬೇಕು. ಅಂದಾಗ ಮಾತ್ರ ಕಲಿತಿರುವ ವಿದ್ಯೆ ಜೀವನಕ್ಕೆ ದಾರಿಯಾಗಬಲ್ಲದು ಎಂದರು.
    ಪ್ರಾಚಾರ್ಯೆ ಅನಿತಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟೊçÃತ್ಥಾನ ವಿದ್ಯಾ ಕೇಂದ್ರ ಹಾಗೂ ವಿದ್ಯಾಲಯದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಅಧ್ಯಕ್ಷತೆ ವಹಿಸಿದ್ದರು.
    ರಾಷ್ಟೊçÃತ್ಥಾನ ಪರಿಷತ್‌ನ ಸದಸ್ಯರಾದ ಅಶೋಕ ಸೊಣಕರ, ಆಡಳಿತಾಽಕಾರಿಗಳಾದ ಕುಮಾರಸ್ವಾಮಿ ಕುಲಕರ್ಣಿ, ಬಸವರಾಜ ಕೌಜಲಗಿ, ಗುರುರಾಜ ಅಗಡಿ, ಎಂ.ಎನ್. ಮಠಪತಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.
    ಪ್ರೇಮಾ ಸಂಗನಾಳಮಠ ನಿರೂಪಿಸಿದರು. ಶಿವರಾಜ ಭಟ್ಟ ಸ್ವಾಗತಿಸಿದರು. ರಾಘವೇಂದ್ರ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts