ಕಾಸರಗೋಡಿನಲ್ಲಿ ಇನ್ನಿಬ್ಬರಿಗೆ ಸೋಂಕು

blank

ಕಾಸರಗೋಡು: ಜಿಲ್ಲೆಯ ಕೂಡ್ಲು ನಿವಾಸಿಗಳಾದ 10 ಹಾಗೂ 8ರ ಹರೆಯದ ಇಬ್ಬರು ಬಾಲಕಿಯರಿಗೆ ಶನಿವಾರ ಕೊವಿಡ್ 19 ಸೋಂಕು ಖಚಿತಗೊಂಡಿದೆ.
ಬಾಲಕಿಯರ ತಾಯಿಯನ್ನು ಈ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಕೊವಿಡ್-19 ಬಾಧಿಸಿ ರೋಗಮುಕ್ತರಾಗಿದ್ದ ಕಾಸರಗೋಡಿನ ಮಹಿಳೆಗೆ ಕಣ್ಣೂರಿನ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದೆ. ತಾಯಿ ಮಗುವನ್ನು 14 ದಿನ ಐಸೊಲೇಶನ್‌ನಲ್ಲಿ ಇರಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

blank

ಜಿಲ್ಲೆಯಲ್ಲಿ 131 ಮಂದಿಗೆ ಚಿಕಿತ್ಸೆ: ಪ್ರಸಕ್ತ ಕಾಸರಗೋಡು ಜಿಲ್ಲೆಯಲ್ಲಿ 10,600 ಮಂದಿ ನಿಗಾದಲ್ಲಿದ್ದು, ಇವರಲ್ಲಿ 10,337 ಮಂದಿ ಮನೆಗಳಲ್ಲಿ ಹಾಗೂ 263 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್-19 ಬಾಧಿಸಿರುವ ಒಟ್ಟು 131 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಒಟ್ಟು 2094 ಮಂದಿಯ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, 1329 ಮಂದಿಯ ವರದಿ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ ಕೊವಿಡ್-19 ಬಾಧಿಸಿದವರಲ್ಲಿ ಶನಿವಾರ 11 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕೇರಳದಲ್ಲಿ ಶನಿವಾರ ಹೊಸದಾಗಿ 10 ಮಂದಿಯಲ್ಲಿ ಕೊವಿಡ್-19 ದೃಢಪಟ್ಟಿದೆ. ಈವರೆಗೆ 373 ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಪ್ರಸಕ್ತ 228 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್ ಕಾಣಿಸಿಕೊಂಡಿದ್ದವರು ಗುಣಮುಖರಾಗುವ ಮೂಲಕ ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳು ಸಂಪೂರ್ಣ ಕರೊನಾ ಮುಕ್ತವಾಗಿವೆ.

Share This Article
blank

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

blank