ದೇವದುರ್ಗ: ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೆ, ಕರ್ನಾಟಕ ರಾಜ್ಯೋತ್ಸವ, ದತ್ತಿ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ.9ರಂದು ಸಂಜೆ 5ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಕಸಾಪ, ದತ್ತಿನಿಧಿ ಸಂಗೀತ, ಸಂಗೀತ ಶಿಕ್ಷಕರ ಬಳಗದಿಂದ ಕಾರ್ಯಕ್ರಮ ಆಯೋಜಿಸಿದ್ದು ಅರಿವಿನ ಮನೆಯ ಪರಮಪೂಜ್ಯ ಬಸವ ದೇವರು ಸಾನ್ನಿಧ್ಯ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಉದ್ಘಾಟಿಸುವರು. ಸಂಗೀತ ಶಿಕ್ಷಕರ ಬಳಗದ ಅಧ್ಯಕ್ಷ ವೆಂಕಟೇಶ ದೊರೆ ತೆಗ್ಗಿಹಾಳ ಅಧ್ಯಕ್ಷತೆವಹಿಸುವರು ಎಂದರು.
ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಕುರಿತು ದತ್ತಿನಿಧಿ ಗೋಷ್ಠಿ ನಡೆಯಲಿದೆ. ಶಾಂತಪುರದ ಪಂ.ಮಾರುತಿ ಗವಾಯಿಗಳ ತಂಡ ಹಾಗೂ ಸ್ಥಳೀಯ ಕಲಾವಿದರು ವಿಶೇಷ ಸಂಗೀತ ಸುಧೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಂ.ಈರಣ್ಣ ಹೂಗಾರ, ಪಂ.ಮಾರುತಿ ಶಾಂತಪುರ ಹಾಗೂ ಚಿತ್ರಕಲಾವಿ ಮಹಾಮುನಿಯಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಸರಕಲ್ ಮುರಾರ್ಜಿ ಶಾಲೆ ಪ್ರಾಚಾರ್ಯ ಶರಣಬಸಯ್ಯ ಹಿರೇಮಠ, ಪಂ.ಮಾರುತಿ ಶಾಂತಪುರ, ಪಂ.ಈರಣ್ಣ ಹೂಗಾರ, ಪಂ.ಯತೀಶ ಮಠಪತಿ ಕವಿತಾಳ, ಸಿದ್ದಲಿಂಗೇಶ, ಹೊನ್ನಲಿಂಗ ರುದ್ರಾಕ್ಷಿ, ದತ್ತಿದಾನಿ ಆದಿಕಮಲಮ್ಮ, ಡಾ.ಜಿ.ಅಮರಪ್ಪ, ತಿರುಪತಿ ಸೂಗೂರು, ವಿರೂಪಾಕ್ಷಪ್ಪ ಗೌಡ, ನಾಗರತ್ನ, ಅಂಬಿಕಾ ಎಸ್.ಗುಡದಿನ್ನಿ, ಉಪನ್ಯಾಸಕ ಮುನಿಯಪ್ಪ ನಾಗೋಲಿ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಮುಖಂಡರಾದ ವೆಂಕಟೇಶ ದೊರೆ, ಭೀಮಣ್ಣ ಭಜಂತ್ರಿ, ಶಿವರಾಜ ರುದ್ರಾಕ್ಷಿ, ಶ್ರೀನಿವಾಸ್ ದಾಸರ್ ಇದ್ದರು.