Navy ಸಿಬ್ಬಂದಿಯನ್ನು ಬಂಧಿಸುವಂತೆ ಗ್ರಾಮಸ್ಥರ ಒತ್ತಾಯ

Navy

ಕಾರವಾರ: ಸೀಬರ್ಡ್ ನೌಕಾನೆಲೆ See bard Navy Project  ಉದ್ಯೋಗಿಗಳು ಹಾಗೂ ಸ್ಥಳೀಯರ ನಡುವಿನ ವಿವಾದ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿದ ನೌಕಾಸೇನೆಯ ಸಿಬ್ಬಂದಿಯನ್ನು ಬಂಧಿಸುವಂತೆ ಎಂಎಲ್‌ಸಿ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಅಮದಳ್ಳಿ ಗ್ರಾಮಸ್ಥರು ಎಎಸ್‌ಪಿ ಜಗದೀಶ ನಾಯ್ಕ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ನೌಕಾಸೇನೆಯಿಂದ ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದು, ಸ್ಥಳೀಯರು ನೌಕಾ ಸಿಬ್ಬಂದಿಯ ಮೇಲೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟರು ಎಂದು ಆರೋಪಿಸಲಾಗಿದೆ.

See bard Navy Project ಸಿಬ್ಬಂದಿ ಬಂಧನಕ್ಕೆ ಮನವಿ 

Navy  ನೌಕಾಸೇನೆಯ ಸಿಬ್ಬಂದಿ ಅಮಿತ್ ಖಂಡೇರಿ ಹಾಗೂ ಇನ್ನೂ 20 ಜನರು ಸೇರಿ ಅಯ್ಯಪ್ಪ ಮಾಲಾಧಾರಿ ಶ್ರೀಕಂಠ ತಾಕು ತಾಂಡೇಲ ಅವರ ಮೇಲೆ ದೊಣ್ಣೆ ಹಾಗೂ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾರೆ. ಆದರೆ, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ, ಕೊಲೆ ಯತ್ನದ ಕಲಂ ಕೈಬಿಡಲಾಗಿದೆ.

ಅವರ ವಿರುದ್ಧ ಕೊಲೆ ಯತ್ನದ ಕಲಂ ಹಾಕಿ ನೌಕಾ ಸಿಬ್ಬಂದಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಗೌಡ, ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಹಾಗೂ ಇತರರು ಇದ್ದರು.

50 ಸಾವಿರಕ್ಕೆ ಬೇಡಿಕೆ ಇಟ್ಟರು: Navy  Press Note

ಜ.12 ರಂದು ಬೈಕ್‌ಗಳ ಅಪಘಾತ ಸಂಭವಿಸಿದಾಗ ಗಾಯಗೊಂಡ ಅಯ್ಯಪ್ಪ ಮಾಲಾಧಾರಿ ಅವರನ್ನು ನೌಕಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ, ಅಷ್ಟು ಹೊತ್ತಿಗಾಗಲೇ ಸೇರಿದ ಸ್ಥಳೀಯರು ಗುಂಪುಕಟ್ಟಿಕೊಂಡು ನೌಕಾ ಸಿಬ್ಬಂಽಯನ್ನು ಅನಧಿಕೃತವಾಗಿ ಬಂಧನದಲ್ಲಿಟ್ಟುಕೊಂಡರು. 50 ಸಾವಿರ ರೂ. ಪರಿಹಾರ ಕೊಡುವಂತೆ ಆಗ್ರಹಿಸಿದರು ಎಂದು ನೌಕಾಸೇನೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಘಟನೆ ಹಿನ್ನೆಲೆ

ಮುದಗಾ ಸಮೀಪ ಜ.12 ರಂದು ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿತ್ತು. ಒಂದು ಬೈಕ್‌ನಲ್ಲಿ ಹಾರವಾಡದ ಅಯ್ಯಪ್ಪ ಮಾಲಾಧಾರಿ ಶ್ರೀಕಂಠ ತಾಂಡೇಲ ಅವರಿದ್ದರೆ ಇನ್ನೊಂದು ಬೈಕ್‌ನಲ್ಲಿ ಅಮಿತ್ ಖಂಡೇರಿ ಎಂಬ ನೌಕಾ ಸಿಬ್ಬಂದಿ ಇದ್ದರು. ಈ ಸಂದರ್ಭದಲ್ಲಿ ವಾದ ವಿವಾದ ನಡೆದಿತ್ತು.

ಗಾಯಗೊಂಡಿದ್ದ ಶ್ರೀಕಂಠ ಅವರು ತಮ್ಮ ಸಹಚರ ಶ್ರೀನಿವಾಸ ಕೊಡಾರಕರ್ ಅವರ ಬೈಕ್ ಮೇಲೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ವಾಪಸ್ ಬರುವಾಗ ನೌಕಾ ಸಿಬ್ಬಂದಿ ಅಮಿತ್ ಖಂಡೇರಿ ಹಾಗೂ ಇನ್ನೂ 20 ಜನ ಸೇರಿಕೊಂಡು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಶ್ರೀನಿವಾಸ ಕೊಡಾರಕರ್ ದೂರು ದಾಖಲಿಸಿದ್ದರು.

ನೌಕಾ ಸೇನೆಯ ಸಿಬ್ಬಂದಿ ಯೋಗೇಶ ಕುಮಾರ್ ಪ್ರತಿ ದೂರು ದಾಖಲಿಸಿದ್ದು, ಶ್ರೀನಿವಾಸ ಕೊಡಾರಕರ್ ಹಾಗೂ ಇತರರು ನೌಕಾ ಸಿಬ್ಬಂದಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ತಮ್ಮ ಬಳಿ 50 ಸಾವಿರ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟರು ಎಂದು ದೂರಿದ್ದಾರೆ. ಆದರೆ, ಘಟನೆ ಅಷ್ಟಕ್ಕೇ ಮುಗಿದಿಲ್ಲ. ಜ.12 ರ ರಾತ್ರಿಯಿಂದ 13 ರ ಮಧ್ಯಾಹ್ನದವರೆಗೆ ಮುದಗಾ ಸೀಬರ್ಡ್ ನೌಕರರ ಗೇಟ್ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: https://www.vijayavani.net/yakshagana-umashree

https://www.youtube.com/watch?v=YbO5VzdzV1U

https://www.youtube.com/watch?v=YbO5VzdzV1U
Share This Article

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…

ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips

ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…