ಕಾರವಾರ ಕಡಲ ದುರಂತ ಪ್ರಕರಣ: ಸಮುದ್ರದಲ್ಲಿ ಮಗುವಿನ ಮೃತದೇಹ ಪತ್ತೆ, ಶೋಧ ಮುಂದುವರಿಕೆ

ಕಾರವಾರ: ಕಾರವಾರದ ಕಡಲಲ್ಲಿ ಸೋಮವಾರ ನಡೆದ ದೋಣಿ ದುರಂತದ ವೇಳೆ ನಾಪತ್ತೆಯಾಗಿದ್ದ ಮಗುವೊಂದರ ಮೃತದೇಹ ಇಂದು ಬೆಳಗ್ಗೆ ಲೈಟ್​ ಹೌಸ್​ ಸಮೀಪ ಸಮುದ್ರದಲ್ಲಿ ಪತ್ತೆಯಾಗಿದೆ.

ಲೈಟ್ ಹೌಸ್ ಪ್ರದೇಶದಲ್ಲಿ ನೌಕಾಪಡೆ ಹೆಲಿಕಾಪ್ಟರ್ ಸುತ್ತಾಟ ನಡೆಸುತ್ತಿದ್ದ ವೇಳೆ ಮಗುವಿನ ದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎರಡು ದೋಣಿಗಳನ್ನು ರವಾನಿಸಿ, ಮೃತದೇಹ ತರಲಾಗಿದೆ.

ಮೃತ ದೇಹಗಳ ಪತ್ತೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ, ಟ್ಯಾಗೊರ್ ಬೀಚ್ ಸಮಿತಿ ಸಿಬ್ಬಂದಿ, ಲೈಫ್​ ಗಾರ್ಡ್ಸ್​ನ ಐದು ತಂಡಗಳನ್ನು ರಚಿಸಲಾಗಿದೆ. ಇವು ಕಡಲುತೀರದಲ್ಲಿ ಶೋಧ ನಡೆಸುತ್ತಿವೆ. ಇಂಡಿಯನ್ ಕೋಸ್ಟ್ ಗಾರ್ಡ್ ನ c-155, c-420, c- 123 ಬೋಟುಗಳು ಶೋಧ ಕಾರ್ಯದಲ್ಲಿ ತೊಡಗಿವೆ.

ಅಲ್ಲದೆ, ICGS ನ ಅಮರ್ಥ್ಯ ನೌಕೆ, ನೌಕಾಸೇನೆಯ ತಿಲಂಚಾಂಗ್ ದೊಡ್ಡ ಬೋಟುಗಳು ರಾತ್ರಿಯಿಡೀ ಕಾರ್ಯ ನಿರ್ವಹಿಸುತ್ತಿವೆ.