ಸಾರಸ್ವತ ಲೋಕಕಕ್ಕೆ ಕಾರ್ನಾಡ್ ಕೊಡುಗೆ ಅನನ್ಯ

ಯಾದಗಿರಿ: ನಾಡಿನ ಕೀರ್ತಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಏರಿಸುವಲ್ಲಿ ಗಿರಿಶ ಕಾರ್ನಾಡ್​ರ ಕೊಡುಗೆ ಅಪಾರವಾಗಿದೆ ಇವರ ನಿಧನದಿಂದಾಗಿ ಕನ್ನಡ ರಾಜ್ಯದ ಸಂಪತ್ತು ನಷ್ಟವಾದಂತಾಗಿದೆ ಎಂದು ಕರವೇ ಜಿಲ್ಲಾ ಅಧ್ಯಕ್ಷ ಟಿ.ಎನ್. ಭೀಮುನಾಯಕ ಸಂತಾಪ ವ್ಯಕ್ತಪಡಿಸಿದರು.

ನಗರದ ಕರವೇ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 53ನೇ ಜನ್ಮದಿನದ ಅಂಗವಾಗಿ ಜರುಗಿದ ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಜನ್ಮದಿನವಾದ ಇಂದು ಅದ್ದೂರಿಯಾಗಿ ಆಚರಿಸಲು ಸಭೆ ಸೇರಲಾಗಿತ್ತು ದಿಢೀರನೆ ಬಂದ ಕಾರ್ನಾಡ್​​ ನಿಧನದ ಸುದ್ದಿಯಿಂದಾಗಿ ಅದ್ದೂರಿ ಜನ್ಮ ದಿನಾಚರಣೆಗೆ ಬದಲಿಗೆ ಸಂತಾಪ ಸೂಚಿಸಿ ಸಭೆ ಮುಂದೂಡಲಾಗಿದೆ ಎಂದರು.

ನಂತರ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಗೆ ತೆರಳಿ ಸಾಂಕೇತಿಕವಾಗಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್, ಡಾ. ಮಹೇಶರೆಡ್ಡಿ ಮಾಲಿ ಪಾಟಿಲ್ ಹತ್ತಿಕುಣಿ, ಕರವೇ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಮಹಾವೀರ ಲಿಂಗೇರಿ, ಸಾಹೇಬಗೌಡ ನಾಯಕ, ಮಲ್ಲು ಹಾಲಗೇರಾ, ರವಿ ಬಾಚವಾರ, ಸೈದಪ್ಪ ಗೌಡಗೇರಾ, ರಿಯಾಜ್ ಪಟೇಲ್, ವೆಂಕಟರೆಡ್ಡಿ ಕೌಳೂರು, ರಡ್ಡಿ ಬಾಚವಾರ, ಭೀಮು ಸಾತನೂರು, ಅಬ್ದುಲ್ ಗಫೂರ್, ರಾಜು ಗೌಡಗೇರಾ, ಚಂದ್ರು ಗೋಪಾಳಪುರ, ಚಂದ್ರಾಮ ಗೌಡಗೇರಾ ಇತರರಿದ್ದರು.

Leave a Reply

Your email address will not be published. Required fields are marked *