ಕಾರುಣ್ಯಾ ಈಗ ಆಗರ್ಭ ಶ್ರೀಮಂತೆ; ರೇಮೊ ಚಿತ್ರದಲ್ಲಿ ಮಾಡರ್ನ್ ಅವತಾರ..

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. ಶೂಟಿಂಗ್ ವಿಚಾರದಲ್ಲಿಯೂ ಸಿನಿಮಾ ಅಷ್ಟೇ ಅದ್ದೂರಿಯಾಗಿಯೇ ಮೂಡಿಬರುತ್ತಿದೆ. ಇದೀಗ ಇದೇ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ ನಟಿ ಕಾರುಣ್ಯಾ ರಾಮ್ ಅವರದ್ದಿಲ್ಲಿ ಅತೀ ಶ್ರೀಮಂತ ಮನೆತನದ ಹುಡುಗಿಯ ಪಾತ್ರ. ಇಶಾನ್ ಮತ್ತು ಆಶಿಕಾ ರಂಗನಾಥ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ರಾಕ್​ಸ್ಟಾರ್​ವೊಬ್ಬನ ಜೀವನದ ಕಥೆಯನ್ನು ತೆರೆದಿಡಲಿದೆ. ಕಮರ್ಷಿಯಲ್ ಅಂಶಗಳನ್ನು ಬೆರೆಸಿಕೊಂಡೇ ಕಥೆ ಸಿದ್ಧಮಾಡಿರುವ ನಿರ್ದೇಶಕ ಪವನ್, ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿಸುವ ಹಂತದಲ್ಲಿದ್ದಾರೆ. … Continue reading ಕಾರುಣ್ಯಾ ಈಗ ಆಗರ್ಭ ಶ್ರೀಮಂತೆ; ರೇಮೊ ಚಿತ್ರದಲ್ಲಿ ಮಾಡರ್ನ್ ಅವತಾರ..