ಹರಪನಹಳ್ಳಿ: ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡವು ಪ್ರಮುಖ ಭಾಷೆಯಾಗಿದೆ ಎಂದು ಬಿಇಒ ಎಚ್.ಲೇಪಾಕ್ಷಪ್ಪ ಹೇಳಿದರು.
ಇದನ್ನೂ ಓದಿ:ಫ್ಲೋರಿಡಾದ ಲೇಕ್ಲ್ಯಾಂಡ್ನಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ ಆಯೋಜನೆ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ದಿ.ಕಂಚಿಕೆರೆ ಬಿದ್ರಿ ಸಿದ್ದಪ್ಪ ವೀರಮ್ಮ ಸ್ಮಾರಕ ಹಾಗೂ ದಿ. ಎಚ್.ಕೊಟ್ರಪ್ಪ ಬಸಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪದ್ಬರಿತವಾದ ಕರ್ನಾಟಕ ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಹಚ್ಚ ಹಸಿರಿನಿಂದ ಹೊದಿಕೆಯಾದ ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂಧರ್ಯದಿಂದ ಕೂಡಿದೆ. ಪ್ರಾಚೀನ ದೇವಾಲಯಗಳ ಭವ್ಯ ಇತಿಹಾಸ ಹೊಂದಿದೆ. ಕಾಯಕನಿಷ್ಠೆಯನ್ನು ಹೊಂದಿದ್ದ ಬಸವಣ್ಣ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ ಅವರಂಥ ಶರಣರು ನೇರ ನಿಷ್ಠೂರ ಮಾತುಗಳಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಗೆ ಧಕ್ಕೆಯಾಗಿದೆ. ಮೂಲ ಕನ್ನಡದ ಪದಗಳು ಬದಲಾವಣೆಯಾಗಿ ಇಂಗ್ಲೀಷ್ ಆವರಿಸಿದೆ. ಪ್ರತಿ 40 ಕಿಮಿಗೆ ಭಾಷೆ ಹಾಗೂ ಸಂಸ್ಕೃತಿ ಬದಲಾಗುತ್ತದೆ ಎಂದು ತಿಳಿಸಿದರು.