More

    PHOTOS| ಬಹುಕಾಲದ ಗೆಳತಿಯೊಂದಿಗೆ ಜೀವನದ ಹೊಸ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾ ಆಟಗಾರ ಕರುಣ್​ ನಾಯರ್​

    ನವದೆಹಲಿ: ಟೀಮ್​ ಇಂಡಿಯಾ ಪರ ಟೆಸ್ಟ್​ ಇತಿಹಾಸದಲ್ಲಿ ವೀರೇಂದ್ರ ಸೆಹ್ವಾಗ್​ ಬಿಟ್ಟರೆ ತ್ರಿಶತಕ ಬಾರಿಸಿದ ಇನ್ನೊಬ್ಬ ಆಟಗಾರನೆಂದರೆ ಕರುಣ್​ ನಾಯರ್​. ಸದ್ಯ ಕ್ರಿಕೆಟ್​ನಿಂದ ಕೊಂಚ ಬಿಡುವು ಪಡೆದುಕೊಂಡಿರುವ ನಾಯರ್​ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ಹೌದು, ತಮ್ಮ ಬಹುಕಾಲದ ಗೆಳತಿ ಸನಾಯಾ ತಂಕರಿವಾಲಾ ಎಂಬುವರನ್ನು ರಾಜಸ್ಥಾನದ ಉದಯ್​ಪುರದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ವರಿಸಿದ್ದಾರೆ.

    ಶ್ರೇಯಸ್​ ಅಯ್ಯರ್​, ವರುಣ್​​ ಆ್ಯರೂನ್​, ಯಜುವೇಂದ್ರ ಚಹಾಲ್​, ಶಾರ್ದುಲ್ ಠಾಕೂರು ಮತ್ತು ಅಂಜಿಕ್ಯ ರಹಾನೆ ಸೇರಿದಂತೆ ಇನ್ನಿಳಿದ ಸಹ ಆಟಗಾರರು ನಾಯರ್​ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿ ತಮ್ಮ ಇನ್​ಸ್ಟಾಗ್ರಾಂಗಳಲ್ಲಿ ಮದುವೆ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಶುಭಕೋರಿದ್ದಾರೆ.

    ಕರುಣ್​ ನಾಯರ್​ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋಗಳನ್ನು ಅಪ್​ಲೋಡ್​ ಮಾಡಿ ಶುಭ ಹಾರೈಸಿದ್ದಾರೆ. ವಿಶೇಷವೆಂದರೆ ಟೀಮ್​ ಇಂಡಿಯಾ ಟೆಸ್ಟ್​ ತಂಡದ ಉಪನಾಯಕ ಅಂಜಿಕ್ಯ ರಹಾನೆ ಅವರು ಪತ್ನಿ ರಾಧಿಕಾ ಧುಪವ್ಕರ್​ ಹಾಗೂ ಪುಟ್ಟ ಮಗಳಿನೊಂದಿಗೆ ಸಂಭ್ರಮದಲ್ಲಿ ಭಾಗವಹಿಸಿ ನವಜೋಡಿಗೆ ಆಶೀರ್ವದಿಸಿದ್ದಾರೆ.

    ಕಳೆದ ವರ್ಷ ಜೂನ್​ ತಿಂಗಳಲ್ಲಿ ಸನಾಯಾರೊಂದಿಗಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಫೋಟೋ ಹಾಕಿ ಜಾಲತಾಣದಲ್ಲಿ ನಾಯರ್​ ಘೋಷಿಸಿದ್ದರು.

    ರಾಜಸ್ಥಾನ ಮೂಲದ ನಾಯರ್​, ದೇಶಿ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡದ ಪರ ಆಡುತ್ತಿದ್ದಾರೆ. ಗಮನಾರ್ಹವೆಂದರೆ ಡಿಸೆಂಬರ್​ 2016 ಚೆನ್ನೈನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ನಲ್ಲಿ 303 ರನ್​ ಬಾರಿಸಿ ಎಲ್ಲರ ಹುಬ್ಬೇರಿಸಿದ್ದರು. ಆದರೂ ನಾಯರ್​ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲು ವಿಫಲರಾಗಿದ್ದಾರೆ. 2017ರ ಮಾರ್ಚ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದೆ ನಾಯರ್​ ಅವರ ಕೊನೆಯ ಟೆಸ್ಟ್ ಪಂದ್ಯವಾಗಿದೆ.

    ಒಟ್ಟು 6 ಟೆಸ್ಟ್​ಗಳಿಂದ 374 ರನ್​ ಗಳಿಸಿರುವ ನಾಯರ್​ ಎರಡು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲೂ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದು, ಕೇವಲ 46 ರನ್​ ಗಳಿಸಿದ್ದಾರೆ. (ಏಜೆನ್ಸೀಸ್​)

    https://www.instagram.com/p/B7eFMfrp2bD/?utm_source=ig_embed

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts