ಶೃಂಗೇರಿ: ಕಾರ್ತಿಕ ಮಾಸದ ಪ್ರಥಮ ಸೋಮವಾರ ಪ್ರಯುಕ್ತ ನರಸಿಂಹವನದ ಗುರುನಿವಾಸದಲ್ಲಿ ಶ್ರೀಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು. ಯತಿಗಳು ಸಲ್ಲಿಸಿದ ಪೂಜೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಕಿರಿಯ ಶ್ರೀಗಳು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಆನೇಕ ವಿಧದ ಲ, ಪುಪ್ಪ-ಪಂಚಾಮೃತ ಅಭಿಷೇಕಗಳಿಂದ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭವ್ಯವಾದ ಚಿನ್ನದ ಮಂಟಪದಲ್ಲಿ ಚಂದ್ರಮೌಳೀಶ್ವರ, ರತ್ನಗರ್ಭ ಗಣಪತಿ, ಆದಿಶಂಕರಾಚಾರ್ಯರು, ಸರಸ್ವತಿ, ಮಹಾಲಕ್ಷ್ಮೀ, ಬಂಗಾರದ ಮತ್ತು ಸ್ಫಟಿಕದ ಶ್ರೀಚಕ್ರಗಳು, ಸೀತಾರಾಮ, ಗಣಪತಿ, ಜಗದ್ಗುರುಗಳಾದ ಶ್ರೀ ನೃಸಿಂಹಭಾರತೀ ಹಾಗೂ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ಶ್ರೀ ಆದಿಶಂಕರ ಭಗತ್ಪಾದರು ಶ್ರೀಮಠದಲ್ಲಿ ಪ್ರತಿದಿನ ಭಗವತ್ ಆರಾಧನೆ ನಡೆಸುವ ಸಂಕಲ್ಪದಿಂದ ಶ್ರೀ ಶಾರದಾಂಬೆ ಹಾಗೂ ಶ್ರೀ ಚಂದ್ರಮೌಳೀಶ್ವರರ ಪೂಜೆ ನಡೆಸಬೇಕು ಎಂಬ ಅಪ್ಪಣೆ ಮಾಡಿ ಶ್ರೀ ಮಠದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯರಿಗೆ ಶ್ರೀ ಚಂದ್ರಮೌಳೀಶ್ವರ ಲಿಂಗ ಹಾಗೂ ಶ್ರೀ ರತ್ನಗರ್ಭ ಗಣಪತಿ ಅನುಗ್ರಹಿಸಿದ್ದರು.
ಚಂದ್ರಮೌಳೀಶ್ವರ ಸ್ವಾಮಿಗೆ ಕಾರ್ತಿಕ ಪೂಜೆ
ಶ್ರೀಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಕಾರ್ತಿಕ ಮಾಸದ ಪ್ರಥಮ ಸೋಮವಾರ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.