9 ಜನ ಕನ್ನಡಿಗರು ಸೇಫ್

ಯಾದಗಿರಿ: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಲ್ಲಿ ಕನ್ನಡಿಗರ 9 ಜನ ಪ್ರವಾಸಿಗರು ಸಿಕ್ಕು ಹಾಕಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಶಹಾಪುರ ನಗರದಿಂದ ಸೆ. 20 ರಂದು ರಾತ್ರಿ 9 ಜನರು ಪ್ರವಾಸಕ್ಕಾಗಿ ಹಿಮಚಲ ರಾಜ್ಯದ ಮನಾಲಿಗೆ ತೆರಳಿದ್ದರು. ಅಲ್ಲಿಂದ ಅಮೃತಸರ್ಗೆ ತೆರಳುವ ಸಂದರ್ಭದಲ್ಲಿ ರೈಸನ್ ಎಂಬ ಪಟ್ಟಣದಲ್ಲಿನ ಸೇತುವೆಯಲ್ಲಿ ಸಿಕ್ಕುಹಾಕಿಕೊಂಡಿದ್ದರು. ಸಧ್ಯ 9 ಜನ ಸೇಫ್ ಆಗಿದ್ದು ಪ್ರವಾಸ ರದ್ದುಪಡಿಸಿ ಹಿಮಾಚಲ ಪ್ರದೇಶದ ಕಲ್ಲು ನಗರದಿಂದ ಬುಧುವಾರ ರಾತ್ರಿ ದೆಹಲಿಗೆ ಆಗಮಿಸುವುದಾಗಿ `ವಿಜಯವಾಣಿ’ಗೆ ಪ್ರವಾಸಿಗರ ತಂಡದ ಸದಸ್ಯ ಅವಿನಾಶ ಸಿನ್ನೂರ ತಿಳಿಸಿದ್ದಾರೆ. ಸಧ್ಯ ಮಳೆಯಿಂದ ಸೇಫ್ ಆಗಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ.