ಟ್ರಯಾಥ್ಲಾನ್​ನಲ್ಲಿ ಕರ್ನಾಟಕದ ಶ್ರೀನಿವಾಸ್​ ಪ್ರಭು ಸಾಧನೆ: ಐರನ್​ಮ್ಯಾನ್​ ಸ್ಪರ್ಧೆಗೆ ಸಿದ್ಧತೆ!

blank

ಬೆಂಗಳೂರು : ಕರ್ನಾಟಕದ ಶ್ರೀನಿವಾಸ್​ ಪ್ರಭು ಮುಂಡ್ಕೂರು ಜೂನ್​ 15ರಂದು ಚೆನ್ನೈನಲ್ಲಿ ಟ್ರೈ2ಚಾಂಪ್​ ಆಯೋಜಿಸಿದ್ದ ಟ್ರಯಾಥ್ಲಾನ್​ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಿ ಗಮನಸೆಳೆದಿದ್ದಾರೆ. ವಿಶ್ವದ ಅತ್ಯಂತ ಕಠಿಣ ಕ್ರೀಡೆಗಳಲ್ಲಿ ಒಂದಾಗಿರುವ ಟ್ರಯಾಥ್ಲಾನ್​ನಲ್ಲಿ ಈಜು, ಸೈಕ್ಲಿಂಗ್​ ಮತ್ತು ಓಟವನ್ನು ಒಳಗೊಂಡ ಸ್ಪ್ರಿಂಟ್​ ಟ್ರಯಾಥ್ಲಾನ್​ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇದರಲ್ಲಿ ಸ್ವಲ್ಪವೂ ಬಿಡುವು ಇಲ್ಲದೆ 750 ಮೀಟರ್ ಈಜು, 20 ಕಿಲೋಮೀಟರ್​ ಸೈಕ್ಲಿಂಗ್​ ಮತ್ತು 5 ಕಿಲೋಮೀಟರ್ ಓಟವನ್ನು ಪೂರೈಸಬೇಕಾಗುತ್ತದೆ ಮತ್ತು ಇದು ದೈಹಿಕ ಕ್ಷಮತೆಗೆ ಅತ್ಯಂತ ಸವಾಲುದಾಯಕವಾಗಿರುತ್ತದೆ.

ಬೆಂಗಳೂರಿನ 25 ವರ್ಷದ ಶ್ರೀನಿವಾಸ್​ ಪ್ರಭು, ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದಾರೆ. ಭಾಗವಹಿಸಿದ ಮೊದಲ ಟ್ರಯಾಥ್ಲಾನ್​ನಲ್ಲೇ ಅವರು ಯಶಸ್ವಿಯಾಗಿ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆ ಪಡೆದಿದ್ದಾರೆ. ನವೆಂಬರ್​ನಲ್ಲಿ ಗೋವಾದಲ್ಲಿ ನಡೆಯಲಿರುವ ಐರನ್​ಮ್ಯಾನ್​ (3.8 ಕಿಲೋಮೀಟರ್ ಈಜು, 180 ಕಿಲೋಮೀಟರ್​ ಸೈಕ್ಲಿಂಗ್​, 42.2 ಕಿಲೋಮೀಟರ್ ಓಟ)ಸ್ಪರ್ಧೆಯಲ್ಲಿ ಭಾಗವಹಿಸಲು ಅವರು ಈಗ ಸಿದ್ಧತೆ ನಡೆಸುತ್ತಿದ್ದಾರೆ.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…