18 C
Bangalore
Friday, December 6, 2019

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಗೆಲುವು ಕಂಡ ಕರ್ನಾಟಕ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಸೂರತ್: ಯುವ ಬ್ಯಾಟ್ಸ್​ಮನ್ ದೇವದತ್ ಪಡಿಕಲ್ (63 ರನ್, 30ಎಸೆತ, 7 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ಫಲವಾಗಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ, ಜಾರ್ಖಂಡ್ ತಂಡವನ್ನು 13 ರನ್​ಗಳಿಂದ ಸೋಲಿಸಿತು. ಇದರಿಂದ ಮನೀಷ್ ಪಾಂಡೆ ಬಳಗ ಸೆಮಿಫೈನಲ್ ಹಂತಕ್ಕೆ ಮತ್ತಷ್ಟು ಸನಿಹವಾಗಿದೆ. ಮತ್ತೊಂದೆಡೆ, ಸತತ ಎರಡನೇ ಸೋಲು ಕಂಡ ಜಾರ್ಖಂಡ್ ಮುಂದಿನ ಹಾಕಿ ಕಠಿಣಗೊಂಡಿತು.

ಮೊದಲು ಬ್ಯಾಟಿಂಗ್ ಕರ್ನಾಟಕ ತಂಡ, ದೇವದತ್ ಪಡಿಕಲ್ ಹಾಗೂ ಕೆಎಲ್ ರಾಹುಲ್ (36 ರನ್, 28 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್​ಗೆ 189 ರನ್ ಗಳಿಸಿತು. ಪ್ರತಿಯಾಗಿ ಜಾರ್ಖಂಡ್ ತಂಡ, ವಿರಾಟ್ ಸಿಂಗ್ (76* ರನ್, 44 ಎಸೆತ, 3 ಬೌಂಡರಿ, 6 ಸಿಕ್ಸರ್) ಅಂತಿಮ ಹಂತದವರೆಗೂ ಹೋರಾಡಿದರೂ 5 ವಿಕೆಟ್​ಗೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.

ವಿರಾಟ್ ಹೋರಾಟ ವ್ಯರ್ಥ: ಬೃಹತ್ ಮೊತ್ತ ಬೆನ್ನಟ್ಟಿದ ಜಾರ್ಖಂಡ್ ತಂಡ ಮಂದಗತಿಯ ಆರಂಭ ಕಂಡಿತು. ಉತ್ಕರ್ಷ್ ಸಿಂಗ್ (11) ಎರಡು ಬೌಂಡರಿ ಸಿಡಿಸಿ ಉತ್ತಮ ಆರಂಭ ಗಿಟ್ಟಿಸಲು ಯತ್ನಿಸಿದರೂ ಜೆ.ಸುಚಿತ್ ಅವಕಾಶ ನೀಡಲಿಲ್ಲ. ಬಳಿಕ ಆನಂದ್ ಸಿಂಗ್ (41) ಜತೆಯಾದ ವಿರಾಟ್ ಸಿಂಗ್ ಬಿರುಸಿನ ಬ್ಯಾಟಿಂಗ್​ಗೆ ಚಾಲನೆ ನೀಡಿದರು. ಈ ಜೋಡಿ 2ನೇ ವಿಕೆಟ್​ಗೆ 46 ರನ್ ಕಲೆಹಾಕಿ ಬೇರ್ಪಟ್ಟಿತು. ಬಳಿಕ ಬಂದ ಸೌರಭ್ ತಿವಾರಿ (1) ಹಾಗೂ ದೇವಬ್ರಾತ್ ಕುಮಾರ್ (13), ವಿರಾಟ್​ಗೆ ಅಗತ್ಯ ಸಾಥ್ ನೀಡಲಿಲ್ಲ. ಇದರ ನಡುವೆಯೂ ಏಕಾಂಗಿ ಹೋರಾಟ ಮುಂದುವರಿಸಿದ ವಿರಾಟ್ ಸಿಂಗ್, ಸುಮಿತ್ ಕುಮಾರ್ (23) ಜತೆ 73 ರನ್ ಸೇರಿಸಿ ಅಂತಿಮ ಕ್ಷಣದವರೆಗೆ ಹೋರಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಕರ್ನಾಟಕ: 6 ವಿಕೆಟ್​ಗೆ 189 (ಪಡಿಕಲ್ 63, ರಾಹುಲ್ 36, ಮನೀಷ್ ಪಾಂಡೆ 16, ಕರುಣ್ 19, ಪವನ್ ದೇಶಪಾಂಡೆ 14, ಪ್ರವೀಣ್ ದುಬೆ 10, ಸುಚಿತ್ 11*, ಸೋನು ಸಿಂಗ್ 28ಕ್ಕೆ 3, ಮೋನು ಸಿಂಗ್ 29ಕ್ಕೆ 2). ಜಾರ್ಖಂಡ್: 5 ವಿಕೆಟ್​ಗೆ 176 (ವಿರಾಟ್ ಸಿಂಗ್ 76*, ಆನಂದ್ ಸಿಂಗ್ 41, ದೇವಬ್ರಾತ್ 11, ಸುಮಿತ್ 11, ಪವನ್ ದೇಶಪಾಂಡೆ 34ಕ್ಕೆ 2, ಪ್ರವೀಣ್ ದುಬೆ 19ಕ್ಕೆ 1, ಸುಚಿತ್ 14ಕ್ಕೆ 1).

ರಾಜ್ಯಕ್ಕೆ ಸೋನು ಸಿಂಗ್ ಕಡಿವಾಣ

ಪಡಿಕಲ್ ನಿರ್ಗಮನದ ಬಳಿಕ ಕರ್ನಾಟಕದ ರನ್​ವೇಗಕ್ಕೆ ಸ್ಪಿನ್ನರ್ ಸೋನು ಸಿಂಗ್ ಬ್ರೇಕ್ ಹಾಕಿದರು. ಮೊದಲ 10 ಓವರ್​ಗಳಲ್ಲೇ ಸರಾಸರಿ 11ರಂತೆ ರನ್ ಗಳಿಸಿದ್ದ ಕರ್ನಾಟಕ ತಂಡ ದಿಢೀರ್ ಕುಸಿತ ಅನುಭವಿಸಿತು. ಕೆಎಲ್ ರಾಹುಲ್ ಅರ್ಧಶತಕ ಪೂರೈಸುವ ಮೊದಲೇ ಔಟಾದರೆ, ನಾಯಕ ಮನೀಷ್ ಪಾಂಡೆ (16) ಹಾಗೂ ಅನುಭವಿ ಕರುಣ್ ನಾಯರ್​ಗೆ (19) ಸೋನು ಸಿಂಗ್ ಡಗ್​ಔಟ್ ದಾರಿ ತೋರಿದರು. ಬಳಿಕ ಪವನ್ ದೇಶಪಾಂಡೆ (10) ಹಾಗೂ ಪ್ರವೀಣ್ ದುಬೆ (10) ಕೂಡ ವಿಫಲರಾದರು.

ಪಡಿಕಲ್-ರಾಹುಲ್ ಉತ್ತಮ ಆರಂಭ

ಕರ್ನಾಟಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕಲ್ ಜೋಡಿ ಉತ್ತಮ ಆರಂಭ ನೀಡಿತು. ಈ ಜೋಡಿ 9ನೇ ಓವರ್ ವೇಳೆಗೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಜಾರ್ಖಂಡ್ ಫೀಲ್ಡರ್​ಗಳು ನೀಡಿದ ಜೀವದಾನದ ಲಾಭ ಗಿಟ್ಟಿಸಿಕೊಂಡ ಪಡಿಕಲ್ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಜೋಡಿ ಎದುರಿಸಿದ 57 ಎಸೆತಗಳಲ್ಲಿ 114 ರನ್​ಗಳಿಸಿ ಬೇರ್ಪಟ್ಟಿತು. ಉತ್ಕರ್ಷ್ ಸಿಂಗ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ದೇವದತ್ ಪಡಿಕಲ್ ಡೀಪ್​ನಲ್ಲಿದ್ದ ವಿರಾಟ್ ಸಿಂಗ್​ಗೆ ಕ್ಯಾಚ್ ನೀಡಿದರು. ಪಡಿಕಲ್ ನಿರ್ಗಮನದೊಂದಿಗೆ ಜಾರ್ಖಂಡ್ ಆಟಗಾರರು ಕೂಡ ನಿಟ್ಟುಸಿರುಬಿಟ್ಟರು.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...