More

  ಚಿರಂತನದಿಂದ 25 ಸಾಧಕಿಯರಿಗೆ ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿ

  ದಾವಣಗೆರೆ: ಚಿರಂತನ ಸಾಂಸ್ಕೃತಿಕ ಸಂಸ್ಥೆಯಿಂದ ಭಾನುವಾರ ರಾತ್ರಿ 25 ಸಾಧಕಿಯರಿಗೆ ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಶಿವಯೋಗಿ ಮಂದಿರದ ಆವರಣದಲ್ಲಿ ಸುಂದರವಾದ ಹೊರಾಂಗಣ ವೇದಿಕೆ ಎದುರು ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಚಿತ್ರದುರ್ಗ ಹಾಗೂ ಬೆಂಗಳೂರಿನ ವಿವಿಧ ಕ್ಷೇತ್ರಗಳ ಸಾಧಕರು ಆಸೀನರಾಗಿದ್ದರು. ಕಾರ್ಯಕ್ರಮವನ್ನು ವೀಕ್ಷಿಸಲು ಅನುವಾಗುವಂತೆ ಅತಿಥಿಗಳಿಗೂ ವೇದಿಕೆ ಎದುರೇ ಆಸನ ವ್ಯವಸ್ಥೆ ಮಾಡಿದ್ದು ವಿಶೇಷ.

  ಚಿರಂತನದಿಂದ 25 ಸಾಧಕಿಯರಿಗೆ ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿಶಿವಯೋಗಿ ಮಂದಿರದ ಆವರಣದಲ್ಲಿ ಸುಂದರವಾದ ಹೊರಾಂಗಣ ವೇದಿಕೆ ಎದುರು ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಚಿತ್ರದುರ್ಗ ಹಾಗೂ ಬೆಂಗಳೂರಿನ ವಿವಿಧ ಕ್ಷೇತ್ರಗಳ ಸಾಧಕರು ಆಸೀನರಾಗಿದ್ದರು. ಕಾರ್ಯಕ್ರಮವನ್ನು ವೀಕ್ಷಿಸಲು ಅನುವಾಗುವಂತೆ ಅತಿಥಿಗಳಿಗೂ ವೇದಿಕೆ ಎದುರೇ ಆಸನ ವ್ಯವಸ್ಥೆ ಮಾಡಿದ್ದು ವಿಶೇಷ. ಚಿರಂತನ, ಭರತಾಂಜಲಿ ಹಾಗೂ ಚಿತ್ರದುರ್ಗದ ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಪ್ರಕಾರಗಳು ಜನಮನಸೂರೆಗೊಂಡವು.

  ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಚಿರಂತನ ಸಂಸ್ಥೆಯು ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸಮಕಾಲೀನ ಶ್ರೇಷ್ಠ ಕಾರ್ಯವಾಗಿದೆ. ಸಮಾಜದಲ್ಲಿ ಪುರುಷರನ್ನು ಸನ್ಮಾನಿಸುವ ಸಂದರ್ಭಗಳು ಬಹಳ. ಆದರೆ, ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಉತ್ತಮ ಕಾರ್ಯ ಎಂದರು.

  ಚಿರಂತನದಿಂದ 25 ಸಾಧಕಿಯರಿಗೆ ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಸುಲಲಿತ ಜೀವನ ನಡೆಸಬಹುದಾದ ನಗರಗಳ ಶ್ರೇಯಾಂಕದಲ್ಲಿ ದಾವಣಗೆರೆ ದೇಶದಲ್ಲೇ 9ನೇ ಸ್ಥಾನದಲ್ಲಿದೆ. ಬರುವ ದಿನದಲ್ಲಿ ಪ್ರತಿ ಭಾನುವಾರಕ್ಕೊಮ್ಮೆ 1 ಗಂಟೆ ಕಾಲ ಶ್ರಮದಾನ ನಡೆಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸುವ ಉದ್ದೇಶವಿದೆ ಎಂದರು.

  ಅಕ್ಕಮಹಾದೇವಿ ಮಹಿಳಾ ವಿವಿ ಉಪಕುಲಪತಿ ಪ್ರೊ.ಬಿ.ಕೆ.ತುಳಸಿ ಮಾಲಾ, ಮೈಸೂರು ವಿವಿ ಪ್ರದರ್ಶಕ ಕಲೆಗಳ ವಿಭಾಗ ಸಹಾಯಕ ಡೀನ್ ಡಾ.ಶೀಲಾ ಶ್ರೀಧರ್, ದುಬೈ ಕನ್ನಡಿಗರ ಸಂಸ್ಥೆ ಅಧ್ಯಕ್ಷೆ ಉಮಾ ವಿದ್ಯಾಧರ್, ಚಿರಂತನ ಸಂಸ್ಥೆ ಸಂಸ್ಥಾಪಕಿ ದೀಪಾ ಎನ್.ರಾವ್, ಮಾಧವ್ ಪದಕಿ, ಅಲಕಾನಂದ ರಾಮದಾಸ್, ರತನ್ ಇತರರಿದ್ದರು.

  See also  ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ

  ಚಿರಂತನದಿಂದ 25 ಸಾಧಕಿಯರಿಗೆ ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿಸಾಧಕರಿವರು: ಸ್ಟಾನಿಯಾ ಡೆಬೋರಾ ಪೆರಿಸ್ (ಕ್ರೀಡೆ), ಅನಿತಾ ಎಚ್.ಎಸ್ (ಶಿಕ್ಷಣ), ಮೃದುಲಾ ಶ್ರೀಧರ್ (ಶಿಕ್ಷಣ ಮತ್ತು ಉದ್ಯಮ), ಶೋಭಾ ಯದುರಾಜ್ (ಕಾನೂನು ಮತ್ತು ಉದ್ಯಮ), ಹೇಮಾ ನಿರಂಜನ್ (ಉದ್ಯಮ), ಡಾ. ಶ್ರೀವಿದ್ಯಾ ನಾಗರಾಜ್ (ಆರೋಗ್ಯ ಸೇವೆ), ಡಾ. ಶಶಿಕಲಾ ಕೃಷ್ಣಮೂರ್ತಿ (ಆರೋಗ್ಯ ಸೇವೆ), ರಶ್ಮಿ ಎಸ್ (ಮಾಧ್ಯಮ). ಪುಷ್ಪಾ ಎಂ.ಎಂ, ಅರುಣಾ ಎಚ್. ರೂಪಾ ಜಿ.ಎಂ, ಸುವರ್ಣಾ ಸತೀಶ್ (ಸಮಾಜಸೇವೆ), ಲತಿಕಾ ಡಿ. ಶೆಟ್ಟಿ (ಸಮಾಜಸೇವೆ ಮತ್ತು ತರಬೇತಿ), ಭಾಗೀರಥಿ ಕನ್ನಡತಿ (ಯೋಗ), ಉಮಾ ವಿದ್ಯಾಧರ್ (ಕನ್ನಡ ಸೇವೆ ), ಡಾ. ಶೈಲಜಾ ಪಂತುಲು (ಸಂಗೀತ), ನಂದಿನಿ ಶಿವಪ್ರಕಾಶ್, ದೀಪಾ ಭಟ್, ರೋಹಿಣಿ ಇಮಾರತಿ, ನಿರ್ಮಲಾ ಜಗದೀಶ್ (ನೃತ್ಯ), ಪೂರ್ಣಿಮಾ ಎಂ.ಎಸ್ (ಚಿತ್ರಕಲೆ). ಯುವ ಮಹಿಳಾ ಸಾಧಕಿ ಪ್ರಶಸ್ತಿ: ವಂದನಾ ಶಾಸ್ತ್ರಿ (ಸಮಾಜಸೇವೆ), ಮೈತ್ರಿ ಎಸ್, ಇಂಚರ ಆರ್. ಮೂರ್ತಿ (ಸಂಗೀತ), ಇಂಚರ ಬಿ ಚೆನ್ನಾಪ್ಲಾ (ನಿರೂಪಕಿ).

  ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts