ಬೆಂಗಳೂರು: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಕರ್ನಾಟಕ ತಂಡ 23 ವಯೋಮಿತಿಯ ಸಿಕೆ ನಾಯ್ದು ಟ್ರೋಫಿಯಲ್ಲಿ ಆತಿಥೇಯ ಒಡಿಶಾ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 2 ಸಾಧಿಸಿ 43 ಅಂಕದೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದೆ.
ಬಾಲಾಂಗಿರ್‌ಯ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಾಲೋಆನ್‌ಗೆ ಗುರಿಯಾಗಿದ್ದ ಒಡಿಶಾ 6 ವಿಕೆಟ್‌ಗೆ 274 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿತು. ಎಲ್. ಮನ್ವಂತ್ ಕುಮಾರ್ (53ಕ್ಕೆ 3) ಹಾಗೂ ಗುರುಭಕ್ಷ್ ಆರ್ಯ (77ಕ್ಕೆ 3) ದಾಳಿಗೆ ನಲುಗಿ 99.2 ಓವರ್‌ಗಳಲ್ಲಿ 346 ರನ್‌ಗಳಿಗೆ ಒಡಿಶಾ ದ್ವಿತೀಯ ಇನಿಂಗ್ಸ್ ಮುಗಿಸಿತು. 143 ರನ್‌ಗಳ ಗುರಿ ಪಡೆದ ಕರ್ನಾಟಕ 29 ಓವರ್‌ಗಳಲ್ಲಿ 1 ವಿಕೆಟ್‌ಗೆ 143 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು. ಆರಂಭಿಕ ಪ್ರಖರ್ ಚರ್ತುವೇದಿ (72* ರನ್, 96 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ವನ್‌ಡೌನ್ ಬ್ಯಾಟರ್ ಹರ್ಷಿಲ್ ಧರ್ಮಾನಿ (54* ರನ್, 45 ಎಸೆತ, 8 ಬೌಂಡರಿ) ಮುರಿಯದ 2ನೇ ವಿಕೆಟ್‌ಗೆ ಭರ್ತಿ 100 ಎಸೆತಗಳಲ್ಲಿ 105 ರನ್‌ಗಳಿಸಿ ದಡ ಸೇರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಹಾಗೂ 6 ವಿಕೆಟ್ ಗಳಿಸಿದ ಮನ್ವಂತ್ ಕುಮಾರ್, ಮುಂಬರುವ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಹಲವು ್ರಾಂಚೈಸಿಗಳ ಗಮನಸೆಳೆದಿದ್ದು, ಆಯ್ಕೆ ಟ್ರಯಲ್ಸ್‌ಗೂ ತೆರಳಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ: 389 ಹಾಗೂ 29 ಓವರ್‌ಗಳಲ್ಲಿ 1 ವಿಕೆಟ್‌ಗೆ 143 (ಮ್ಯಾಕ್ನಿಲ್ 17, ಪ್ರಖರ್ 72*, ಹರ್ಷಿಲ್ 52*, ಅಶುತೋಷ್ 51ಕ್ಕೆ 1). ಒಡಿಶಾ: 185 ಹಾಗೂ 99.2 ಓವರ್‌ಗಳಲ್ಲಿ 346 (ಓಂ 45, ಸಾವನ್ ಪಹರಿಯಾ 121, ಸಂಬಿತ್ 36, ಸುಜಲ್ 84, ಅಶುತೋಷ್ 25, ಮನ್ವಂತ್ 53ಕ್ಕೆ 3, ಪರಾಸ್ 77ಕ್ಕೆ 3).