Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಅವಕಾಶ ಕೈಚೆಲ್ಲಿದ ರಾಜ್ಯ ಬಿಜೆಪಿ?

Saturday, 15.09.2018, 2:03 AM       No Comments

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೇರುವುದಾದರೆ ಏರಲಿ, ಬಹಿರಂಗವಾಗದಂತೆ ಎಚ್ಚರವಹಿಸಿ ಎಂಬ ರಾಷ್ಟ್ರೀಯ ಬಿಜೆಪಿ ಮುಖಂಡರ ಸೂಚನೆ ಪಾಲಿಸಲು ರಾಜ್ಯ ಬಿಜೆಪಿ ವಿಫಲವಾಗಿದೆಯೇ ಎಂಬ ಮಾತುಕಗಳು ಪಕ್ಷದ ವಲಯದಲ್ಲಿ್ಲ ಕೇಳಿಬರುತ್ತಿದೆ.

ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆ ನಂತರ ಬಿಜೆಪಿ ವಲಯದಲ್ಲಿ ಬಿರುಸಿನ ಚರ್ಚೆಗಳು ಆರಂಭವಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಬೀಳಿಸಲು ನಡೆಸುವ ಪ್ರಯತ್ನಗಳು ಹಿನ್ನಡೆಗೆ ಕಾರಣವಾಗುತ್ತವೆ. ಗೌಪ್ಯತೆ ಕಾಪಾಡಿಕೊಳ್ಳಿ ಹಾಗೂ ಅಗತ್ಯಕ್ಕಿಂತ ಐದಾರು ಶಾಸಕರು ನಮ್ಮ ಜತೆ ಬರುವುದು ಪಕ್ಕಾ ಆದರೆ ಮಾತ್ರ ಮುಂದುವರಿಯಿರಿ ಎಂದು ರಾಷ್ಟ್ರೀಯ ನಾಯಕರು ಸೂಚಿಸಿದ್ದರು.

ಒಂದು ವರ್ಗದಲ್ಲಿ ಸಂತಸ?: ಸರ್ಕಾರ ರಚಿಸುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ತಂಡದ ತಂತ್ರ ವಿಫಲವಾಗಿದ್ದಕ್ಕೆ ಪಕ್ಷದ ಒಂದು ವಲಯ ಖುಷಿಯಾಗಿದೆ ಎನ್ನಲಾಗಿದೆ. ಈ ಗುಂಪಿಗೆ ಲೋಕಸಭೆಯೊಳಗೆ ಸರ್ಕಾರ ರಚನೆ ಇಷ್ಟವಿಲ್ಲ. ಲೋಕಸಭೆಯಲ್ಲಿ ಜಯಿಸಿ ಕೇಂದ್ರದಲ್ಲಿ ಆಡಳಿತ ಹಿಡಿದ ಬಳಿಕ ರಾಜ್ಯದ ಬಗ್ಗೆ ಚಿಂತನೆ ಎಂಬ ಮನಸ್ಥಿತಿ ಈ ನಾಯಕರದ್ದು. ಈ ಕಾರಣಕ್ಕೆ ಈಗಿನ ಕಸರತ್ತಿನಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಮೂಲಗಳು ಹೇಳಿವೆ.

19ಕ್ಕೆ ಬಿಜೆಪಿ ವಿಶೇಷ ಸಭೆ

ಮೈತ್ರಿ ಸರ್ಕಾರದ ಅಸ್ಥಿರತೆ ಕುರಿತು ಭರದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ, ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ರ್ಚಚಿಸಲು ರಾಜ್ಯ ಬಿಜೆಪಿ ಸೆ.19ರ ಬುಧವಾರ ವಿಶೇಷ ಸಭೆ ಆಯೋಜಿಸಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೋಕಸಭೆ ಚುನಾವಣೆ ಕುರಿತು ಅನೇಕ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲಾ ಘಟಕಗಳ, ರಾಜ್ಯ ಪದಾಧಿಕಾರಿಗಳ ಜತೆಗೆ ಶಾಸಕರು, ಸಂಸದರು, ರಾಷ್ಟ್ರೀಯ ಸಂಘಟನೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾಗಿರುವ ರಾಜ್ಯದ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಅಲ್ಲದೆ, ಸರ್ಕಾರದ ಅಸ್ಥಿರತೆ ಕುರಿತ ವಿಚಾರವೂ ಸಭೆಯಲ್ಲಿ ಚರ್ಚೆಯಾಗಲಿದೆ. ಕಳೆದ ವಾರವೇ ಸಭೆ ದಿನಾಂಕ ನಿರ್ಧಾರವಾಗಿದ್ದು, ಆಗ ಈ ವಿಚಾರ ಅಜೆಂಡಾದಲ್ಲಿರಲಿಲ್ಲ. ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಲು ಮುಖ್ಯವಾಗಿ ರಾಜ್ಯ ಸರ್ಕಾರದ ರಚನೆ ಕುರಿತು ಸ್ಪಷ್ಟನೆ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಪಷ್ಟ ತೀರ್ವನವನ್ನು ತಿಳಿಸಿ ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

Back To Top