ಬಾಗಲಕೋಟೆ: ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಬಾಗಲಕೋಟೆಯ ಬಸವನಾಳ ಗ್ರಾಮದ ಯೋಧ ಮಂಜುನಾಥ ಬೈಲಕುರ್ ಅವರು ನಿನ್ನೆ (ಆ.10) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಮಂಜುನಾಥ್ ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ! ದಿನೇಶ್ ಕಾರ್ತಿಕ್ ಅಚ್ಚರಿ ಹೇಳಿಕೆ
ಮೃತ ಯೋಧ ಮಂಜುನಾಥ ಬೈಲಕುರ್(33) ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬಸವನಾಳ ನಿವಾಸಿ. ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೈನಿಕ ಮಂಜುನಾಥ್ ರಾಜಸ್ಥಾನದಲ್ಲಿ ನಿಧನರಾಗಿದ್ದಾರೆ.
27 ಎಡಿ ಮಿಷನ್ ರೆಜಿಮೆಂಟ್ ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮಂಜುನಾಥ್, ಕಳೆದ 13 ವರ್ಷದಿಂದ ಸೇನೆಯಲ್ಲಿ ಸೇವೆ
ಸಲ್ಲಿಸುತ್ತಿದ್ದರು. ಪತ್ನಿ ಶೃತಿ ಮತ್ತು ತಮ್ಮಿಬ್ಬರು ಮಕ್ಕಳನ್ನು ಅಗಲಿದ್ದಾರೆ. ದೇಶ ಕಾಯುವ ಸೈನಿಕನನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಪಾಕ್ಗೆ ಸಲಹೆ ಕೊಡುವ ಮೊದಲು ನಿಮ್ಮ ಪ್ರದರ್ಶನ ಹೇಗಿದೆ ನೋಡ್ಕೊಳ್ಳಿ: ರೋಹಿತ್ ಪಡೆ ವಿರುದ್ಧ ತನ್ವಿರ್ ಕಿಡಿ