21.7 C
Bengaluru
Tuesday, January 21, 2020

ಗರ್ಭಿಣಿ ಪೊಲೀಸ್​ಗೆ ಡ್ರೆಸ್​ಕೋಡ್ ಕಿರಿಕಿರಿ

Latest News

ಮಕ್ಕಳ ಸಾಹಿತಿ ಈಶ್ವರ ಕಮ್ಮಾರ ಹೃದಯಘಾತದಿಂದ ನಿಧನ

ಧಾರವಾಡ: ಮಕ್ಕಳ ಹಿರಿಯ ಸಾಹಿತಿ ಈಶ್ವರ ಕಮ್ಮಾರ (88) ಇಂದು (ಮಂಗಳವಾರ) ನಸುಕಿನ ಜಾವದಲ್ಲಿ ಹೃದಯಘಾತದಿಂದ ಮೃತಪಟ್ಟರು. ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಅವರ ಮನೆಯಲ್ಲಿ...

ಮರಡಿಕೆರೆಯಲ್ಲಿ ಕಾಡಾನೆ ದಾಳಿ, ವ್ಯಕ್ತಿಗೆ ತೀವ್ರ ಗಾಯ

ಸಕಲೇಶಪುರ: ತಾಲೂಕಿನ ಮರಡಿಕೆರೆ ಗ್ರಾಮದಲ್ಲಿ ಒಂಟಿ ಸಲಗ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಮರಣಾಂತಿಕವಾಗಿ ಗಾಯಗೊಳಿಸಿದೆ. ಗ್ರಾಮದ ರಾಜು ಗಾಯಗೊಂಡ ವ್ಯಕ್ತಿ. ಮಂಗಳವಾರ ಮುಂಜಾನೆ 8 ಗಂಟೆಯ ವೇಳೆ...

ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ; ಆಯುಕ್ತರ ಕ್ರಮಕ್ಕೆ ಹೈಕೋರ್ಟ್ ಕಿಡಿ

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ನೀಡಿದ್ದ ಆದೇಶ ಪಾಲಿಸುವ ಬದಲಾಗಿ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ರ್ಚಚಿಸಿದ...

ಮರಗಣತಿ ಆರಂಭಿಸದ್ದಕ್ಕೆ ಚಾಟಿ; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ, ಪ್ರಮಾಣಪತ್ರ ಸಲ್ಲಿಸಲು ತಾಕೀತು

ಬೆಂಗಳೂರು:  ರಾಜಧಾನಿಯಲ್ಲಿ ಮರಗಳ ಗಣತಿ ಕಾರ್ಯ ನಡೆಸುವ ಸಂಬಂಧ ನೀಡಿರುವ ಆದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಹಾಗೂ ಕೋರ್ಟ್ ನೀಡಿದ್ದ ಗಡುವು ಮುಗಿದರೂ ಮರಗಳ ಗಣತಿ ಆರಂಭಿಸದ ಬಿಬಿಎಂಪಿ ಹಾಗೂ...

ಗುಂಡಿಕ್ಕಿ ಕೊಲೆ ಆರೋಪಿಗಳಿಬ್ಬರ ಸೆರೆ; ಪೂರ್ವ ವಿಭಾಗ ಪೊಲೀಸರ ರಿವಾಲ್ವರ್​ನಿಂದ ಗುಂಡು  

ಬೆಂಗಳೂರು:  ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಆರೋಪಿ ಗಳನ್ನು ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ಪುಲಕೇಶಿನಗರದ ಮೊಹಮ್ಮದ್ ರಿಜ್ವಾನ್ (29) ಮತ್ತು ಪರ್ವೆಜ್ ಅಹಮದ್ (27) ಗುಂಡೇಟು ತಿಂದು ಸೆರೆಸಿಕ್ಕ...

| ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಮಹಿಳಾ ಪೊಲೀಸರಿಗೆ ಸೀರೆ ಬದಲಿಗೆ ಶರ್ಟು-ಪ್ಯಾಂಟು ಸಮವಸ್ತ್ರ ಕಡ್ಡಾಯಗೊಳಿಸಿರುವ ಆದೇಶ ಗರ್ಭಿಣಿ ಸಿಬ್ಬಂದಿಗೆ ಸಂಕಷ್ಟ ತಂದಿದೆ. ಆದೇಶದ ವಿರುದ್ಧ ಮಹಿಳಾ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ, ನಿವೃತ್ತಿ ಅಂಚಿನಲ್ಲಿರುವ ಸಿಬ್ಬಂದಿಗೆ ಶರ್ಟು- ಪ್ಯಾಂಟ್​ನಿಂದ ವಿನಾಯಿತಿ ನೀಡಬೇಕು. ಹಳೇ ಪದ್ಧತಿಯಂತೆ ಸೀರೆ ಅಥವಾ ಚೂಡಿದಾರ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಬೇಕೆಂದು ಮಹಿಳಾ ಪೊಲೀಸರು ಡಿಜಿಪಿಗೆ ಮನವಿ ಮಾಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಅಧಿಕಾರಿ/ಸಿಬ್ಬಂದಿ ಖಾಕಿ ಸೀರೆ ಅಥವಾ ಪ್ಯಾಂಟ್- ಶರ್ಟು ಧರಿಸುತ್ತಿದ್ದರು. ಅ.16ರಂದು ಡಿಜಿಪಿ ನೀಲಮಣಿ ಎನ್. ರಾಜು, ಪ್ಯಾಂಟು-ಶರ್ಟು ಕಡ್ಡಾಯ ಮಾಡಿ ಆದೇಶಿಸಿದರು. 3 ತಿಂಗಳ ಗರ್ಭಿಣಿ ಅಧಿಕಾರಿ/ಸಿಬ್ಬಂದಿ ಸಮವಸ್ತ್ರ ಅಗತ್ಯ ಇದ್ದರೆ ವೈದ್ಯರ ಪ್ರಮಾಣಪತ್ರ ಸಲ್ಲಿಸಿ ಪ್ಯಾಂಟ್ ಜತೆ ಬುಷ್ ಶರ್ಟ್ ಧರಿಸಬಹುದು ಎಂದು ಉಲ್ಲೇಖಿಸಿದ್ದಾರೆ. ಆದರೆ, ಈ ಬುಷ್ ಶರ್ಟ್ ಎಂದರೇನು ಎಂಬುದು ತಿಳಿಯದೆ ಮಹಿಳಾ ಪೊಲೀಸರು ಗೊಂದಲಕ್ಕೆ ಒಳಗಾಗಿದ್ದಾರೆ. ಅಲ್ಲದೆ ಹೊಸ ನಿಯಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದು ಗರ್ಭಿಣಿಯರ ಆತಂಕ. ಗರ್ಭಿಣಿಯರು ಸಾಮಾನ್ಯವಾಗಿ ಪ್ರತಿ ತಿಂಗಳೂ ದಪ್ಪವಾಗುತ್ತಾರೆ. ಹೀಗಾಗಿ ತಿಂಗಳಿಗೊಂದು ಪ್ಯಾಂಟು ಹೊಲಿಸಬೇಕಾಗುತ್ತದೆ. ಪ್ಯಾಂಟ್-ಶರ್ಟ್ ಧರಿಸಿದರೆ ಮುಜುಗರ ಆಗುವುದರಿಂದ ಎಲ್ಲರ ನಡುವೆ ಎಂದಿನಂತೆ ಕರ್ತವ್ಯ ನಿರ್ವಹಣೆ ಕಷ್ಟವಾದ್ದರಿಂದ ಗರ್ಭಿಣಿಯರಿಗೆ ವಿನಾಯಿತಿ ನೀಡುವಂತೆ ಕೋರಿದ್ದಾರೆ.

ಸೋಂಕು ಸಾಧ್ಯತೆ ಹೆಚ್ಚು: ಗರ್ಭಿಣಿಯ ಹೊಟ್ಟೆ 5 ತಿಂಗಳ ಬಳಿಕ 9 ತಿಂಗಳವರೆಗೂ ಬೆಳವಣಿಗೆ ಆಗುತ್ತದೆ. ಆಕೆ ಸ್ಟ್ರೆಚೇಬಲ್ (ಹಿಗ್ಗುವಂಥ) ಬಟ್ಟೆ ಧರಿಸುವುದು ಉತ್ತಮ. ಬಿಗಿಯಾದ ಬಟನ್ ಇರುವ ಖಾದಿ ಬಟ್ಟೆ, ಬೆಲ್ಟ್, ಬಕಲ್ ಧರಿಸಿದರೆ ಕಷ್ಟ. ಇದರಿಂದ ಹೆಚ್ಚಾಗಿ ಬೆವರಿ ಸೋಂಕು ತಗಲುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ಪೋರ್ಟಿಸ್ ಲಾ ಫೇಮ್ ಆಸ್ಪತ್ರೆಯ ಹಿರಿಯ ಪ್ರಸೂತಿ ತಜ್ಞೆ ಡಾ. ಅರುಣಾ ಮುರಳೀಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದೇಶದಿಂದ ಕುಗ್ಗಿದ ಆತ್ಮಸ್ಥೈರ್ಯ

ಐಷಾರಾಮಿ ಕಾರುಗಳಲ್ಲಿ ಓಡಾಡುವ ಐಪಿಎಸ್ ಅಧಿಕಾರಿಗಳಿಗೆ ಬಿಎಂಟಿಸಿ, ಮೆಟ್ರೋ, ಆಟೋದಲ್ಲಿ ಓಡಾಡುವ ಕಿರಿಯ ಮಹಿಳಾ ಅಧಿಕಾರಿ/ಸಿಬ್ಬಂದಿ ಕಷ್ಟ ಅರ್ಥವಾಗುವುದಿಲ್ಲ. ಕರ್ತವ್ಯಕ್ಕೆ ಸೇರಿದಾಗ ಫಿಟ್​ನೆಸ್ ಕಾಪಾಡಿಕೊಳ್ಳುವುದು ಕಷ್ಟವಲ್ಲ. ಬಡ, ಮಧ್ಯಮ ವರ್ಗದಿಂದ ಪೇದೆಗಳಾಗಿ ಸೇವೆಗೆ ಸೇರಿ ಒಂದೆರೆಡು ಮಕ್ಕಳಾದ ಮೇಲೆ, ಅಡುಗೆ ಮನೆ, ಸಂಸಾರದ ಜಂಜಾಟದಲ್ಲಿ ದಪ್ಪ ಆಗುವುದು ಸಾಮಾನ್ಯ. ಈ ಕಷ್ಟದಲ್ಲಿ ಏಕಾಏಕಿ ಪ್ಯಾಂಟ್-ಶರ್ಟ್ ಧರಿಸಿ ಹೊರಬಂದಾಗ ಅಸಹ್ಯವಾಗಿ ಕಾಣುತ್ತೇವೆ. ತಮಗೆ ತಾವೇ ಆತ್ಮಸ್ಥೈರ್ಯ ಕುಗ್ಗಿಸಿಕೊಂಡು ಉತ್ಸಾಹ ಕಳೆದು ಕೊಳ್ಳುತ್ತೇವೆ ಎಂದು ಮಹಿಳಾ ಪೇದೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಯಾಂಟ್-ಶರ್ಟ್ ಸಮವಸ್ತ್ರ ಕಡ್ಡಾಯ ನಿಯಮದಿಂದ ಬೇಸತ್ತು ವೇತನ ರಹಿತ ರಜೆ ಪಡೆದು ಮನೆಯಲ್ಲಿ ಇರುವಂತೆ ಪತಿ, ಪಾಲಕರು ಒತ್ತಾಯಿಸುತ್ತಾರೆ.

| ಮಹಿಳಾ ಪೊಲೀಸ್ ಅಧಿಕಾರಿ

 

ಮಹಿಳಾ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ಪ್ಯಾಂಟ್-ಶರ್ಟ್ ಸಮವಸ್ತ್ರ ಕಡ್ಡಾಯ ಆದೇಶದಿಂದ ಗರ್ಭಿಣಿಯರಿಗೆ ತೊಂದರೆ ಆಗುವುದಾದರೆ ಬಗೆಹರಿಸಲು ಡಿಜಿಪಿ ಜತೆ ಚರ್ಚೆ ನಡೆಸುತ್ತೇನೆ.

| ಜಿ.ಪರಮೇಶ್ವರ್, ಗೃಹ ಸಚಿವ

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...