More

    ಕರ್ನಾಟಕ ಜನರ ಬದುಕಿನ ಭಾಗ ಕನ್ನಡ – ಸಾಹಿತಿ ಲಿಂಗಾರಡ್ಡಿ ಆಲೂರು ಬಣ್ಣನೆ

    ಗಂಗಾವತಿ: ಕನ್ನಡ ಭಾಷೆ ಕರ್ನಾಟಕ ಜನರ ಬದುಕಿನ ಭಾಗವಾಗಿದ್ದು, ಕಸಾಪ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿದೆ ಎಂದು ಸಾಹಿತಿ, ಕೇಸರಹಟ್ಟಿ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಆಡಳಿತಾಧಿಕಾರಿ ಲಿಂಗಾರಡ್ಡಿ ವೀ.ಆಲೂರು ಹೇಳಿದರು.

    ಇದನ್ನೂ ಓದಿ: ಕನ್ನಡ ಭಾಷೆ ಅಭಿವೃದ್ಧಿಗೆ ಶ್ರಮಿಸುತ್ತಿದೆ ಕಸಾಪ

    ಸಾಹಿತಿಗಳ ಪ್ರೋತ್ಸಾಹಕ್ಕೆ ವೈವಿಧ್ಯಮಯ ಕಾರ್ಯಕ್ರಮ

    ನಗರದ ಟಿಎಂಎಇ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕ ಭಾನುವಾರ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಕಸಾಪ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿದೆ. ಅಲ್ಲದೆ ಯುವ ಸಾಹಿತಿಗಳ ಪ್ರೋತ್ಸಾಹಕ್ಕೆ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

    ಸಾಹಿತ್ಯ ಮತ್ತು ಸಂಸ್ಕೃತಿ ಮನೆಮನೆಗೆ ತಲುಪಿಸುವ ಕಾರ್ಯ

    ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಮನೆಮನೆಗೆ ತಲುಪಿಸುವ ಕಾರ್ಯ ಕಸಾಪ ಮಾಡುತ್ತಿದ್ದು, ಭಾಷೆ, ನೆಲ, ಜಲ ರಕ್ಷಣೆಗೆ ಬದ್ಧವಾಗಿದೆ ಎಂದು ತಿಳಿಸಿದರು. ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ ಮಾತನಾಡಿದರು.

    ಜಿಲ್ಲಾ ಗೌರವ ಕೋಶಾಧ್ಯಕ್ಷ ರಮೇಶ ಕುಲ್ಕರ್ಣಿ, ಪದಾಧಿಕಾರಿಗಳಾದ ರುದ್ರೇಶ ಅರಾಳ್, ಶಿವಾನಂದ ತಿಮ್ಮಾಪುರ, ಟಿ.ಆಂಜನೇಯ, ಪ್ರಸನ್ನ ದೇಸಾಯಿ, ಮುದೇಗೌಡ ಕೇಸರಹಟ್ಟಿ, ಅಮೃತೇಶ ಸಜ್ಜನ್, ವಿರೂಪಾಕ್ಷಪ್ಪ ಶಿರವಾರ, ಕಾಲೇಜಿ ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ, ಉಪನ್ಯಾಸಕರಾದ ಜಯರಾಂ ಮರಡಿತೋಟ, ಡಾ.ಡಿ.ಎಂ.ಅರುಣಕುಮಾರ, ಡಾ.ಕೆ.ರಮೇಶ ಸಿದ್ದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts