25.1 C
Bangalore
Friday, December 6, 2019

ಮುಂಬೈ ಉತ್ತಮ ಆರಂಭ

Latest News

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸ್​ ಆಯುಕ್ತ ವಿಶ್ವನಾಥ್​ ಸಜ್ಜನರ್​

ಹೈದರಾಬಾದ್​: ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಮೃತದೇಹಕ್ಕೆ ಬೆಂಕಿಯಿಟ್ಟು ಕ್ರೂರತ್ವ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್​ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಮೂಲಕ...

ಯಾಂತ್ರಿಕ ಜೀವನಕ್ಕೆ ಮಾರುಹೋಗಿದ್ದಾರೆ ಜನ

ಕನಕಪುರ: ಯಾಂತ್ರಿಕ ಜೀವನಕ್ಕೆ ಮಾರುಹೋಗಿರುವ ಇಂದಿನ ಜನತೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಕೋಡಿಹಳ್ಳಿ ರಂಗಮಂದಿರದಲ್ಲಿ ಕನ್ನಡ...

ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​​ ಅನ್ನು ಸ್ವಾಗತಿಸಿದ ಗೋವಾ ಕಾಂಗ್ರೆಸ್​​

ಪಣಜಿ: ಹೈದರಾಬಾದ್​ನಲ್ಲಿ ಶುಕ್ರವಾರ ಮುಂಜಾನೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಲೆ ಮಾಡಿದ್ದನ್ನು ಗೋವಾ ಕಾಂಗ್ರೆಸ್​ ಮಹಿಳಾ...

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ಮೊದಲ ದಿನದ ಆಟದಲ್ಲಿ ಮಿಂಚಿದ್ದ ರಾಜ್ಯದ ಕೆವಿ ಸಿದ್ಧಾರ್ಥ್ ಹಾಗೂ ಮುಂಬೈನ ಆಲ್ರೌಂಡರ್ ಶಿವಂ ದುಬೆ ಎರಡನೇ ದಿನವೂ ತಮ್ಮ ನಿರ್ವಹಣೆಯ ಮೂಲಕ ಗಮನಸೆಳೆದರು. 104 ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಕೆವಿ ಸಿದ್ಧಾರ್ಥ್ (161 ರನ್, 299 ಎಸೆತ, 17 ಬೌಂಡರಿ, 2 ಸಿಕ್ಸರ್) ದ್ವಿಶತಕ ತಪ್ಪಿಸಿಕೊಂಡರೆ, ಶಿವಂ ದುಬೆ (53ಕ್ಕೆ 7) ಪ್ರಥಮ ದರ್ಜೆಯಲ್ಲಿ ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆ ತೋರುವ ಮೂಲಕ ತಮ್ಮ ತಂಡಗಳಿಗೆ ನೆರವಾದರು. ಇದರಿಂದಾಗಿ ಆತಿಥೇಯ ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಟ್ರೋಫಿ ಮುಖಾಮುಖಿಯ 2ನೇ ದಿನದಾಟ ಸಮಗೌರವಕ್ಕೆ ಸಾಕ್ಷಿ ಯಾಯಿತು.

ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4 ವಿಕೆಟ್​ಗೆ 263 ರನ್​ಗಳಿಂದ ಬುಧವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ, 129.4 ಓವರ್​ಗಳಲ್ಲಿ 400 ರನ್ ಪೇರಿಸಿ ಮೊದಲ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ಮುಂಬೈ 36.5 ಓವರ್​ಗಳಲ್ಲಿ 99 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 301 ರನ್​ಗಳ ಹಿನ್ನಡೆಯಲ್ಲಿದೆ. ಉತ್ತಮ ಆರಂಭ ಪಡೆದುಕೊಂಡಿರುವ ಮುಂಬೈ, ದಿನದಾಟ ಮುಗಿಯಲು 2 ಎಸೆತಗಳಿರುವಾಗ 2ನೇ ವಿಕೆಟ್ ಕಳೆದುಕೊಂಡಿತು. ಅಭಿಮನ್ಯು ಮಿಥುನ್ ಹಾಗೂ ರೋನಿತ್ ಮೋರೆ ಈ 2 ವಿಕೆಟ್ ಉರುಳಿಸಿದರು. ಹಿಂದಿನ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯ ಡ್ರಾ ಮಾಡಿಕೊಂಡಿರುವ ಎರಡೂ ತಂಡಗಳು ಈವರೆಗೂ ಸಮಬಲದ ಪೈಪೋಟಿ ನೀಡಿದ್ದು, ಗುರುವಾರದ ಆಟ ಮುಖ್ಯವಾಗಿದೆ. ಆರಂಭಿಕ ಜಯ್ ಬಿಷ್ಟಾ (69 ರನ್,111 ಎಸೆತ, 11 ಬೌಂಡರಿ) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಉತ್ತಮ ಮೊತ್ತ ಕಲೆಹಾಕಿದ ಕರ್ನಾಟಕ

ಮೊದಲ ದಿನದ ಮೊತ್ತಕ್ಕೆ 137 ರನ್ ಕೂಡಿಸಿ ಕರ್ನಾಟಕ ಆಲೌಟ್ ಆಯಿತು. ದಿನದಾಟದಲ್ಲಿ 2 ರನ್ ಕೂಡಿಸಿದ ವೇಳೆಗೆ ಸಿದ್ಧಾರ್ಥ್ ಹಾಗೂ ಶ್ರೇಯಸ್ ಗೋಪಾಲ್ (48 ರನ್, 93 ಎಸೆತ, 8 ಬೌಂಡರಿ) ಜೋಡಿ ಬೇರ್ಪಟ್ಟಿತು. ಪಂದ್ಯ ಆರಂಭವಾದ 3ನೇ ಓವರ್​ನಲ್ಲೇ ಶ್ರೇಯಸ್, ಧವಳ್ ಕುಲಕರ್ಣಿ ಬೌಲಿಂಗ್​ನಲ್ಲಿ ಎಲ್​ಬಿ ಆಗಿದ್ದರಿಂದ ಅರ್ಧಶತಕದ ಅವಕಾಶವನ್ನೂ ಕಳೆದುಕೊಂಡರು. ನಂತರ ಕಣಕ್ಕಿಳಿದ ಬಿಆರ್ ಶರತ್ ಸತತ 2ನೇ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೆಲ ರನ್​ಗಳ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡ ತಂಡ ಇಕ್ಕಟ್ಟಿಗೆ ಸಿಲುಕಿತು. ಆದರೆ, ಸಿದ್ಧಾರ್ಥ್ ಹಾಗೂ ಜೆ. ಸುಚಿತ್ (30 ರನ್, 86 ಎಸೆತ) ಜೋಡಿ 7ನೇ ವಿಕೆಟ್​ಗೆ 84 ರನ್​ಗಳ ಜತೆಯಾಟವಾಡಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿತು. ಈ ಹಂತದಲ್ಲಿ ಬಿ.ಅಲಮ್ ಎಸೆದ 122ನೇ ಓವರ್​ನಲ್ಲಿ ಜೆ. ಸುಚಿತ್, ಜಯ್ ಬಿಷ್ಟಾಗೆ ಕ್ಯಾಚ್ ನೀಡಿದರು. ಇದಾದ ಕೆಲ ಹೊತ್ತಿನಲ್ಲಿ 438 ನಿಮಿಷಗಳ ಕಾಲ ಮುಂಬೈ ಬೌಲಿಂಗ್​ಗೆ ಸವಾಲಾಗಿದ್ದ ಸಿದ್ಧಾರ್ಥ್, ದುಬೆ ಎಸೆತದಲ್ಲಿ ಎಲ್​ಬಿ ಆದರು. 124 ರನ್ ಗಳಿಸಿದ್ದಾಗ ರನೌಟ್ ಆಗುವುದರಿಂದ ತಪ್ಪಿಸಿಕೊಂಡಿದ್ದ ಸಿದ್ಧಾರ್ಥ್, 287 ಎಸೆತಗಳಲ್ಲಿ 150 ರನ್ ಪೂರೈಸಿದರು. ಆದರೆ, ದ್ವಿತಶಕ ಬಾರಿಸುವ ಅವಕಾಶ ಕಳೆದುಕೊಂಡರು. ನಂತರ ಆಗಮಿಸಿದ ತವರಿನ ಆಟಗಾರ ರೋನಿತ್ ಮೋರೆ ಒಂದೇ ಎಸೆತದಲ್ಲಿ (0) ಔಟಾಗಿ ನಿರ್ಗಮಿಸಿದರು. ಕೊನೇ ಹಂತದಲ್ಲಿ ಅಭಿಮನ್ಯು ಮಿಥುನ್ (34 ರನ್, 38 ನಿಮಿಷ, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಮಿಂಚಿದ್ದರಿಂದ ತಂಡದ ಮೊತ್ತ 400 ರನ್ ತಲುಪಿತು.

ರಣಜಿಯಲ್ಲಿ ಜಾಫರ್ 11 ಸಾವಿರ ರನ್

ನಾಗ್ಪುರ: ಭಾರತ ತಂಡದ ಟೆಸ್ಟ್ ಬ್ಯಾಟ್ಸ್ ಮನ್ ವಾಸಿಂ ಜಾಫರ್ ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ 11 ಸಾವಿರ ರನ್ ಪೂರೈಸಿದ ಮೊದಲ ಸಾಧಕರೆನಿಸಿದ್ದಾರೆ. ಸದ್ಯ ವಿದರ್ಭ ಪರ ಆಡುತ್ತಿರುವ ಮುಂಬೈ ಮೂಲದ ಜಾಫರ್ (11,056 ರನ್), ಬರೋಡ ವಿರುದ್ಧದ ಪಂದ್ಯದಲ್ಲಿ 153 ರನ್ ಸಿಡಿಸಿದ ಸಂದರ್ಭದಲ್ಲಿ ಈ ದಾಖಲೆ ಬರೆದಿದ್ದಾರೆ. 40 ವರ್ಷದ ಜಾಫರ್ 1996-97ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ರಣಜಿಯಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಸಾಧಕರೂ ಆಗಿದ್ದು, ಮುಂಬೈನವರೇ ಆದ ಅಮೊಲ್ ಮುಜುಮ್ದಾರ್ (9,202) ಗರಿಷ್ಠ ರಣಜಿ ರನ್ ಸಾಧಕರಲ್ಲಿ 2ನೇ ಸ್ಥಾನದಲ್ಲಿದ್ದಾರೆ.

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...