Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಜಾರಿದ ಡಿಕೆಶಿ?

Friday, 22.06.2018, 3:05 AM       No Comments

ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಹವಾಲಾ ದಂಧೆ ಹಾಗೂ ತೆರಿಗೆ ವಂಚನೆ ಆರೋಪದ ಉರುಳು ಮತ್ತಷ್ಟು ಬಿಗಿಯಾಗುವ ಲಕ್ಷಣ ಗೋಚರಿಸಿದೆ. ಪ್ರಕರಣದ ತನಿಖೆ ಆದಾಯ ತೆರಿಗೆ ಇಲಾಖೆಯಿಂದ ಜಾರಿ ನಿರ್ದೇಶನಾಲಯ (ಇ.ಡಿ.) ತೆಕ್ಕೆಗೆ ಹೋಗುವ ಸಾಧ್ಯತೆ ದಟ್ಟವಾಗತೊಡಗಿದೆ.

ದೆಹಲಿಯ ಸಫ್ದರ್​ಜಂಗ್​ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ ವೇಳೆ ದೊರೆತಿದ್ದ ಕೋಟ್ಯಂತರ ರೂ. ಹಣ ಡಿ.ಕೆ ಶಿವಕುಮಾರ್​ಗೆ ಸೇರಿದ್ದೆಂಬುದಕ್ಕೆ ಐಟಿ ಅಧಿಕಾರಿಗಳ ಬಳಿ ಕೆಲ ಸಾಕ್ಷ್ಯಗಳಿವೆ. ಅಲ್ಲಿ ಸಿಕ್ಕಿರುವ ವಸ್ತುಗಳನ್ನು ಅಸ್ತ್ರವಾಗಿ ಬಳಸಿಕೊಂಡು ಪ್ರಕರಣವನ್ನು ಇ.ಡಿ.ಗೆ ಹಸ್ತಾಂತರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೆ, ಇ.ಡಿ. ಅಧಿಕಾರಿಗಳೂ ಪ್ರಕರಣದ ತನಿಖೆ ನಡೆಸಲು ಆಸಕ್ತಿ ವಹಿಸಿದ್ದು, ಸದ್ಯದಲ್ಲೇ ಈ ತನಿಖಾಧಿಕಾರಿಗಳ ತಂಡ ದೆಹಲಿಯಿಂದ ಬೆಂಗಳೂರಿಗೆ ಬರಲಿದೆಯೆಂದು ಮೂಲಗಳು ತಿಳಿಸಿವೆ. ಡಿಕೆಶಿ ಹವಾಲಾ ದಂಧೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತಾಗ ಪ್ರಕರಣವನ್ನು ತಮಗೆ ಹಸ್ತಾಂತರಿಸುವಂತೆ ಸ್ವತಃ ಇ.ಡಿ. ಅಧಿಕಾರಿಗಳೇ ಐಟಿ ಅಧಿಕಾರಿಗಳೊಂದಿಗಿನ ಚರ್ಚೆ ವೇಳೆ ಮನವಿ ಮಾಡಿದ್ದರು. ಆದರೆ, ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಪ್ರಕರಣವನ್ನು ಹಸ್ತಾಂತರಿಸಲು ನಿರಾಕರಿಸಿದ್ದರು ಎನ್ನಲಾಗಿದೆ.

ಹವಾಲಾ ದಂಧೆ: ಡಿಕೆಶಿ ಸಹಚರರು ಹವಾಲಾ ದಂಧೆಯಲ್ಲಿ ಕಡಿಮೆ ಬೆಲೆ ಬಾಳುವ ನೋಟುಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಐಟಿ ಅಧಿಕಾರಿಗಳು ತನಿಖೆ ನಡೆಸಿದಾಗ 50, 100 ರೂ. ನೋಟುಗಳನ್ನು ಈ ದಂಧೆಯಲ್ಲಿ ಬಳಸಿರುವುದು ತಿಳಿದು ಬಂದಿದೆ. ಹವಾಲಾದಲ್ಲಿ ಕಡಿಮೆ ಬೆಲೆಯ ನೋಟುಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎನ್ನಲಾಗಿದೆ.

ಈ ಹಿಂದೆ ಡಿಕೆಶಿಗೆ ಸೇರಿದ ಕೋಟ್ಯಂತರ ರೂ. ಹಣವನ್ನು ಬೆಂಗಳೂರಿನಿಂದ ದೆಹಲಿಗೆ ರವಾನೆ ಮಾಡಲಾಗಿತ್ತು. ಈ ಬಗ್ಗೆ ಐಟಿ ಅಧಿಕಾರಿಗಳು ಉಳಿದ ಆರೋಪಿಗಳನ್ನು ಪ್ರಶ್ನಿಸಿದಾಗ ಗೊಂದಲದ ಹೇಳಿಕೆಗಳನ್ನು ನೀಡಿದ್ದರು. ಮುಖ್ಯವಾಗಿ ಡಿಕೆಶಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಸುನೀಲ್ ಕುಮಾರ್ ಶರ್ಮಾ ತೆರಿಗೆ ವಂಚನೆ, ಹಣ ರವಾನೆ ಮತ್ತು ಹವಲಾ ದಂಧೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸಚಿವರಿಗೆ ಸಹಾಯ ಮಾಡಿದ್ದ ಎನ್ನಲಾಗಿದೆ.

3 ಕೋಟಿ ರೂ. ಚೆಕ್

ಎಎನ್ ಪ್ರಾಪ್​ಬಿಲ್ಡ್ ಎಎಲ್​ಪಿ ಮಾಲೀಕ ಅಜಯ್ ಖನ್ನಾ ಮೂಲಕ 4 ಕೋಟಿ ರೂ.ನಗದನ್ನು ಸಫ್ದರ್​ಜಂಗ್ ಎನ್​ಕ್ಲೇವ್​ನ ಬಿ1 ಫ್ಲ್ಯಾಟ್ ಖರೀದಿಗೆ ಸಚಿವರು ನೀಡಿದ್ದಾರೆ. ಮುಂದೆ ಇದೇ 4 ಕೋಟಿ ರೂ.ನ್ನು ರಾವತ್ ಎಂಬವರಿಂದ ಆರೋಪಿ ಆಂಜನೇಯ ಮತ್ತು ರಾಜೇಂದ್ರನ್ ಪಡೆದು ಕಂತಿನ ಮೂಲಕ ನೀಡಿದ್ದಾರೆ ಎಂಬುದಾಗಿ ಆಂಜನೇಯ ಸ್ವ-ಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಈ ಬಗ್ಗೆ ಮಾಹಿತಿ ನೀಡುವಂತೆ ಐಟಿ ಅಧಿಕಾರಿಗಳು ವಿಚಾರಣೆ ವೇಳೆ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದರು. ಱನಾನು ಈ ಫ್ಲ್ಯಾಟ್ ಖರೀದಿ ಮಾಡಲು ಚೆಕ್ ಮೂಲಕ 3 ಕೋಟಿ ರೂ.ನೀಡಿದ್ದೇನೆ. ನಗದು ಹಣ ವ್ಯವಹಾರದ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ಸಚಿವರು ಉತ್ತರಿಸಿದ್ದರು ಎನ್ನಲಾಗಿದೆ.

ಪಕ್ಷಕ್ಕೆ ಸಂಬಂಧಿಸಿದ್ದು

ಈಗಲ್​ಟನ್ ರೆಸಾರ್ಟ್ ಮೇಲೆ ದಾಳಿ ನಡೆದಾಗ ದೊರೆತ ಕೆಲ ಪತ್ರಗಳಲ್ಲಿ ಉಲ್ಲೇಖಿಸಿರುವುದು ಪಕ್ಷಕ್ಕೆ ಸಂಬಂಧಿಸಿದ ವಿಚಾರಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಪಟ್ಟವುಗಳಾಗಿದೆ. ಶೋಭಾ ಡೆವಲಪರ್ಸ್ ಜತೆ ಸಹಭಾಗಿತ್ವ ಹೊಂದಿದ್ದೇನೆ. ಜತೆಗೆ ದುಬೈನ ಉದ್ಯಮಿ ಪ್ರಕಾಶ್ ಎಂಬಾತನೊಂದಿಗೆ ಅಮ್ಯೂಸ್​ವೆುಂಟ್ ಪಾರ್ಕ್ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂಬ ಮಾಹಿತಿಯನ್ನು ಸಚಿವರು ವಿಚಾರಣೆ ವೇಳೆ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕಾಯ್ದೆ ಉಲ್ಲಂಘನೆ

ಅಕ್ರಮ ಹಣ ಲೇವಾದೇವಿ ಕಾಯ್ದೆ (ಪಿಎಂಎಲ್​ಎ)ಮತ್ತು ಫೆಮಾ ಕಾಯ್ದೆಯನ್ನು ಉಲ್ಲಂಘಿಸಿದರಷ್ಟೇ ಇ.ಡಿ. ಅಧಿಕಾರಿಗಳಿಗೆ ತನಿಖೆ ನಡೆಸಲು ಅವಕಾಶಗಳಿವೆ. ಈ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಅನುಮತಿ ನೀಡಿದರೆ ಮಾತ್ರ ಇ.ಡಿ. ತನಿಖೆ ನಡೆಸಬಹುದು. ಡಿ.ಕೆ ಶಿವಕುಮಾರ್ ಪ್ರಕರಣದ ಬಗ್ಗೆ ಇ.ಡಿ. ಅಧಿಕಾರಿಗಳು ಈಗಾಗಲೇ ಮಾಹಿತಿ ಸಂಗ್ರಹಿಸಿದ್ದಾರೆ. ಒಂದು ವೇಳೆ ತನಿಖೆಯಲ್ಲಿ ಈ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಸಚಿವರನ್ನು ಬಂಧಿಸಿ, ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ನಮ್ಮನ್ನು ರಾಜಕೀಯವಾಗಿ ತುಳಿಯಲು ಕೇಂದ್ರ ಸರ್ಕಾರದಿಂದ ಅಧಿಕಾರಿಗಳ ಮೇಲೆ ಒತ್ತಡ ಬರುತ್ತಿದೆ. ನಿಷ್ಪಕ್ಷಪಾತ ತನಿಖೆಯಾಗಿದ್ದರೆ ಐಟಿ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿರುವ ಎಲ್ಲ ಚೀಟಿಗಳು, ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿ. ನಾವು ತಪ್ಪು ಮಾಡಿಲ್ಲ. ನಮಗೆ ಯಾವುದೇ ಭಯವಿಲ್ಲ.

| ಡಿ.ಕೆ.ಸುರೇಶ್ ಸಂಸದ, ಡಿಕೆಶಿ ಸೋದರ

Leave a Reply

Your email address will not be published. Required fields are marked *

Back To Top