ವಿಧಾನಸಭೆ ಕಾರ್ಯದರ್ಶಿ ಎಸ್.‌ಮೂರ್ತಿ‌ ಅಮಾನತು

ಬೆಂಗಳೂರು: 2016 ಮತ್ತು 2017 ರ ಬೆಳಗಾವಿ ಅಧಿವೇಶನದಲ್ಲಿ ಔಚಿತ್ಯ ಸೂತ್ರ ಪಾಲಿಸಿಲ್ಲ ಎಂಬ ಕಾರಣಕ್ಕೆ ವಿಧಾನಸಭೆ ಕಾರ್ಯದರ್ಶಿ ಎಸ್​. ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

ವಿಧಾನಸಭೆಯ ವಿಶೇಷ ಮಂಡಳಿ ಶಿಫಾರಸಿನ ಅನ್ವಯ ವಿಧಾನಸಭೆ ಅಧೀನ ಕಾರ್ಯದರ್ಶಿ ಅಮಾನತು ಆದೇಶ ಹೊರಡಿಸಿದ್ದಾರೆ.

2016ರ ಬೆಳಗಾವಿ ಅಧಿವೇಶನದ ವೇಳೆ 20 ಕೋಟಿ ರೂ. ಖರ್ಚಾಗಿತ್ತು. 2017ರ ಅಧಿವೇಶನಕ್ಕೆ 21.57 ಕೋಟಿ ರೂ. ಖರ್ಚಾಗಿತ್ತು. ಈ ಸಂದರ್ಭದಲ್ಲಿ ಟೆಂಡರ್​ ಕರೆಯದೆ 8.6 ಲಕ್ಷ ರೂ ಖರ್ಚು ಮಾಡಲಾಗಿದೆ ಎಂದು ಎಚ್​. ಮೂರ್ತಿ ವಿರುದ್ಧ ಆರೋಪ ಹೊರಿಸಲಾಗಿದೆ.

ಅಮಾನತಿನ ಹಿಂದೆ ಷಡ್ಯಂತ್ರವಿದೆ

ಅಮಾನತು ಆದೇಶ ಹೊರಬಿದ್ದ ನಂತರ ಪ್ರತಿಕ್ರಿಯೆ ನೀಡಿರುವ ಎಸ್​. ಮೂರ್ತಿ, ನಾನು ಯಾವುದೇ ಅವ್ಯವಹಾರ ಮಾಡಿಲ್ಲ, ವಿನಾ ಕಾರಣ ನನ್ನ ವಿರುದ್ಧ ಆರೋಪ ಹೊರಿಸಲಾಗಿದೆ. ಕಾನೂನು ಚೌಕಟ್ಟಿನಲ್ಲೇ ನಾನು ಕೆಲಸ ಮಾಡಿದ್ದೇನೆ. ನನ್ನ ಸೇವಾವಧಿ ಕುಂಠಿತಗೊಳಿಸಲು ಮತ್ತು ಜಾತಿ ಕಾರಣದಿಂದ ನನ್ನನ್ನು ತುಳಿಯಲಾಗುತ್ತಿದೆ. ಈ ಕ್ರಮದ ಬಗ್ಗೆ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

https://youtu.be/oxetgSOkrxA