23.9 C
Bangalore
Friday, December 6, 2019

ಕರ್ನಾಟಕಕ್ಕೆ ಅಲ್ಪ ಮುನ್ನಡೆ

Latest News

 ಕೆಎಸ್ಒಯುನಿಂದ ಐಬಿಪಿಎಸ್ ಪರೀಕ್ಷೆಗೆ ತರಬೇತಿ: ಹೆಸರು ನೋಂದಾಯಿಸಲು ಡಿ.10 ಕೊನೇ ದಿನ

ಬೆಂಗಳೂರು: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ನಡೆಸುವ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ...

ವಿದರ್ಭ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್​ಗೆ ಕ್ಲೀನ್ ಚಿಟ್​​ ನೀಡಿದ ಮಹಾರಾಷ್ಟ್ರ ಎಸಿಬಿ

ನಾಗಪುರ: ವಿದರ್ಭ ನೀರಾವರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ನಾಯಕ ಅಜಿತ್ ಪವಾರ್​​ಗೆ ಮಹಾರಾಷ್ಟ್ರ...

ಸಾಲ ಮರುಪಾವತಿ ಅವಧಿ ವಿಸ್ತರಣೆ : ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಸೌಲಭ್ಯ

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ತನ್ನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್​ಎಂಇ) ಸಾಲದ ವಿನ್ಯಾಸವನ್ನು ಪರಿಷ್ಕರಿಸಿದ್ದು, ಎಂಎಸ್​ಎಂಇ ಗ್ರಾಹಕರ ಸಾಲ ಮರುಪಾವತಿ...

ಗ್ವಾಟೆಮಾಲಾ ನಗರದಲ್ಲಿ ಟಿವಿಎಸ್ ಫ್ಲ್ಯಾಗ್​ಶಿಪ್ ಶೋರೂಂ: ಕ್ಯಾಡಿಸಾ ಸಂಸ್ಥೆ ಸಹಯೋಗದೊಂದಿಗೆ ನೂತನ ಮಳಿಗೆ

ಬೆಂಗಳೂರು: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಿಕೆಯಲ್ಲಿ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಟಿವಿಎಸ್ ಮೋಟಾರ್ ಕಂಪನಿ, ಕ್ಯಾಡಿಸಾ ಸಹಭಾಗಿತ್ವದಲ್ಲಿ ಮಧ್ಯ ಅಮೇರಿಕಾದ ಗ್ವಾಟೆಮಾಲಾ...

ಎನ್​ಕೌಂಟರ್​ಗೆ ದೇಶಾದ್ಯಂತ ಮುಗಿಲು ಮುಟ್ಟಿದ ಸಂಭ್ರಮ: ಪೊಲೀಸರ ಕ್ರಮಕ್ಕೆ ಶ್ಲಾಘನೆ

ಹೈದರಾಬಾದ್​​: ದೇಶವನ್ನೇ ಬೆಚ್ಚಿಬೀಳಿಸಿದ ಪಶುವೈದ್ಯೆ ದಿಶಾ ರೆಡ್ಡಿ ಗ್ಯಾಂಗ್ ರೇಪ್​ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಹತ್ಯೆ ಮಾಡಿರುವುದಕ್ಕೆ ದೇಶದಾದ್ಯಂತ...

|ಅವಿನಾಶ್ ಜೈನಹಳ್ಳಿ

ಮೈಸೂರು: ಪ್ರವಾಸಿ ಮಹಾರಾಷ್ಟ್ರ ತಂಡದ ಬೌಲರ್​ಗಳ ಅಬ್ಬರದ ನಡುವೆಯೂ ಆತಿಥೇಯ ಕರ್ನಾಟಕ ತಂಡ 85ನೇ ಆವೃತ್ತಿಯ ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯಲ್ಲಿ ಸತತ 3ನೇ ಪಂದ್ಯದಲ್ಲೂ ಇನಿಂಗ್ಸ್ ಮುನ್ನಡೆ ಸಾಧಿಸಲು ಯಶಸ್ವಿಯಾಯಿತು. ಉಪ ನಾಯಕ ಶ್ರೇಯಸ್ ಗೋಪಾಲ್ (40ರನ್, 100 ಎಸೆತ, 5 ಬೌಂಡರಿ) ಹಾಗೂ ನಾಯಕ ಆರ್.ವಿನಯ್ಕುಮಾರ್(26 ರನ್, 72 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿಯ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 73 ರನ್​ಗಳ ಅಲ್ಪ ಮೊತ್ತದ ಮುನ್ನಡೆ ಕಂಡಿತು. ಮತ್ತೊಂದೆಡೆ, ಎರಡನೇ ದಿನವೂ ಬೌಲರ್​ಗಳ ಅಬ್ಬರ ಮಾತ್ರ ನಿಲ್ಲಲಿಲ್ಲ. ಎರಡನೇ ಸರದಿಯಲ್ಲೂ ವಿದರ್ಭ ಪಡೆ ಆರಂಭಿಕ ಆಘಾತ ಕಂಡಿದ್ದು, ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಬರುವುದು ಖಚಿತಗೊಂಡಿದೆ.

ಮಾನಸ ಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ಗುರುವಾರ 3 ವಿಕೆಟ್​ಗೆ 70 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಕರ್ನಾಟಕ 84.2 ಓವರ್​ಗಳಿಗೆ 186 ರನ್ ಪೇರಿಸಿ ಸರ್ವಪತನ ಕಂಡಿತು. ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಸರದಿ ಬ್ಯಾಟಿಂಗ್ ಆರಂಭಿಸಿದ ಮಹಾರಾಷ್ಟ್ರ, ಗುರುವಾರದ ಅಂತ್ಯಕ್ಕೆ 3 ವಿಕೆಟ್​ಗೆ 48 ರನ್ ಪೇರಿಸಿದ್ದು, ಹಿನ್ನಡೆ ಅಳಿಸಲು ಇನ್ನೂ 25 ರನ್​ಗಳ ಅವಶ್ಯಕತೆ ಇದೆ. ರುತುರಾಜ್ ಗಾಯಕ್ವಾಡ್ (9*) ಹಾಗೂ ಸತ್ಯಜಿತ್ ಬಚಾವ್ (4*) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮುನ್ನಡೆ ಕಂಡ ಸಂಭ್ರಮದಲ್ಲಿ ದ್ವಿತೀಯ ಸರದಿ ಬೌಲಿಂಗ್ ಮಾಡಿದ ಕರ್ನಾಟಕ, ಮಹಾರಾಷ್ಟ್ರ ತಂಡಕ್ಕೆ ಆರಂಭಿಕ ಶಾಕ್ ನೀಡಿದೆ. ಸಮಯೋಚಿತ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಶ್ರೇಯಸ್ ಗೋಪಾಲ್ (6ಕ್ಕೆ 2) ಹಾಗೂ ವೇಗಿ ಮಿಥುನ್(19ಕ್ಕೆ1) ಮಾರಕ ದಾಳಿಯಿಂದಾಗಿ ಮಹಾರಾಷ್ಟ್ರ ತಂಡದ ಆಟಗಾರರು ಮತ್ತೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮಿಥುನ್, ಸ್ವಪ್ನಿಲ್ ಗುಗಾಲೆರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಮಹಾರಾಷ್ಟ್ರ ತಂಡಕ್ಕೆ ಆಘಾತ ನೀಡಿದರು. ಬಳಿಕ ಚಿರಾಗ್ ಖುರಾನ (18) ಹಾಗೂ ಜಯ್ ಪಾಂಡೆ(15) ಜೋಡಿ ಕೆಲಕಾಲ ನಿಧಾನಗತಿಯ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಲು ಯತ್ನಿಸಿತು. 2ನೇ ವಿಕೆಟ್​ಗೆ ಈ ಜೋಡಿ 27 ರನ್​ಗಳಿಸಿದ್ದ ವೇಳೆ ಶ್ರೇಯಸ್ ಗೋಪಾಲ್, ಜಯ್ಪಾಂಡೆರನ್ನು ಬೌಲ್ಡ್ ಮಾಡಿದರು. ಬಳಿಕ ಎರಡು ಓವರ್​ಗಳ ಅಂತರದಲ್ಲಿ ಖುರಾನರನ್ನು ಎಲ್​ಬಿ ಬಲೆಗೆ ಕೆಡವಿ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು.

ಮುನ್ನಡೆ ದೊರಕಿಸಿ ಕೊಟ್ಟ ಶ್ರೇಯಸ್

ದಿನದ ಆರಂಭ ದಲ್ಲೇ ಮಹಾರಾಷ್ಟ್ರ ಬೌಲರ್​ಗಳ ಅಬ್ಬರದಿಂದಾಗಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ ಕರ್ನಾಟಕ ತಂಡಕ್ಕೆ ಉಪನಾಯಕ ಶ್ರೇಯಸ್ ಗೋಪಾಲ್ ಹಾಗೂ ನಾಯಕ ಆರ್.ವಿನಯ್ಕುಮಾರ್ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಸಾಧಾರಣ ಮುನ್ನಡೆ ಪಡೆಯಲು ಕಾರಣವಾಯಿತು. ಈ ಜೋಡಿ 8ನೇ ವಿಕೆಟ್​ಗೆ 63 ರನ್​ಗಳಿಸಿ ಬೇರ್ಪಟ್ಟಿತು.

ಕುಸಿದ ರಾಜ್ಯ ಪಡೆ

ಆರಂಭಿಕ ಆಟಗಾರ ಡಿ.ನಿಶ್ಚಲ್(39 ) ಹಾಗೂ ಸ್ಥಳೀಯ ಪ್ರತಿಭೆ ಜೆ.ಸುಚಿತ್(9) ಜೋಡಿ ದಿನದ ಆರಂಭದಲ್ಲೇ ಬೇರ್ಪಟ್ಟಿತು. ಎರಡನೇ ದಿನ ಈ ಜೋಡಿ 8 ರನ್​ಗಳಿಸಿದ್ದಾಗ ನಿಶ್ಚಲ್, ಸಂಕ್ಲೇಚ ಬೌಲಿಂಗ್​ನಲ್ಲಿ ಮೋಟ್ವಾನಿಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ ಸುಚಿತ್​ಗೆ ಜತೆ ಯಾದ ಪವನ್ ದೇಶಪಾಂಡೆ (9)5ನೇ ವಿಕೆಟ್​ಗೆ 11 ಗಳಿಸಿದ್ದಾಗ ಸಮದ್ ಫಲ್ಲಾ ಬೌಲಿಂಗ್​ನಲ್ಲಿ ಚಿರಾಗ್​ಗೆ ಕ್ಯಾಚ್ ನೀಡಿದರು. ನಾಲ್ಕು ಓವರ್ ಅಂತರದಲ್ಲೇ ಸುಚಿತ್ ಕೂಡ ಸಮದ್ ಫಲ್ಲಾ ಬೌಲಿಂಗ್​ನಲ್ಲಿ ಚಿರಾಗ್​ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ನಂತರ ಬಂದ ಬಿ.ಆರ್.ಶರತ್(13) ಹೆಚ್ಚುಹೊತ್ತು ನಿಲ್ಲದೆ, ಸತ್ಯಜಿತ್ ಬಚಾವ್ ಓವರ್​ನಲ್ಲಿ ಎಲ್​ಬಿ ಬಲೆಗೆ ಬಲಿಯಾದರು.

Stay connected

278,732FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...