ಕೌಶಲ ವೃದ್ಧಿಗೆ ನಿಪುಣ ಕರ್ನಾಟಕ!

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಐಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅಗತ್ಯಕ್ಕೆ ತಕ್ಕಂತೆ ಯುವ ಸಮುದಾಯವನ್ನು ಸಜ್ಜಗೊಳಿಸುವ ಮೂಲಕ ಉದ್ಯೋಗಾವಕಾಶ ಹೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ನಿಪುಣ ಕರ್ನಾಟಕ ಎಂಬ ತರಬೇತಿ ಯೋಜನೆ ರೂಪಿಸಿದೆ. ಈ ಯೋಜನೆ ಅಡಿ ನಗರ, ಗ್ರಾಮೀಣ ಭಾಗಗಳಲ್ಲಿ ತರಬೇತಿ ಕೇಂದ್ರಗಳು ತಲೆ ಎತ್ತಲಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನೇದಿನೆ ಹೊಸ ಹೊಸ ತಂತ್ರಜ್ಞಾನ ಬರುತ್ತಿದೆ. ಅದಕ್ಕೆ ತಕ್ಕಂತೆ ಕೌಶಲ್ಯಗಳಿಲ್ಲ. ಆದ್ದರಿಂದ ಉದ್ಯಮ ಸಂಸ್ಥೆಗಳನ್ನು ಸೇರಿಸಿ ಕೊಂಡು ತರಬೇತಿ ಕಾರ್ಯಕ್ರಮ ರೂಪಿಸುವುದು, ಆ ಮೂಲಕ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಸುವುದು ಯೋಜನೆಯ ಒಟ್ಟಾರೆ ಆಶಯ. ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಬ್ಲಾ್ಯಕ್ ಚೈನ್, ಡೇಟಾ ಸೈನ್ಸ್ ಹೀಗೆ ಹೊಸ ಹೊಸ ತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸುತ್ತಿದೆ. ಆದ್ದರಿಂದಲೇ ಸರ್ಕಾರ ನಿಪುಣ ಕರ್ನಾಟಕ ಯೋಜನೆಯಡಿ ಸ್ಕಿಲ್ ಲೋಕಲ್ ಗೋ ಗ್ಲೋಬಲ್ ಕಾರ್ಯಕ್ರಮ ರೂಪಿಸಲು ಮುಂದಾಗಿದೆ. ಕೌಶಲ ಅಂತರ ಗುರುತಿಸಲು ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸ್ಕಿಲ್ ಕೌನ್ಸಿಲ್ ಫಾರ್ ಎಮರ್ಜಿಂಗ್ ಟೆಕ್ನಾಲಜಿ ರಚಿಸಲಾಗಿತ್ತು. ಅಧಿಕಾರಿಗಳು, ತಜ್ಞರು ಸಮಿತಿಯಲ್ಲಿದ್ದರು. ಅವರೆಲ್ಲ ಸೇರಿ ಅಧ್ಯಯನ ನಡೆಸಿದ ಫಲವೇ ನಿಪುಣ ಕರ್ನಾಟಕ ಯೋಜನೆ ರೂಪುಗೊಂಡಿದೆ.

300 ಕೋಟಿ ರೂ. ವೆಚ್ಚ: ರಾಜ್ಯದ ಯುವಕರಿಗೆ ಕೌಶಲ್ಯಭರಿತ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆ ರೂಪಿಸಿರುವ ಈ ಯೋಜನೆಗೆ 300 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಈ ವರ್ಷವೇ 10 ಕೋಟಿ ರೂ.ಗಳನ್ನು ವಿನೂತನ ಯೋಜನೆಗೆ ಸರ್ಕಾರ ತೆಗೆದಿರಿಸಿದೆ.

ಉದ್ಯಮ ಪಾಲುದಾರಿಕೆ: ಕೇವಲ ಸರ್ಕಾರದಿಂದಷ್ಟೇ ಯೋಜನೆ ಜಾರಿ ಸಾಧ್ಯವಿಲ್ಲ. ಆದ್ದರಿಂದಲೇ ಹೆಚ್ಚು ಬೇಡಿಕೆಯಿರುವ ವಿವಿಧ ಕೋರ್ಸ್ ಗುರುತಿಸಲಾಗಿದೆ. ಈಗಾಗಲೇ ಅನೇಕ ಕೌಶಲ ಕಾರ್ಯಕ್ರಮ ಜಾರಿಯಲ್ಲಿದ್ದರೂ ಅವು ಸದ್ಯ ಉದ್ಯಮದ ಬೇಡಿಕೆಗಳಿಗಿಂತ ಹಿಂದುಳಿದಿವೆ. ಕನ್ನಡಿಗ ಯುವಕರನ್ನು ಉಳಿಸಿಕೊಂಡು, ರಾಜ್ಯದೊಳಗೇ ಅವರಿಗೆ ಉದ್ಯೋಗ ಭದ್ರಪಡಿಸುವುದು, ಕೌಶಲ ಮತ್ತು ಸ್ಥಳೀಯ ಪ್ರತಿಭೆಗಳನ್ನು ಹೆಚ್ಚಿಸುವ 2 ಪ್ರಮುಖ ಆಶಯದೊಂದಿಗೆ ಈ ನೂತನ ಕಾರ್ಯಕ್ರಮವನ್ನು ಜಾರಿ ಮಾಡಲಾಗುತ್ತಿದೆ.

ತರಬೇತಿ ಕೇಂದ್ರಗಳು: ಕೌಶಲ ಅಭಿವೃದ್ಧಿಯ ಪ್ರತಿ ಅಂಶವನ್ನು ಯೋಜನೆ ಒಳಗೊಂಡಿದೆ. ಉದ್ಯಮ ಜೋಡಣೆಗೆ ಪೂರಕ ಪಠ್ಯಕ್ರಮ ರಚನೆ ಮಾಡಲಾಗುತ್ತದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತದೆ. ಪ್ರಮುಖ ಐಟಿ ಕಂಪನಿಗಳಿಂದ ಗುರುತಿಸಲ್ಪಟ್ಟ ಪ್ರಮಾಣೀಕರಣಗಳನ್ನು ನೀಡುವುದು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ.

ಖಾಸಗಿ ಸಹಭಾಗಿತ್ವ : ರಾಜ್ಯ ಸರ್ಕಾರ ಈ ಯೋಜನೆಗೆ ದಿಗ್ಗಜ ಸಂಸ್ಥೆಗಳಾದ ಇನ್ಪೋಸಿಸ್, ವಿಪ್ರೋ ಮತ್ತು ಟಿಸಿಎಸ್ ಸೇರಿದಂತೆ ಉನ್ನತ ಐಟಿ ಕಂಪನಿಗಳ ಸಹಯೋಗ ಪಡೆದುಕೊಳ್ಳಲಿದೆ. ಆ ಸಂಸ್ಥೆಗಳ ಸಿಎಸ್​ಆರ್ ನಿಧಿ ಬಳಕೆ ಮಾಡಲಾಗುತ್ತಿದೆ.

ಎರಡು ತಿಂಗಳಲ್ಲಿ ಉದ್ಘಾಟನೆ: ಸಚಿವ ಸಂಪುಟದಲ್ಲಿ ನಿಪುಣ ಕರ್ನಾಟಕ ಯೋಜನೆ ಅನುಮತಿ ಸಿಕ್ಕಿದೆ. ಉದ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ಸಲಹೆ ನೀಡಿದ್ದಾರೆ. ಪಠ್ಯಕ್ರಮ ಸಿದ್ಧವಾಗುತ್ತಿದೆ. ಎರಡು ತಿಂಗಳಲ್ಲಿ ತರಬೇತಿ ಕಾರ್ಯಕ್ರಮಗಳು ಆರಂಭವಾಗಲಿವೆ. ಆ ಮೂಲಕ ಮಾನವ ಸಂಪನ್ಮೂಲ ಸೃಷ್ಟಿಗೆ ಫ್ಲಾಟ್​ಫಾರಂ ಒದಗಿಸಲಿದೆ.

ಯೋಜನೆ ಪ್ರಮುಖಾಂಶ

* ಸಾರ್ವಜನಿಕ-ಖಾಸಗಿ ಸಹಭಾಗಿತ್ವ

* ಪಠ್ಯಕ್ರಮದ ಅಭಿವೃದ್ಧಿ, ಇಂಟರ್ನ್​ಶಿಪ್

* ಕೌಶಲ ಅಭಿವೃದ್ಧಿಯ ಪ್ರತಿ ಅಂಶದ ಪಾಠ

*ಕಂಪನಿಗಳ ಜತೆ 50:50 ಪಾಲುದಾರಿಕೆ

ಉದ್ದೇಶಗಳೇನು?

* ಐಟಿ ಕ್ಷೇತ್ರದಲ್ಲಿ ನವ ತಂತ್ರಜ್ಞಾನ ವೃದ್ಧಿ

* ಆದರೆ ಅದಕ್ಕೆ ತಕ್ಕಂತೆ ಕೌಶಲ್ಯಗಳಿಲ್ಲ

* ಉದ್ಯಮ ಅಗತ್ಯ ಪೂರೈಸಲಾಗುತ್ತಿಲ್ಲ

* ಮಹಿಳಾ ಉದ್ಯೋಗಿಗಳ ಸಂಖ್ಯೆ ಇಳಿಕೆ

* ಅಂತರ ತಗ್ಗಿಸಲು ಸರ್ಕಾರ ಆದ್ಯತೆ

* ಉದ್ಯಮಗಳ ಜತೆ ಕೈಜೋಡಿಸುವುದು

* ಆ ಮೂಲಕ ತರಬೇತಿ ನೀಡುವುದು

* ಯುವಕರನ್ನು ಸಜ್ಜುಗೊಳಿಸುವುದು

* ಜಾಗತಿಕ ಸವಾಲು ಮೆಟ್ಟಿನಿಲ್ಲುವುದು

* ಶ್ರೇಷ್ಠ ಮಾನವ ಸಂಪನ್ಮೂಲ ಸೃಷ್ಟಿ

3 ತಿಂಗಳು ಮನೆ ಬಿಟ್ಟು ಬರದಂಗೆ ಮಾಡಿದರು; ನನ್ನ ಹೋರಾಟ ಮತ್ತೆ ಆರಂಭ ಎಂದ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ!

ಬಿಜೆಪಿ ಶಾಸಕ ಮುನಿರತ್ನ ಬಂಧನ ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮೊದಲ ಪ್ರತಿಕ್ರಿಯೆ ಹೀಗಿದೆ..!

Share This Article

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…