ಸಮನ್ಸ್ ತಲುಪಿಲ್ಲ ಎನ್ನುತ್ತಿದ್ದ ಸಂಸದ ಪ್ರಜ್ವಲ್ ರೇವಣ್ಣಗೆ ಜಾಹೀರಾತು ಮೂಲಕ ಸಮನ್ಸ್ ಜಾರಿ

ಹಾಸನ: ಲೋಕಸಭೆ ಚುನಾವಣೆ ವೇಳೆ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ‌ ನೀಡಲಾಗಿದೆ ಎಂಬ ಆರೋಪ ಸಂಬಂಧ ಸೆ.30ರಂದು ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಲಾಗಿದೆ.

ದೂರುದಾರರಾದ ಮಾಜಿ ಸಚಿವ ಎ.ಮಂಜು ಹಾಗೂ ವಕೀಲ ಜಿ.ದೇವರಾಜೇಗೌಡ ಅವರು ಪ್ರತ್ಯೇಕವಾಗಿ ದಾಖಲಿಸಿರುವ ಪ್ರಕರಣಗಳ ವಿಚಾರಣೆಗೆ ಸೆ.30ರಂದು ಬೆಳಗ್ಗೆ 10.30ಕ್ಕೆ ಖುದ್ದಾಗಿ ಇಲ್ಲವೇ ವಕೀಲರ ಮೂಲಕ ಹಾಜರಾಗುವಂತೆ ಹೈ ಕೋರ್ಟ್ ಸಮನ್ಸ್ ನಲ್ಲಿ ಸೂಚಿಸಲಾಗಿದೆ.

ಈ ಹಿಂದೆ ತಮಗೆ ಪ್ರಕರಣ ಸಂಬಂಧ ನ್ಯಾಯಾಲಯದ ಸಮನ್ಸ್ ತಲುಪಿಲ್ಲ ಎಂದು ಸಂಸದ ಪ್ರಜ್ವಲ್ ಹೇಳಿದ್ದರು.
ಈ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ಸಂಸದರಿಗೆ ಪತ್ರಿಕೆಯ ಜಾಹೀರಾತು ಮೂಲಕ ಸಮನ್ಸ್ ಜಾರಿ ಮಾಡಲು ಅನುಮತಿ ನೀಡಿತ್ತು.

ಅದರಂತೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಇದರಿಂದ 30ರಂದು ಪ್ರಜ್ವಲ್ ಇಲ್ಲವೇ ಅವರ ಪರವಾಗಿ ವಕೀಲರು ನ್ಯಾಯಾಧೀಶರ ಮುಂದೆ ಹಾಜರಾಗಲೇಬೇಕಾಗುತ್ತದೆ.

3 Replies to “ಸಮನ್ಸ್ ತಲುಪಿಲ್ಲ ಎನ್ನುತ್ತಿದ್ದ ಸಂಸದ ಪ್ರಜ್ವಲ್ ರೇವಣ್ಣಗೆ ಜಾಹೀರಾತು ಮೂಲಕ ಸಮನ್ಸ್ ಜಾರಿ”

  1. Now what is your answer dear Vokkaligas, as a Gowda complained about this. All Vokkaligas were thinking that BJP is against them when DKS is arrested. Let all ill-gotten rich politicians be punished.

    1. No body is there in rich politician in BJP. Only Dk, chidambarm, now Dk earn 840 cr, what were doing Ed last 15 years. I also voted BJP. This is politics.

  2. Today we are worse than Lalu Rabris regime. Vokkaligas = are they support corruption and if they so they should change their caste vision kallathana madi sreemanthanagu. First time swamis are supporting corruption

Leave a Reply

Your email address will not be published. Required fields are marked *