ಬಾಡಿಗೆ ಮನೆ ಖಾಲಿ ಮಾಡಲು ಯಶ್​ ತಾಯಿಗೆ 2 ತಿಂಗಳು ಕಾಲಾವಕಾಶ ನೀಡಿದ ಹೈಕೋರ್ಟ್​

ಬೆಂಗಳೂರು: ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಲು ರಾಕಿಂಗ್​ ಸ್ಟಾರ್​ ಯಶ್​ ತಾಯಿಗೆ 2 ತಿಂಗಳು ಹೆಚ್ಚುವರಿ ಕಾಲಾವಕಾಶವನ್ನು ಕರ್ನಾಟಕ ಹೈಕೋರ್ಟ್​ ನೀಡಿದೆ.

ಬಾಡಿಗೆ ಹಣ ಪಾವತಿ ವಿಚಾರವಾಗಿ ಹೈಕೋರ್ಟ್​ನಲ್ಲಿ ಯಶ್​ ತಾಯಿ ವಿರುದ್ಧ ದಾವೆ ಹೂಡಲಾಗಿತ್ತು. ಅದರಂತೆ ಹೈಕೋರ್ಟ್​ ಮಾರ್ಚ್​​ 31 ಕ್ಕೆ ಮನೆ ಖಾಲಿ ಮಾಡುವಂತೆ ಆದೇಶಿಸಿತ್ತು. ಆದರೆ ತಾವು ಹಾಸನದಲ್ಲಿ ಮನೆ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು 6 ತಿಂಗಳು ಹಿಡಿಯಬಹುದು. ಇಷ್ಟು ಕಡಿಮೆ ಅವಧಿಗೆ ಬೇರೊಂದು ಬಾಡಿಗೆ ಮನೆ ಹುಡುಕುವುದು ಕಷ್ಟವಾಗಲಿದೆ. ಹೀಗಾಗಿ ಮನೆ ಖಾಲಿ ಮಾಡಲು ನೀಡಿದ್ದ ಕಾಲಾವಕಾಶವನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದರು.

ಯಶ್​ ತಾಯಿಯ ಅರ್ಜಿಗೆ ಮನೆ ಮಾಲೀಕ ಡಾ. ಮುನಿಪ್ರಸಾದ್​ ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಅಂತಿಮವಾಗಿ ಮುನಿಪ್ರಸಾದ್​ 2 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲು ಸಮ್ಮತಿಸಿದ್ದಾರೆ. ಹೀಗಾಗಿ ಹೈಕೋರ್ಟ್​ ಮೇ 31 ರಂದು ಮನೆ ಖಾಲಿ ಮಾಡಲು ಆದೇಶ ನೀಡಿದೆ.

Leave a Reply

Your email address will not be published. Required fields are marked *