ನಟ ಪವನ್​ ಕಲ್ಯಾಣ್​ರಿಂದ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಘೋಷಣೆ

ಬೆಂಗಳೂರು: ಟಾಲಿವುಡ್​ ಸ್ಟಾರ್​ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಟ್ವಿಟರ್​ ಮೂಲಕ ಶುಭ ಕೋರಿದ್ದಾರೆ.

63ನೇ ಕನ್ನಡ ರಾಜ್ಯೋತ್ಸವದ ಸಂದಭ೯ವಾಗಿ ಸಮಸ್ತ ಕನ್ನಡ ಪ್ರಜೆಗಳಿಗೆ, ಕನಾ೯ಟಕದ ಮುಖ್ಯಮಂತ್ರಿಗಳಿಗೆ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್​ ಮಾಡಿರುವ ಪವನ್​ ಕಲ್ಯಾಣ್​ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಘೋಷಣೆ ಕೂಗಿದ್ದಾರೆ.

ನನ್ನ ಪ್ರೀತಿಯ ಹಾಗೂ ಗೌರವಾನ್ವಿತ ಸಹೋದರ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ಎಲ್ಲ ದಿಕ್ಕುಗಳಲ್ಲಿ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ ಎಂಬುದನ್ನು ನಾನು ನಂಬಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)