Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕಾನೂನು ಹೋರಾಟದತ್ತ ಗೋವಾ

Saturday, 11.08.2018, 3:02 AM       No Comments

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಛಾಯಾಚಿತ್ರ ತೆಗೆಯಲು ಕಣಕುಂಬಿಗೆ ತೆರಳಿದ್ದ ಗೋವಾ ಅಧಿಕಾರಿಗಳ ತಂಡವನ್ನು ಕರ್ನಾಟಕ ಪೊಲೀಸರು ಐಬಿಗೆ ಕರೆದೊಯ್ದ ಪ್ರಕರಣವನ್ನು ಗೋವಾ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಅವರು ಅಲ್ಲಿನ ಅಡ್ವೊಕೇಟ್ ಜನರಲ್ ದತ್ತಪ್ರಸಾದ ಲವಂದೆ ಬಳಿ ಚರ್ಚೆ ನಡೆಸಿದ್ದಾರೆ. ಕರ್ನಾಟಕದ ವಿರುದ್ಧ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದೆ. ‘ಕರ್ನಾಟಕ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಸಿಎಂ ಪರಿಕ್ಕರ್ ಅಮೆರಿಕಕ್ಕೆ ತೆರಳಿದ್ದು, ಅವರೊಂದಿಗೆ ಚರ್ಚೆ ನಡೆಸಲು ಸಾಧ್ಯವಾಗುತ್ತಿಲ್ಲ. ಗೋವಾ ಕಡೆಗೆ ಹರಿಯುತ್ತಿದ್ದ ಮಹದಾಯಿ ನದಿ ನೀರನ್ನು ಕರ್ನಾಟಕವು ಮಲಪ್ರಭೆಗೆ ತಿರುಗಿಸಿಕೊಂಡಿದೆ. ಕಣಕುಂಬಿಗೆ ತೆರಳಿದ್ದ ನಮ್ಮ 8 ಅಧಿಕಾರಿಗಳನ್ನು ಅಪರಾಧಿಗಳಂತೆ ಕರೆದೊಯ್ಯಲಾಗಿದೆ. ಅಧಿಕಾರಿಗಳನ್ನು ಒಂದು ಬಂಗಲೆಯಲ್ಲಿರಿಸಿ ದೂರವಾಣಿ ಕರೆ ಮಾಡಲೂ ಅವಕಾಶ ನೀಡಿಲ್ಲ’ ಎಂದು ಪಾಲ್ಯೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೊಲೀಸರ ಕ್ರಮ ತಪು್ಪ: ಮಹದಾಯಿ ನದಿ ನೀರನ್ನು ತಿರುಗಿಸಿದ್ದರ ಮಾಹಿತಿ ಪಡೆಯಲು ನಮ್ಮ ಅಧಿಕಾರಿಗಳು ಕಣಕುಂಬಿಗೆ ತೆರಳಿದ್ದು, ಅಲ್ಲಿ ಅಪರಾಧ ಎಸಗಿಲ್ಲ. ಕರ್ನಾಟಕ ಪೊಲೀಸರು ಅವರನ್ನು ಬಂಧಿಸುವ ಅಗತ್ಯವಿರಲಿಲ್ಲ. ಅಪರಾಧಿಗಳಂತೆ ನಿಲ್ಲಿಸಿ ಫೋಟೋ ತೆಗೆದಿರುವುದು ತಪ್ಪು ಎಂದು ಗೋವಾ ಅಡ್ವೋಕೇಟ್ ಜನರಲ್ ದತ್ತಪ್ರಸಾದ ಲವಂದೆ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

Back To Top