15 C
Bangalore
Saturday, December 7, 2019

ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

Latest News

ಕೊನೆಗೂ ಬದುಕುಳಿಯಲಿಲ್ಲ ಉನ್ನಾವೋ ಅತ್ಯಾಚಾರ ಸಂತ್ರಸ್ತೆ: ಶೇ.90 ಸುಟ್ಟಗಾಯಗಳಿಂದ ಆಸ್ಪತ್ರೆ ಸೇರಿದ್ದಳು

ನವದೆಹಲಿ:  ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದ ಉನ್ನಾವೋ ಅತ್ಯಾಚಾರ ಘಟನೆಯ ಸಂತ್ರಸ್ತೆ ಕಡೆಗೂ ಬದುಕುಳಿಯಲಿಲ್ಲ. ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ...

ನಿರ್ಮಾಣ ಸಲಕರಣೆ ಕ್ಷೇತ್ರದಲ್ಲಿ ಕುಸಿತ

ಕಾಮಗಾರಿ ನಿರ್ಮಾಣ ಸಲಕರಣೆಗಳ ಉದ್ಯಮ ಕ್ಷೇತ್ರವು 2020 ಮಾರ್ಚ್ ಅಂತ್ಯಕ್ಕೆ ಶೇ.20ರಷ್ಟು ಕುಸಿತಗೊಳ್ಳಲಿದೆ. ನಿರ್ಮಾಣ ಸಲಕರಣೆಗಳ ಕ್ಷೇತ್ರವು ಕಳೆದ ನಾಲ್ಕು ವರ್ಷಗಳಲ್ಲಿ ಸತತ ಬೆಳವಣಿಗೆ ಕಂಡಿದ್ದು, ಸಾಕಷ್ಟು...

ಮುಗಿದ ಸಮರ ಇನ್ನು ಖಾತೆ ಸಮಾಚಾರ: ಬಿಜೆಪಿಯಲ್ಲಿ ತೀವ್ರಗೊಂಡ ಚರ್ಚೆ, ಡಿಕೆಶಿ ಹೊಂದಿದ್ದ ಖಾತೆಗಳತ್ತ ರಮೇಶ್ ಒಲವು

ಬೆಂಗಳೂರು: ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಇದೀಗ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತು ಸರ್ಕಾರ ಹಾಗೂ...

ನಿಮ್ಮ ಕಸ ನಿಮಗೆ

ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿ ಏರುತ್ತಿರುವ ವಾತಾವರಣ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ಕುರಿತು ವಿದ್ಯಾರ್ಥಿಗಳನ್ನು ಗಂಭೀರ ಚಿಂತನೆಗೆ ದೂಡುವ ವಿಶಿಷ್ಟ ಹೆಜ್ಜೆಯೊಂದಿಗೆ ಮೈಸೂರು ಜಿಲ್ಲೆ...

ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್

ಹುಬ್ಬಳ್ಳಿ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಘಟನೆಯ ಆರೋಪಿಗಳನ್ನು ಎನ್​ಕೌಂಟರ್ ಮೂಲಕ ಹೊಡೆದುರುಳಿಸಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್...

ರಾಜ್ಯದ ಬಹುಪಾಲು ಜಿಲ್ಲೆಗಳ ಕುಡಿಯುವ ನೀರಿನ ಮೂಲ ಹಾಗೂ ಕೃಷಿಗೆ ಆಸರೆಯಾಗಿರುವ ನದಿಗಳ ಉಗಮಸ್ಥಾನವಾದ ಪಶ್ಚಿಮಘಟ್ಟದ ಗುಡ್ಡಗಳು ಕುಸಿಯಲಾರಂಭಿಸಿದ್ದು, ಪರಿಸರ ವಿರೋಧಿ ಕೃತ್ಯಗಳೇ ಈ ಅನಾಹುತಕ್ಕೆ ಕಾರಣ ಎಂಬ ಸಂಶಯ ಬಲವಾಗಿದೆ. ಇದರಿಂದ ಜೀವನದಿ ಮೂಲಗಳಿಗೂ ಅಪಾಯ ತಂದೊಡ್ಡುವ ಆತಂಕ ಎದುರಾಗಿದೆ.

| ಮಲ್ಲಿಕಾರ್ಜುನ ಕಬ್ಬೂರು ಚಿಕ್ಕಮಗಳೂರು

ಕೃಷ್ಣೆ, ಕಾವೇರಿ ಕೊಳ್ಳದ ಪ್ರಮುಖ ಉಪನದಿಗಳಾದ ಹೇಮಾವತಿ, ಭದ್ರಾ, ತುಂಗಾ, ನೇತ್ರಾವತಿ ನದಿಗಳು ಹುಟ್ಟುವ ಹಾಗೂ ಅವುಗಳ ಉಪನದಿ, ಹಳ್ಳ-ಕೊಳ್ಳ ಜನ್ಮ ತಾಳುವ ಹಲವು ಬೆಟ್ಟಗಳು ಕುಸಿದಿರುವುದು ಪರಿಸರ ತಜ್ಞರಲ್ಲಿ ಭೀತಿ ಹುಟ್ಟಿಸಿದೆ. ಮಾನವ ಕಾಡಿನೊಳಗೆ ಪ್ರವೇಶಿಸಿ ಪರಿಸರ ವಿರೋಧಿ ಚಟುವಟಿಕೆ ಮಾಡುತ್ತಿರುವುದರಿಂದಲೇ ಮೋಡ ನಿಲ್ಲಿಸಿ ಮಳೆ ಸುರಿಸುವ ಮೂಡಿಗೆರೆ, ಶೃಂಗೇರಿ ತಾಲೂಕಿನ ತಪ್ಪಲಿನ ಹಲವು ಬೆಟ್ಟಗಳು ಕುಸಿಯುತ್ತಿವೆ ಎಂಬ ಅನುಮಾನ ಶುರುವಾಗಿದೆ. ಸಾವಿರಾರು ವರ್ಷಗಳಿಂದ ನಿಶ್ಚಲವಾಗಿದ್ದ ಬೆಟ್ಟಗಳು ಇತ್ತೀಚಿನ ವರ್ಷಗಳಲ್ಲಿ ಕುಸಿಯುತ್ತಿವೆ. ಜೀವನದಿಗಳಿಗೆ ಜೀವ ತುಂಬುವ ಸಾವಿರಾರು ಝುರಿಗಳು ಹುಟ್ಟುವ ಹಲವು ಬೆಟ್ಟಗಳು ಕುಸಿದು ಪರಿಸರ ವಿರೂಪಗೊಳ್ಳತೊಡಗಿದೆ.

ವಾರದಲ್ಲಿ ಸರ್ಕಾರಕ್ಕೆ ವರದಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ನದಿ ಹುಟ್ಟುವ ಪಶ್ಚಿಮಘಟ್ಟದ ಗುಡ್ಡಗಳು ಕುಸಿದು ಪರಿಸರ ಸೂಕ್ಷ್ಮ ವೈವಿಧ್ಯತೆಗೆ ಧಕ್ಕೆ ಉಂಟಾಗಿದೆ. ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರದ ತಜ್ಞರಿಂದ ಇನ್ನೊಂದು ವಾರದಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಭೂಗರ್ಭ ಇಲಾಖೆ ಉಪ ನಿರ್ದೇಶಕ ಡಾ.ಎಂ.ಜೆ.ಮಹೇಶ್ ತಿಳಿಸಿದ್ದಾರೆ.

ಮಾನವ ನಿರ್ವಿುತ ದುರಂತ

ವಿಶ್ವದ ಪರಿಸರ ವೈವಿಧ್ಯತೆಯ ಕೆಲವು ಪ್ರಮುಖ ತಾಣಗಳಲ್ಲಿ ಒಂದಾಗಿರುವ ಪಶ್ಚಿಮಘಟ್ಟದ ಬೆಟ್ಟಗಳ ಮೇಲೆ ಮನೆ ನಿರ್ವಣ, ಕಾಫಿ ತೋಟ ಮಾಡುವುದು, ನೈಸರ್ಗಿಕ ಕಾಡು ಕಡಿದು ಪರಿಸರಕ್ಕೆ ಪೂರಕವಲ್ಲದ ಸಿಲ್ವರ್ ಗಿಡ ಬೆಳೆಸುವ ಚಟುವಟಿಕೆ ಎರಡು ದಶಕದಿಂದ ಅವ್ಯಾಹತವಾಗಿ ನಡೆದಿದೆ. ಅತಿಸೂಕ್ಷ್ಮ ಪರಿಸರ ಹೊಂದಿರುವ ಮೂಡಿಗೆರೆ ಭಾಗದಲ್ಲಿ ಮಾನವರ ಅಧಿಕ ಪ್ರವೇಶವಾಗಿರುವ ಪ್ರದೇಶದಲ್ಲಿ ಮಾತ್ರ ಹೆಚ್ಚಾಗಿ ಬೆಟ್ಟಗಳು ಅದುರಿ ಕುಸಿದಿವೆ. ಕುಸಿದ ಬೆಟ್ಟಗಳು, ಕೊಚ್ಚಿ ಹೋದ ಕಾಫಿ, ಅಡಕೆ ತೋಟಗಳ ದೃಶ್ಯ ನೋಡಿದರೆ ಇದು ಮಾನವ ನಿರ್ವಿುತ ದುರಂತವೆಂಬ ಸಂದೇಹ ಬರಲಾರಂಭಿಸಿದೆ. ಅರೆ ನೆರಳು ಬಯಸುವ ಕಾಫಿ ಗಿಡ ರಕ್ಷಣೆಗೆ ಕಾಡು ಕಡಿದು ಸ್ಥಳೀಯವಾಗಿ ಹೊಂದಿಕೆಯಲ್ಲದ ಸಿಲ್ವರ್ ಗಿಡ ನೆಟ್ಟು ಬೆಳೆಸಲಾಯಿತು. ಭೂಮಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳದ ಸಿಲ್ವರ್ ಮರಗಳಿಂದಲೇ ಈ ದುರಂತ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪಥ ಬದಲಿಸಿದ ನದಿ

ಮೂಡಿಗೆರೆ ತಾಲೂಕಿನ ಜಾವಳಿ ಬೆಟ್ಟದಲ್ಲಿ ಹೇಮಾವತಿ ನದಿ ಮೂಲವಿದೆ. ಇದಕ್ಕೆ ಸಮೀಪದ ಹತ್ತಾರು ಬೆಟ್ಟಗಳಲ್ಲಿ ಹುಟ್ಟುವ ಸಣ್ಣ ಹಳ್ಳಗಳು ಹೇಮಾವತಿ ಒಡಲು ಸೇರುತ್ತವೆ. ಸಣ್ಣ ಹಳ್ಳ ಹುಟ್ಟುವ ಬೆಟ್ಟಗಳು ಈಗ ಕುಸಿದು ನದಿ ಪಥವನ್ನೇ ಬದಲಿಸಿರುವುದು ಆತಂಕ ತಂದಿದೆ. ಈ ಭಾಗದ ಸುಂದರ್​ಖಾನ್ ಬೆಟ್ಟ ತಪ್ಪಲು, ಮಲೆಮನೆ, ಜಾವಳಿ, ಕೊಟ್ಟಿಗೆಹಾರ, ಮಧುಗುಂಡಿ, ಬಾಳೂರು ಭಾಗದ ಅನೇಕ ಬೆಟ್ಟಗಳು ಕುಸಿದಿವೆ. ಇದೇ ರೀತಿ ಭದ್ರಾ ನದಿಯ ಉಪನದಿಗಳು ಹುಟ್ಟುವ ಕಳಸ, ಕಾರಗದ್ದೆ, ಮೈದಾಡಿ, ಮಲ್ಲೇಶನಗುಡ್ಡ, ಕಮ್ಮಕೋಡು, ಯಡೂರು, ಹಳುವಳ್ಳಿ ಭಾಗದಲ್ಲಿ ಅನೇಕ ಗುಡ್ಡಗಳು ಕುಸಿದಿವೆ. ವಿಶೇಷವೆಂದರೆ, ತುಂಗಾ ಹಾಗೂ ಉಪನದಿಗಳ ಪ್ರದೇಶಗಳಾದ ನರಸಿಂಹ ಪರ್ವತ, ಗಡಿಕಲ್ಲು, ಗಂಗಾಮೂಲ, ಕೆರೆಕಟ್ಟೆ, ಸಿರೆಮನೆ ಫಾಲ್ಸ್ ಭಾಗದ ಗುಡ್ಡಗಳು ಕುಸಿದಿಲ್ಲ. ಈ ಭಾಗದಲ್ಲಿ ಮಾನವನ ಅಧಿಕ ಪ್ರವೇಶವಿಲ್ಲ ಎಂಬುದು ಗಮನಾರ್ಹ.

ಪ್ರಮುಖ ನದಿ ಹುಟ್ಟುವ ಪ್ರದೇಶ

ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ ಹುಟ್ಟುವ ಪ್ರದೇಶದಲ್ಲಿ ಗುಡ್ಡಗಳ ಕುಸಿತ ಗಂಡಾಂತರದ ಮುನ್ಸೂಚನೆ ನೀಡಿದೆ. ಈ ನದಿಗಳು ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಮಧ್ಯ ಕರ್ನಾಕಟದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಜಿಲ್ಲೆಗಳ ಅಕ್ಷಯ ಪಾತ್ರೆಯಾಗಿವೆ.

ಜಂಬಿಟ್ಟಿಗೆ ಜೇಡಿ ಮಣ್ಣು, ಕಲ್ಲುಗಳಿಂದ ಇಲ್ಲಿನ ಬೆಟ್ಟಗಳು ನಿರ್ವಣವಾಗಿವೆ. ನೈಸರ್ಗಿಕ ಮರ ಕಡಿದರೆ ಬೆಟ್ಟ ಸಡಿಲಗೊಳ್ಳುತ್ತವೆ. ಅಧಿಕ ಮಳೆ ಬಂದಾಗ ಸಹಜವಾಗಿಯೇ ಕುಸಿಯುತ್ತವೆ.

| ಡಾ.ಎಂ.ಜೆ.ಮಹೇಶ್ ಭೂಗರ್ಭ ಇಲಾಖೆ ಉಪನಿರ್ದೇಶಕ

ಅಯ್ಯಪ್ಪ, ವಾಸ ಬೇಡಪ್ಪ!

ವಿರಾಜಪೇಟೆ: ಮಳೆಯಿಂದ ಬಿರುಕು ಬಿಟ್ಟಿರುವ ಅಯ್ಯಪ್ಪ ಹಾಗೂ ನೆಹರು ಬೆಟ್ಟ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಸರ್ವೆಕ್ಷೕಣಾ ಇಲಾಖೆ ಅಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರೊಂದಿಗೆ ಬೆಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಈ ಮಾಹಿತಿ ನೀಡಿದ್ದಾರೆ.

ಇಲಾಖೆ ಹಿರಿಯ ಅಧಿಕಾರಿ ಸುನಂದನ್ ಬಾಸು ಮಾತನಾಡಿ, ಸಾಮಾನ್ಯವಾಗಿ ಬೆಟ್ಟದಲ್ಲಿ ಕಲ್ಲುಗಳನ್ನು ಮಣ್ಣು ಹಿಡಿದಿಟ್ಟುಕೊಳ್ಳುತ್ತದೆ. ಅಯ್ಯಪ್ಪ ಮತ್ತು ನೆಹರು ಬೆಟ್ಟದಲ್ಲಿ ತುಂಬಾ ಇಳಿಜಾರಿದೆ. ಇಲ್ಲಿ ಮಳೆನೀರು ಕಲ್ಲುಗಳ ಕೆಳಗೆ ಹೆಚ್ಚು ಹೊತ್ತು ಜಿನುಗುವುದರಿಂದ ಶೀತದಿಂದ ಮಣ್ಣು ಕಲ್ಲನ್ನು ಹಿಡಿದಿಟ್ಟುಕೊಳ್ಳುವ ಸಾಂದ್ರತೆ ಕಳೆದುಕೊಳ್ಳುತ್ತಿದೆ. ಇದರಿಂದ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಕ್ರಮೇಣ ಕುಸಿಯುತ್ತದೆ. ಬೆಟ್ಟದ ಕೆಳಭಾಗದಲ್ಲಿ ವಾಸವಾಗಿರುವ ಜನರು ಜಾಗೃತವಾಗಿರಬೇಕು ಎಂದು ಎಚ್ಚರಿಸಿದರು.

ಡಿಸಿ ಅನೀಸ್ ಜಾಯ್ ಕಣ್ಮಣಿ ಮಾತನಾಡಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಜತೆ ರ್ಚಚಿಸಿ ಬೆಟ್ಟ ಪ್ರದೇಶದಲ್ಲಿ ನೆಲೆಸಿದ್ದ 54 ಕುಟುಂಬಗಳನ್ನು ಈಗಾಗಲೇ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಆ.31ರವರೆಗೆ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಮಳೆ ಕಡಿಮೆ ಆದ ಮೇಲೆ ತಜ್ಞರ ಮತ್ತೊಂದು ತಂಡ ಕರೆಸಿ ಸಮಗ್ರ ಸಮೀಕ್ಷೆ ನಡೆಸಲಾಗುವುದು ಎಂದರು.

ಮಣ್ಣು ಪರೀಕ್ಷೆ

ಅಪಾಯಕಾರಿ ಮಟ್ಟದಲ್ಲಿ ಭೂಮಿ ಬಿರುಕು ಬಿಟ್ಟಿರುವ ಅಯ್ಯಪ್ಪ, ನೆಹರು ಬೆಟ್ಟದ ಮಣ್ಣು ಪರೀಕ್ಷೆ ಮಾಡಲು ಭಾರತೀಯ ಸರ್ವೇಕ್ಷಣಾ ಇಲಾಖಾಧಿಕಾರಿಗಳ ತಂಡ ನಿರ್ಧರಿಸಿದೆ. ಸ್ಥಳ ಪರಿಶೀಲನೆ ವೇಳೆ ಪರೀಕ್ಷೆಗಾಗಿ ಮಣ್ಣು ಮಾದರಿ ತೆಗೆದುಕೊಂಡು ಹೋಗಿದ್ದಾರೆ. ಬೆಟ್ಟ ಪ್ರದೇಶದ ಮಣ್ಣಿನ ಗುಣಮಟ್ಟ ಅಧಿಕೃತವಾಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರ ಗೊತ್ತಾಗುತ್ತದೆ. ತದನಂತರ ಬಿರುಕು ಬಿಟ್ಟಿರುವ ಸ್ಥಳ ಭವಿಷ್ಯದಲ್ಲಿ ಹೇಗಿರುತ್ತದೆ ಎಂದು ನಿಖರವಾಗಿ ಲೆಕ್ಕಾಚಾರ ಮಾಡಬಹುದೆಂದು ಅಧಿಕಾರಿಗಳು ಹೇಳುತ್ತಾರೆ.

ಹಕ್ಕುಪತ್ರ ಇದೆ

ಮೂರು ದಶಕಗಳ ಹಿಂದಿನಿಂದ ಅಯ್ಯಪ್ಪ ಬೆಟ್ಟದಲ್ಲಿ ಜನ ಮನೆ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಬಹುತೇಕ ಸಂತ್ರಸ್ತರು ವಿರಾಜಪೇಟೆ ಪಟ್ಟಣ ಪಂಚಾಯಿತಿ ಮೂಲಕ ಜಾಗದ ಹಕ್ಕು ಪತ್ರ ಹೊಂದಿದ್ದಾರೆ. ಈಗ ಈ ಸ್ಥಳ ವಾಸಕ್ಕೆ ಯೋಗ್ಯವಲ್ಲ ಎಂಬ ಕಾರಣಕ್ಕಾಗಿ ಆತಂಕ ಸೃಷ್ಟಿ ಆಗಿದೆ. ಅರಸು ನಗರ, ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ, ನೆಹರು ನಗರ ಬೆಟ್ಟದಲ್ಲಿ ನೆಲೆಸಿದ್ದ ಜನ ಸ್ಥಳಾಂತರಗೊಂಡಿದ್ದಾರೆ. 324 ಜನ ವಾಸಸ್ಥಳವನ್ನು ಸದ್ಯದ ಮಟ್ಟಿಗೆ ಬದಲಾಯಿಸಿದ್ದಾರೆ.

ಅಡುಗೆ ಮನೆ ಕುಸಿತ, ಗೃಹಿಣಿ ಪಾರು

ಹುಬ್ಬಳ್ಳಿ: ನೆರೆ ಬಂದು ಹೋದ ನಂತರವೂ ಒಂದಿಲ್ಲೊಂದು ಕಡೆ ಅವಘಡ ಸಂಭವಿಸುತ್ತಲೇ ಇದೆ. ನವಲಗುಂದ ತಾಲೂಕಿನ ಆಯೆಟ್ಟಿ ಗ್ರಾಮದ ಫಕ್ಕೀರಪ್ಪ ಕಡೇಮನಿ ಎಂಬವರ ಮನೆಯ ಅಡುಗೆ ಕೋಣೆಯಲ್ಲಿ ಏಕಾಏಕಿ ಭೂಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಲವ್ವ ಫಕ್ಕೀರಪ್ಪ ಕಡೇಮನಿ (35) ಪಾರಾದವರು. ಕಳೆದೆರಡು ವಾರಗಳಿಂದ ಸುರಿದ ಧಾರಾಕಾರ ಮಳೆಗೆ ಇಡೀ ಮನೆ ನೀರು ಸೋರಿ ತಂಪು ಆವರಿಸಿತ್ತು. ಇದರಿಂದ ಮನೆ ಜವಳು ಹಿಡಿದಿದೆ. ಅಡುಗೆ ಮನೆ ಇರುವ ಜಾಗದ ಕಡೆಗೆ ಹಿಂದೆ ಹಿರಿಯರು ಧಾನ್ಯ ಸಂಗ್ರಹಿಸಿಡಲು ಹಗೇವು ತೆಗೆದಿದ್ದೇ ಕುಸಿತಕ್ಕೆ ಕಾರಣವಾಗಿದೆ. ಅಡುಗೆ ಮಾಡುತ್ತಿದ್ದ ವೇಳೆ ಕುಸಿತ ಉಂಟಾಗಿ ಮಹಿಳೆ ಸಿಲುಕಿಕೊಂಡಿದ್ದಳು. ತಕ್ಷಣ ಮಗ, ತಾಯಿ ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾನೆ.

ಆರು ಜನ ನೀರು ಪಾಲು

ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿ ನದಿ ಪಾಲಾಗಿದ್ದು, ಮೂವರ ಶವ ಪತ್ತೆಯಾಗಿವೆ. ಇನ್ನುಳಿದವರ ಪತ್ತೆಗಾಗಿ ಪೊಲೀಸ್, ಎನ್​ಡಿಆರ್​ಎಫ್ ತಂಡ ಶೋಧ ಮುಂದುವರಿಸಿದೆ. ಕಾಗವಾಡ ತಾಲೂಕಿನ ಕುಸನಾಳದಲ್ಲಿ ಶುಕ್ರವಾರ ಕಾಲು ಜಾರಿ ನದಿಗೆ ಬಿದ್ದು ಲಕ್ಷ್ಮಣ ಅಪ್ಪಾಸಾಬ ಸಮಾಜ (28), ಶಾಂತಿನಾಥ ವಸಂತ ಸಮಾಜ (25) ನೀರು ಪಾಲಾಗಿದ್ದಾರೆ. ಕಾತ್ರಾಳದಲ್ಲಿ ಮುಳುಗಿದ ಮನೆ ನೋಡಲು ಹೋದ ಜಯಪಾಲ ರಾಯಪ್ಪ ಯರಂಡೋಲಿ (40) ನೀರು ಪಾಲಾಗಿದ್ದಾರೆ. ಚಿಂಚಲಿ ಪಟ್ಟಣದ ಮಸಾಲಜಿ ತೋಟದ ಬಳಿ ಶನಿವಾರ ಕೃಷ್ಣಾ ನದಿಯಲ್ಲಿ ಸಿಲುಕಿ ಸದಾಶಿವ ತಿಪ್ಪಣ್ಣ ಜಗದಾಳೆ (67) ಸಾವನ್ನಪ್ಪಿದ್ದು, ಶವ ಸಿಕ್ಕಿದೆ. ಕುಡಚಿ ಬಳಿ ಆ.8ರಂದು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದ ಗುಂಡವಾಡ ಗ್ರಾಮದ ಗುಂಡು ಅನಗಲ್ಲೆ (32), ಶುಕ್ರವಾರ ರಾತ್ರಿ ತೋಟದ ಮನೆಕಡೆ ಹೋಗುವಾಗ ನದಿಯಲ್ಲಿ ಕಾಲು ಜಾರಿ ಮೃತಪಟ್ಟಿದ್ದ ಕುಡಚಿ ಪಟ್ಟಣದ ಸಿರಾಜುದ್ದೀನ್ ಸಜ್ಜನ (60) ಶವಗಳು ಪತ್ತೆಯಾಗಿದೆ.

ಗೋಡೆ ಕುಸಿದು ಮಹಿಳೆ ಸಾವು

ಚಾಮರಾಜನಗರ ಜಿಲ್ಲೆ ಹನೂರು ಸಮೀಪದ ಬಂಡಳ್ಳಿ ಗ್ರಾಮದ ಮನೆ ಬಳಿ ಬಟ್ಟೆ ತೊಳೆಯುತ್ತಿದ್ದಾಗ ಗೋಡೆ ಕುಸಿದು ನಂಜಪ್ಪಾಚಾರಿ ಎಂಬುವರ ಪತ್ನಿ ರತ್ನಮ್ಮ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಜಿಟಿಜಿಟಿ ಮಳೆಯಾಗಿದ್ದರಿಂದ ಮಣ್ಣಿನ ಗೋಡೆಯಲ್ಲಿ ತೇವಾಂಶ ಹೆಚ್ಚಾಗಿ ದಿಢೀರ್ ಕುಸಿದಿದೆ. ಶಾಸಕ ಆರ್.ನರೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದ ವತಿಯಿಂದ ಶೀಘ್ರ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ನೀರು ಪಾಲು: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಅಳಿವೆ ಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಬೋಟ್ ಮಗುಚಿ ಕಾಸರಕೋಡದ ತನ್ವೀರ್ ಅಯೂಬ್ ಬುಡ್ಡೆ (30) ಮೃತಪಟ್ಟಿದ್ದಾರೆ. ಜತೆಗಿದ್ದ ಅಲ್ತಾಫ್ ಹುಸೇನ್ ಶೇಖ್ ಈಜಿ ದಡಸೇರಿದ್ದಾರೆ.

ಕಟ್ಟುನಿಟ್ಟಾಗಿ ಪಾಲನೆ ಆಗದ ರಜೆ ಆದೇಶ

ಬೆಂಗಳೂರು: ಪ್ರವಾಹ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಯಾರೂ ರಜೆ ತೆಗೆದುಕೊಳ್ಳಬಾರದು ಎಂದು ಖುದ್ದು ಮುಖ್ಯಮಂತ್ರಿ ಗಳೇ ಆದೇಶಿಸಿದ್ದರೂ, ಕೆಲ ಅಧಿಕಾರಿಗಳು ರಜೆ ತೆಗೆದುಕೊಳ್ಳುವುದು ಮಾತ್ರ ತಪ್ಪಿಲ್ಲ. ಸರ್ಕಾರದ ಮೇಲ್ವಿಚಾರಣೆ ಹೊತ್ತಿರುವ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಪಂ ಸಿಇಒ, ತಹಸೀಲ್ದಾರ್ ಸೇರಿ ಹಿರಿಯ ಅಧಿಕಾರಿಗಳು ರಜೆ ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಆದರೂ ಅನಾರೋಗ್ಯ ಮತ್ತಿತರ ಕಾರಣಗಳನ್ನು ಮುಂದೊಡ್ಡಿ ರಜೆ ಪಡೆದಿರುವುದು ಬೆಳಕಿಗೆ ಬಂದಿದೆ. ತಾಲೂಕು ಮತ್ತು ಜಿಲ್ಲೆ ಅಷ್ಟೇ ಅಲ್ಲ, ಸರ್ಕಾರದ ಮಟ್ಟದಲ್ಲಿಯೂ ಕೆಲ ಅಧಿಕಾರಿಗಳು ರಜೆ ಪಡೆದಿದ್ದಾರೆ.

ಇಂದಿನಿಂದ ಮತ್ತೆ ಮಳೆ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾನುವಾರದಿಂದ ಗುರವಾರ (ಆ.22)ದವರೆಗೆ ಭಾರಿ ಮಳೆ ಸಾಧ್ಯತೆಯಿದೆ. ಭಾನುವಾರ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರಿನಲ್ಲಿ ಮಳೆ ತೀವ್ರತೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Stay connected

278,741FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...