VIDEO | ಸ್ವಯಂಪ್ರೇರಿತ ಸ್ವಿಮ್ಮಿಂಗ್ ಚಾಲೆಂಜ್​ ಸ್ವೀಕರಿಸಿ ಕಪಿಲಾ ನದಿಗೆ ಹಾರಿದ ಪೂಜಾರಿ ನಾಪತ್ತೆ, ದುಃಖದ ಮಡುವಿನಲ್ಲಿ ಕುಟುಂಬಸ್ಥರು

ಮೈಸೂರು: ಭಾರಿ ಮಳೆ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಹಾರಿದ್ದ ವ್ಯಕ್ತಿಯೊಬ್ಬ ಈವರೆಗೂ ಪತ್ತೆಯಾಗದೆ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಲಿಂಗಾಭಟ್ಟರ ಗುಡಿಯ ಪೂಜಾರಿ ವೆಂಕಟೇಶ್(55) ನಾಪತ್ತೆಯಾದವ. ಬೇಡ ಎಂದು ಹೇಳಿದರೂ ಪ್ರವಾಹದ ನೀರಿನಲ್ಲಿ ಈಜುವುದಾಗಿ ಚಾಲೆಂಜ್ ಮಾಡಿ ನಂಜನಗೂಡಿನ ಹೆಜ್ಜಿಗೆ ಸೇತುವೆ ಮೇಲಿಂದ ಬೆಳಗ್ಗೆ ಕಪಿಲಾ ನದಿಗೆ ಜಿಗಿದಿದ್ದ.

ಪ್ರವಾಹದ ನೀರಿನಲ್ಲಿ ಈಜಲಾಗದೆ ವೆಂಕಟೇಶ್​ ನಾಪತ್ತೆ ಆಗಿದ್ದಾರೆ. ಈವರೆಗೂ ಅವರು ಪತ್ತೆಯಾಗದಿರುವುದು ಕುಟುಂಬಸ್ಥರನ್ನು ಚಿಂತೆಗೀಡುಮಾಡಿದೆ. ವೆಂಕಟೇಶ್ ಸಂಬಂಧಿ ಸುಬ್ರಹ್ಮಣ್ಯ ಅವರಿಂದ ಕಾಣೆಯಾದ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಲಾಗಿದೆ. ವೆಂಕಟೇಶ್​ ನದಿಗೆ ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

One Reply to “VIDEO | ಸ್ವಯಂಪ್ರೇರಿತ ಸ್ವಿಮ್ಮಿಂಗ್ ಚಾಲೆಂಜ್​ ಸ್ವೀಕರಿಸಿ ಕಪಿಲಾ ನದಿಗೆ ಹಾರಿದ ಪೂಜಾರಿ ನಾಪತ್ತೆ, ದುಃಖದ ಮಡುವಿನಲ್ಲಿ ಕುಟುಂಬಸ್ಥರು”

  1. ಸಾವು ಹುಡುಕಿಕೊಂಡ ಬಂದಾಗ ಬುದ್ಧಿ ಕೆಲಸ ಮಾಡುವುದೇ ಇಲ್ಲ. ಆತನ ಭೂಲೋಕ ವಾಸ ಮುಗಿಯಿತು!

Leave a Reply

Your email address will not be published. Required fields are marked *