Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಭ್ರಷ್ಟಾಚಾರಿಗಳನ್ನು ಪಕ್ಕದಲ್ಲೇ ಕೂರಿಸಿಕೊಳ್ಳುವ ಪ್ರಧಾನಿ: ರಾಹುಲ್ ಗಾಂಧಿ​ ವ್ಯಂಗ್ಯ

Thursday, 03.05.2018, 6:05 PM       No Comments

ಬೀದರ್​: ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಭ್ರಷ್ಟಾಚಾರ ಮಾಡಿದವರನ್ನು ಪಕ್ಕದಲ್ಲಿಯೇ ಕೂರಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ರೆಡ್ಡಿ ಸಹೋದರರಿಗೆ ಬೆಂಬಲ ನೀಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪಿಸಿದರು.
ಔರಾದ್​ನಲ್ಲಿ ಮತ ಪ್ರಚಾರದ ವೇಳೆ ಮಾತನಾಡಿ, ಮೋದಿಯವರು ನನ್ನ ಬಗ್ಗೆ ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಈ ದೇಶದ ಪ್ರಧಾನಿಗಳು ಅಂದ ಮೇಲೆ ನನಗೆ ಪ್ರಶ್ನೆ ಕೇಳುವ ಹಕ್ಕಿದೆ ಎಂದು ಹೇಳಿದರು.

ಶೋಲೆ ಸಿನಿಮಾ ಉದಾಹರಣೆ ನೀಡಿದ ರಾಹುಲ್​, ಗಬ್ಬರ್​, ಸಾಂಬಾ ಸೇರಿ ಎಲ್ಲರೂ ಈ ಚುನಾವಣೆಯಲ್ಲಿದ್ದಾರೆ. ಬಳ್ಳಾರಿ ರೆಡ್ಡಿ ಸಹೋದರರ ಚುನಾವಣಾ ತಯಾರಿ ಶೋಲೆ ಸಿನಿಮಾದ ಮಾದರಿಯಲ್ಲಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ಅಮಿತ್​ ಷಾ ಮಗ ಕೋಟಿಕೋಟಿ ಹಣ ಲೂಟಿ ಮಾಡಿದ್ದಾರೆ. ಆದರೆ, ಅವರ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಅಭ್ಯರ್ಥಿಯೇ ಇಲ್ಲ

ಔರಾದ್​ನಲ್ಲಿ ರಾಹುಲ್​ ಗಾಂಧಿ ಪ್ರಚಾರದ ವೇಳೆ ಕಾಂಗ್ರೆಸ್​ ಅಭ್ಯರ್ಥಿಯೇ ಕಾಣಿಸಿಕೊಳ್ಳಲಿಲ್ಲ. ಔರಾದ್​ ಕಾಂಗ್ರೆಸ್​ ಅಭ್ಯರ್ಥಿ ವಿಜಯ್​ಕುಮಾರ್​ ಕೌಡಿಯಾಳ ವೇದಿಕೆಯಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಎರಡು ಮೂರು ಬಾರಿ ಕೇಳಿದರೂ ವಿಜಯ್ ಕುಮಾರ್​ ಮಾತ್ರ ಕಾಣಿಸಿಕೊಳ್ಳಲಿಲ್ಲ.

ಪ್ರಧಾನಿಗೆ ಖರ್ಗೆ ತಿರುಗೇಟು

ಔರಾದ್​ನಿಂದ ಬಾಲ್ಕಿಗೆ ಆಗಮಿಸಿ ಮತ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಸುಳ್ಳಿನ ಸರದಾರರು. ನಾನು ಒಬ್ಬ ಶ್ರೀಮಂತ ವ್ಯಕ್ತಿ ಎಂದು ಹೇಳಿದ್ದು ಖಂಡನೀಯ. ಈ ಅಪಪ್ರಚಾರಕ್ಕೆಲ್ಲ ಹೆದರುವುದಿಲ್ಲ. ಪ್ರಧಾನಿಯವರು ನನ್ನ ವೈಯಕ್ತಿಕ ವಿಚಾರ ಹೇಳಿದರೆ ನಾನೂ ಅವರ ವೈಯಕ್ತಿಕ ವಿಷಯಗಳನ್ನು ಹೇಳಬೇಕಾಗುತ್ತದೆ ಎಂದು ಮೋದಿಗೆ ಸವಾಲು ಹಾಕಿದರು.

Leave a Reply

Your email address will not be published. Required fields are marked *

Back To Top