More

    ಇಂದು 1,501 ಕರೊನಾ ಕೇಸ್ ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ 22,500ಕ್ಕೆ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಬ್ಬರ ಕಡಿಮೆಯಾಗಿದ್ದು ಇಂದು 1,501 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,97,664ಕ್ಕೆ ಏರಿಕೆಯಾಗಿದೆ. ಅದರಲ್ಲಿ ಇಂದು 2,039 ಸೇರಿ ಒಟ್ಟು 28,38,717 ಸೋಂಕಿತರು ಗುಣಮುಖರಾಗಿದ್ದು, ಕೇವಲ 22,487 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ.

    ಕಳೆದ 24 ಗಂಟೆಗಳಲ್ಲಿ ಒಟ್ಟು 32 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 13 ಜಿಲ್ಲೆಗಳಲ್ಲಿ ಒಂದೂ ಸಾವು ವರದಿಯಾಗಿಲ್ಲ. ಒಟ್ಟಾರೆ ಮೃತರ ಸಂಖ್ಯೆ 36,437ಕ್ಕೆ ಹೆಚ್ಚಿದೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.46ರಷ್ಟಿದ್ದರೆ ಮರಣ ಪ್ರಮಾಣ ಶೇ. 2.13ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಬೆಂಗಳೂರಿನಲ್ಲಿಂದು 354 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 12,25,581ಕ್ಕೆ ಏರಿದೆ. ಅದರಲ್ಲಿ ಇಂದು 484 ಸೇರಿ ಒಟ್ಟು 12,01,693 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿ 8,047 ಪ್ರಕರಣಗಳು ಬಾಕಿಯುಳಿದಿವೆ. ಇಂದು ದಕ್ಷಿಣ ಕನ್ನಡದಲ್ಲಿ 247, ಮೈಸೂರಿನಲ್ಲಿ 108 ಕರೊನಾ ಪ್ರಕರಣ ದೃಢವಾಗಿದೆ. ಬೀದರ್​ನಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿಯಲ್ಲಿ ಏಕದಿನ ಏರಿಕೆ ಸಂಖ್ಯ ಒಂದಂಕಿಗೆ ಇಳಿದೆ. ಇನ್ನುಳಿದ ಎಲ್ಲ ಜಿಲ್ಲೆಗಳಲ್ಲಿ ಸೋಂಕಿನ ಏರಿಕೆ ಸಂಖ್ಯೆ ಎರಡಂಕಿಯಲ್ಲಿದೆ. (ಏಜೆನ್ಸೀಸ್)

    ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಲು ಯೋಧರ ನಿಯೋಜನೆ? ನಿಜಾಂಶ ಇಲ್ಲಿದೆ ನೋಡಿ..

    13 ತಿಂಗಳುಗಳಲ್ಲಿ ಮೂರು ಬಾರಿ ಕರೊನಾಕ್ಕೆ ತುತ್ತಾದ ವೈದ್ಯೆ! ಲಸಿಕೆ ಪಡೆದ ಮೇಲೆ ಎರಡು ಬಾರಿ ಸೋಂಕು ದೃಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts