23.2 C
Bangalore
Saturday, December 14, 2019

ದೋಸ್ತಿಗೆ ಅಗ್ನಿಪರೀಕ್ಷೆ

Latest News

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡಣೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡಣೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

16 ಯುವಕರ ಮೇಲೆ ಪ್ರಕರಣ ದಾಖಲು

ಬಾದಾಮಿ: ದ್ವಿಚಕ್ರ ವಾಹನಕ್ಕೆ ಹಾದು ಹೋಗಲು ಅವಕಾಶ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಶನಿವಾರ ವಿಕೋಪಕ್ಕೆ...

ಮೆಟ್ರೋಗೆ ಹಾರಿ ಗಂಡ ಮೃತಪಟ್ಟ ಒಂದು ಗಂಟೆಯಲ್ಲೇ ಮನೆಯಲ್ಲಿ ನೇಣು ಬಿಗಿದುಕೊಂಡ ಹೆಂಡತಿ, ಮಗಳು!

ನವದೆಹಲಿ: ಗಂಡ ಮೆಟ್ರೋಗೆ ಹಾರಿ ಮೃತಪಟ್ಟ ಗಂಟೆಯೊಳಗೆ ಮನೆಯಲ್ಲಿ ಹೆಂಡತಿ ಮತ್ತು ಮಗಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ದೆಹಲಿಯ ಜವಹರ ಲಾಲ್​ ನೆಹರು ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ...

ಬೆಂಗಳೂರು: ಮೈತ್ರಿ ಸರ್ಕಾರದ ಬುಡ ಅಲುಗಾಡಿಸುವ ಮಟ್ಟಿಗೆ ರ್ಚವಿತಚರ್ವಣ ಸುದ್ದಿ-ಗದ್ದಲಗಳಿಗೆ ಕಾರಣವಾಗಿರುವ ಅತೃಪ್ತ ಶಾಸಕರ ‘ಬಂಡಾಯ’ ಶಮನ ಕಸರತ್ತಿನಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ವಿಧಾನಸಭೆಯಿಂದ ವಿಧಾನಪರಿಷತ್​ನ ಮೂರು ಸ್ಥಾನಗಳಿಗೆ ಎದುರಾಗಿರುವ ಉಪಚುನಾವಣೆ ಮತ್ತೊಂದು ಅಗ್ನಿಪರೀಕ್ಷೆ ತಂದೊಡ್ಡಿದೆ.

ದೋಸ್ತಿ ಪಕ್ಷಗಳ ಕನಿಷ್ಠ 18 ಶಾಸಕರು ರಾಜೀನಾಮೆ ಕೊಡಲಿದ್ದು, ಆ ನಂತರ ಬಿಜೆಪಿ ಸರ್ಕಾರ ರಚಿಸಲಿದೆ ಎಂಬ ಊಹಾಪೋಹಗಳು ಒಂದೆಡೆ ಬಲವಾಗುತ್ತಿದ್ದರೆ, ಮೇಲ್ಮನೆ ಉಪಚುನಾವಣೆಯ ಎಲ್ಲ ಮೂರು ಸ್ಥಾನ ಬಾಚಿಕೊಂಡು ಮೈತ್ರಿ ಪಕ್ಷಗಳ ಶಾಸಕರು ಅಚಲವಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ಸವಾಲು ಸರ್ಕಾರದ ಮುಂದಿದೆ.

ಬಹುತೇಕ ನಾಲ್ಕು ವರ್ಷಗಳ ಅವಕಾಶ ಇರುವ 1 ಸ್ಥಾನ ಜೆಡಿಎಸ್​ಗೆ, ಎರಡು ವರ್ಷದ ಕಾಲಾವಕಾಶ ಇರುವ 2 ಸ್ಥಾನ ಕಾಂಗ್ರೆಸ್​ಗೆ ದೊರೆಯುವ ಸಾಧ್ಯತೆಗಳಿರುವುದಾಗಿ ಉಭಯ ಪಕ್ಷಗಳ ಉನ್ನತ ಮೂಲಗಳು ಖಚಿತಪಡಿಸಿವೆ.

ಅಧಿಸೂಚನೆ ಅಸ್ತ್ರ: ಆಯೋಗ ಹೊರಡಿಸಿರುವ ಪ್ರತ್ಯೇಕ ಅಧಿಸೂಚನೆಗಳು ದೋಸ್ತಿ ಪಕ್ಷಗಳಿಗೆ ವರವಾಗಿ ಪರಿಣಮಿಸಿದೆ. ಡಿಸಿಎಂ ಜಿ.ಪರಮೇಶ್ವರ್, ಬಿಜೆಪಿಯ ಕೆ.ಎಸ್. ಈಶ್ವರಪ್ಪ ಅಧಿಕಾರ ಅವಧಿ 2020ರ ಜೂ. 30ರ ತನಕ ಇತ್ತು. ಬಿಜೆಪಿಯ ವಿ.ಸೋಮಣ್ಣ ಅವಧಿ 2022ರ ಜೂ. 14ರವರೆಗಿತ್ತು. ಪರಮೇಶ್ವರ್ ಹಾಗೂ ಈಶ್ವರಪ್ಪ ಸ್ಥಾನಗಳಿಗೆ ಒಂದೇ ಅಧಿಸೂಚನೆಯಲ್ಲಿ ಚುನಾವಣೆ ನಡೆದಿತ್ತು. ಇದರ ಪ್ರಕಾರ ಈಗಲೂ ಒಂದೇ ಅಧಿಸೂಚನೆ ಹೊರಬೀಳಬೇಕಿತ್ತು. ಸೋಮಣ್ಣರಿಂದ ಖಾಲಿಯಾದ ಸ್ಥಾನಕ್ಕೆ ಪ್ರತ್ಯೇಕ ಅಧಿಸೂಚನೆ ಹೊರಬಿದ್ದಿದ್ದರೆ ಅದಕ್ಕೆ ಪ್ರತ್ಯೇಕ ಮತಪತ್ರ ಇರಬೇಕಿತ್ತು. ಎರಡು ಅಧಿಸೂಚನೆ ಹೊರಬಿದ್ದಿದ್ದರೆ ಸಂಖ್ಯಾಬಲದ ಆಧಾರದಲ್ಲಿ ಮೂರು ಪಕ್ಷಗಳಿಗೂ ತಲಾ 1 ಸ್ಥಾನ ಸಿಗುತ್ತಿತ್ತು. ಪ್ರತ್ಯೇಕತೆಯಿಂದ ಬಿಜೆಪಿಗೆ ಸಂಖ್ಯಾ ಬಲದ ಕೊರತೆ ಇದೆ. ಆದ್ದರಿಂದ ಆಡಳಿತ ಪಕ್ಷಗಳಿಗೆ 2 ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. ಎರಡೂ ಪಕ್ಷಗಳು ಮೂರು ಸ್ಥಾನ ಪಡೆದಲ್ಲಿ ಸರ್ಕಾರಕ್ಕೆ ಯಾವುದೇ ಗಂಡಾಂತರ ಇಲ್ಲ ಎಂಬುದು ಸಾಬೀತಾದಂತಾಗುತ್ತದೆ. ಒಂದು ವೇಳೆ 3ರಲ್ಲಿ ಒಂದು ಸ್ಥಾನ ಕಳೆದುಕೊಂಡರೂ ಅದು ಸರ್ಕಾರದ ಪಾಲಿಗೆ ಸಂಕಷ್ಟದ ದಿನ ಆರಂಭವಾದಂತೆಯೇ ಎಂದು ಹೇಳಲಾಗುತ್ತಿದೆ.

ಆಂಗ್ಲೋ ಇಂಡಿಯನ್ ನೇಮಕ: ವಿಧಾನಸಭೆಗೆ ನೇಮಕವಾಗುವ ಆಂಗ್ಲೋ ಇಂಡಿಯನ್ ಸದಸ್ಯರಿಗೆ ರಾಜ್ಯಸಭೆಯಲ್ಲಿ ಇಲ್ಲದಿದ್ದರೂ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಆದ್ದರಿಂದಲೇ ಅ.3ಕ್ಕೆ ಮುನ್ನವೇ ನಾಮ ನಿರ್ದೇಶನ ಮಾಡುವ ಮೂಲಕ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ದೋಸ್ತಿ ಪಕ್ಷಗಳು ಚಿಂತಿಸಿವೆ. ಆಂಗ್ಲೋ ಇಂಡಿಯನ್ ಅವಕಾಶವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವ ಬಗ್ಗೆ ನಿರ್ಧಾರವಾಗಿದೆ.

ಆಯೋಗಕ್ಕೆ ಮನವಿ: ಮೂರು ಪ್ರತ್ಯೇಕ ಅಧಿಸೂಚನೆ ಹೊರಬಿದ್ದಿರುವುದರಿಂದ ಬಿಜೆಪಿ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದೆ. ಪರಮೇಶ್ವರ್ ಹಾಗೂ ಈಶ್ವರಪ್ಪ ಅವರಿಂದ ಖಾಲಿಯಾದ ಸ್ಥಾನಗಳಿಗೆ ಒಂದೇ ಅಧಿಸೂಚನೆ ಹೊರಡಿಸುವಂತೆ ಕೋರಲಿದೆ.

 

ಬಿಜೆಪಿ ಲೆಕ್ಕಾಚಾರ ಏನು?

ಬಿಜೆಪಿ ಪರಿಷತ್ ಚುನಾವಣೆ ಗೆಲ್ಲಲು ಆಪರೇಷನ್​ಗೆ ಕೈಹಾಕಲಿದೆ ಎಂಬುದು ದೋಸ್ತಿಗಳ ಆತಂಕಕ್ಕೆ ಕಾರಣ. ದೋಸ್ತಿ ಪಕ್ಷಗಳ 10 ಜನರನ್ನು ಸೆಳೆದುಕೊಂಡಲ್ಲಿ ಮೂರು ಸ್ಥಾನಗಳನ್ನೂ ಗೆಲ್ಲಬಹುದೆಂಬುದು ಬಿಜೆಪಿ ಲೆಕ್ಕಾಚಾರ. ರಾಷ್ಟ್ರೀಯ ಪಕ್ಷವಾಗಿ ಈ ಅವಕಾಶ ಬಳಸಿಕೊಂಡರೂ ಅಚ್ಚರಿ ಇಲ್ಲ ಎಂಬುದು ರಾಜಕೀಯ ವಾದ.

ಅಗ್ನಿಪರೀಕ್ಷೆ ಹೇಗೆ?

ಪ್ರತೀ ಸ್ಥಾನ ಗೆಲ್ಲಲು 112 ಸದಸ್ಯರ ಅಗತ್ಯವಿದೆ. ಬಿಜೆಪಿ ಬಳಿ ಸದ್ಯ 104 ಸದಸ್ಯರಿದ್ದು, 8 ಮತಗಳ ಕೊರತೆ ಇದೆ. ದೋಸ್ತಿಗಳ ಬಳಿ ಸ್ಪೀಕರ್ ಸೇರಿ 118 ಜನರಿದ್ದಾರೆ. ಈ ಸಂಖ್ಯೆಗಳಲ್ಲಿ ವ್ಯತ್ಯಾಸವಾಗದಂತೆ ಕಾಯ್ದುಕೊಳ್ಳುವುದು ಎರಡೂ ಪಕ್ಷಗಳಿಗೀಗ ಸವಾಲಿನ ಕೆಲಸ.

 

ಅತೃಪ್ತರಿಗೆ ಅವಕಾಶ

ಸರ್ಕಾರದ ಎರಡು ಅಂಗಪಕ್ಷಗಳಲ್ಲೂ ನಾಯಕತ್ವದ ವಿರುದ್ಧ ಮುನಿಸಿರುವ ಶಾಸಕರಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ತಮಗ್ಯಾರಿಗೂ ಸಮಯ ನೀಡುತ್ತಿಲ್ಲ ಎಂಬುದು ಇವರೆಲ್ಲರ ಪ್ರಮುಖ ಆರೋಪ. ಹೀಗಾಗಿಯೇ ಪರಿಷತ್ ಚುನಾವಣೆ ಅವಕಾಶ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆಂಬ ದೊಡ್ಡ ಪಡೆಯೇ ಅವಕಾಶಕ್ಕಾಗಿ ಎದುರು ನೋಡುತ್ತಿದೆ. ಇದಕ್ಕಾಗಿಯೇ ಕೆಲವರು ತಮಗೆ ಬಿಜೆಪಿಯಿಂದ ಆಹ್ವಾನವಿದೆ ಎಂಬರ್ಥದ ಸಂದೇಶಗಳನ್ನು ವರಿಷ್ಠರಿಗೆ ಕಳುಹಿಸುತ್ತಿದ್ದಾರೆ.

ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯಲ್ಲಿ ತಾಂತ್ರಿಕ ಲೋಪವಿದೆ. ಬಿಜೆಪಿ ರಾಜ್ಯ ಘಟಕದಿಂದ ಚುನಾವಣಾ ಆಯೋಗಕ್ಕೆ ವಿವರಸಹಿತ ದೂರು ಸಲ್ಲಿಸಲಾಗುವುದು.

| ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಮಾಜಿ ಸಭಾಪತಿ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...