ಕಾರವಾರ: ಸಮಾಜದ ಸರ್ವತೋಮುಖ ಅಭಿವೃದ್ದಿಯನ್ನು ಬಯಸುತ್ತ, ಸಮಸ್ತರಿಗೂ ಸನ್ಮಂಗಲವಾಗಲಿ, ಸತ್ಯ, ಧರ್ಮ ನಿಷ್ಟೆ, ಸ್ವಾಭಿಮಾನದ ಭದ್ರ ಬುನಾದಿಯ ನಾಡು ನಮ್ಮದಾಗಲಿ ಎಂದು ನಿತ್ಯ ಪಾಠ ಪ್ರವಚನ ಮಾಡುವ ಜನರಿಗೆ, ಇಂದು ಹೀಯಾಳಿಸುವ ಪ್ರಯತ್ನ ನಿತ್ಯವೂ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾದ್ಯಕ್ಷ ವಿದ್ವಾನ್ ನಾರಾಯಣ ಭಟ್ ಬೆಣ್ಣೆಗದ್ದೆ ಬೇಸರ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‌ನ ಕಾರವಾರ ತಾಲೂಕಾ ಘಟಕವು ಕೋಡಿಬಾಗದ ಶಿವಾನಂದ ಮಹಾರಾಜ ಮಠದಲ್ಲಿ ಶನಿವಾರ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ವರ್ಯ ವಹಿಸಿ ಅವರು ಮಾತನಾಡಿದರು.
ವೇದಿಕೆಗಳು ಸಿಕ್ಕಾಗಲೆಲ್ಲ ಮನುವಾದಿಗಳು, ಪುರೋಹಿತಶಾಹಿಗಳು ಎಂದು ಹೇಳುವುದು ಕೆಲವರಿಗೆ ಚಾಳಿಯಾಗಿಬಿಟ್ಟಿದೆ. ನಮ್ಮಲ್ಲಿ ಸಂಘಟನೆ ಕೊರತೆ ಇದೆ ಎನ್ನುವುದು ಕೆಲವರು ಮನಗಂಡಿದ್ದಾರೆ. ನಾವು ಒಂದಾಗಿ ನಮ್ಮ ಸಮಾಜದ ಮೂಲಕ ಧರ್ಮರಕ್ಷಣೆಯ ಪಣ ತೊಟ್ಟು, ನಾಡು ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಪರಿಷತ್‌ನ ಕಾರವಾರ ತಾಲೂಕು ಅಧ್ಯಕ್ಷ ಶ್ರೀನಾಥ ಜೋಶಿ ಮಾತನಾಡಿ, ಸಮುದಾಯವನ್ನು ಸಂಘಟನೆ ಮಾಡುವ ಮೂಲಕ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆಯ ದಾರಿ ತುಳಿಯಬೇಕಿದೆ ಎಂದರು. ಕಾರ್ಯದರ್ಶಿ ಗಣೇಶ ಶುಕ್ಲ ಮಾತನಾಡಿ, ಪುರೋಹಿತ ವೃತ್ತಿಯಲ್ಲಿ ತಮ್ಮ ಜೀವನ ಕಳೆಯುವುದು ಎಂದರೆ ಒಂದು ತಪಸ್ಸು ಇದ್ದಂತೆ. ಅದನ್ನು ಅರ್ಥಪೂರ್ಣವಾಗಿ ನಡೆಸಿದ ತಾಲೂಕಿನ ಹಿರಿಯರಿಗೆ ಸನ್ಮಾಸಿದ್ದು ಎಲ್ಲರಿಗೂ ದಕ್ಕಿದ ಗೌರವ ಎನ್ನುವಂತಾಗಿದೆ ಎಂದರು.
ವಿದ್ವಾನ್ ತ್ರಿಗುಣ ಗಾಯತ್ರಿ ಅವರ ನೇತೃತ್ವದಲ್ಲಿ ನೂರಾಒಂದು ಗಣಪತಿ ಅಥರ್ವಶೀರ್ಷ ಪಾರಾಯಣ, ಹವನ, ರುದ್ರಪಾಠ ಹಾಗೂ ಸಮಂಗಲೆಯರಿAದ ಭಗವದ್ಗೀತೆ ಭಕ್ತಿಯೋಗ ಮತ್ತು ವಿಷ್ಣುಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನಲ್ಲಿ ಬಹು ಕಾಲದಿಂದ ಪೌರೋಹಿತ್ಯ ಮಾಡಿಕೊಂಡು ಬಂದ ಋತ್ವಿಜರಾದ ವಿಜಯ ಕರ್ವೆ ಸದಾಶಿವಗಡ, ಪ್ರಭಾಕರ ಜೋಶಿ ಹಣಕೋಣ, ಪಾಂಡುರAಗ ಜೋಶಿ ಅಮದಳ್ಳಿ, ರಾಜಾರಾಮ ಭಟ್ ಮಾಜಾಳಿ, ವಿಠ್ಠಲ್ ಜಿ. ಜೋಶಿ ಸಿದ್ದರ, ಅನಂತ ಜ್ಯೋತಿಷಿ ಬಿಣಗಾ, ಜಗನ್ನಾಥ್ ಜೋಶಿ ಬಾಡ, ಗಜಾನನ ಭಟ್ ವೈಲವಾಡಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಸಂಕೇತ ಸಪ್ರೆ ಶೇಜವಾಡ ಇವರನ್ನು ಸನ್ಮಾನಿಸಲಾಯಿತು. ಪರಿಷತ್‌ನ ಜಿಲ್ಲಾ ಘಟಕಕ್ಕೆ ಕಾರವಾರ ಪ್ರತಿನಿಽಯಾಗಿ ಸಚ್ಚಿದಾನಂದ ನಾಗೇಶ್ ಭಟ್ ಅವರನ್ನು ನಿಯೋಜಿಸಲಾಯಿತು. ಪ್ರಸನ್ನ ಜೋಶಿ ಹಣಕೊಣ ಉಪಸ್ಥಿತರಿದ್ದರು. ಬಾಲಕೃಷ್ಣ ಭಟ್ ಬೇಳೂರ ಸ್ವಾಗತಿಸಿ, ವಂದಿಸಿದರು.
ಮನುವಾದಿಗಳು, ಪುರೋಹಿತಶಾಹಿಗಳು ಎಂದು ಹೀಯಾಳಿಸುವುದು ಕೆಲವರಿಗೆ ಚಾಳಿಯಾಗಿದೆ

You Might Also Like
ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips
ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…
ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips
ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…
ಮ್ಯಾರೇಜ್ಗೆ ಸರಿಯಾದ ವಯಸ್ಸೇಷ್ಟು ಗೊತ್ತೆ?; ತಡವಾಗಿ ಮದುವೆಯಾಗುವುದರಿಂದ ಅನುಕೂಲ, ಅನಾನೂಕುಲಗಳೇನು? | Marriage
marriage: ಕೆಲ ದಶಕಗಳ ಹಿಂದೆ ಬಾಲ್ಯ ವಿವಾಹ ನಡೆಯುವುದು ಸಾಮಾನ್ಯವಾಗಿತ್ತು. ಬಳಿಕ ಕಾನೂನು ಕಣ್ತಪ್ಪಿಸಿ ಕದ್ದು…