ಕರ್ನಾಟಕ ಬಂದ್​ಗೆ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

blank

ಜಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಗಳೂರಿನಲ್ಲಿ ಶನಿವಾರ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಗಡಿಯಲ್ಲಿ ಮರಾಠಿ ಪುಂಡರ ಹಾವಳಿ ತಡೆಗೆ ಕಠೀಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

blank

ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ಹಳೇ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.

ಯುವ ಕರ್ನಾಟಕ ವೇದಿಕೆ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದ ನೆಲ- ಜಲ ವಿಚಾರದಲ್ಲಿ ಸ್ವಾಭಿಮಾನ ಪಣಕ್ಕಿಟ್ಟು ಹೋರಾಡಬೇಕು. ಮಹಾರಾಷ್ಟ್ರ ಗಡಿಭಾಗದಲ್ಲಿ ಕನ್ನಡಿಗರ ಮತ್ತು ಸರ್ಕಾರಿ ನೌಕರರ ಮೇಲೆ ಬಲವಂತವಾಗಿ ಮರಾಠಿ ಭಾಷೆ ಹೇರುತ್ತಿದ್ದಾರೆ ಎಂದು ದೂರಿದರು. ಪದೇ ಪದೆ ಗಡಿಯಲ್ಲಿ ಕ್ಯಾತೆ ತೆಗೆಯುವ ಎಂಇಎಸ್ , ಶಿವಸೇನೆ ನಿಷೇಧಿಸಲು ಒತ್ತಾಯಿಸಿದರು

ಕನ್ನಡ ಸಮರ ಸೇನೆ ತಾಲೂಕಾಧ್ಯಕ್ಷ ಧನ್ಯಕುಮಾರ್ ಮಾತನಾಡಿ, ಮಹಾರಾಷ್ಟ್ರ ಗಡಿಭಾಗದ ಲ್ಲಿ ಕನ್ನಡಿಗರಿಗೆ ಮಸಿ ಬಳಿಯುವ ಜತೆಗೆ ಪಿಡಿಒ ಗಳಿಗೆ ಬಲವಂತವಾಗಿ ಮರಾಠಿ ಮಾತನಾಡಲು ಒತ್ತಡ ಹೇರುವ ಮರಾಠಿಗರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ. ಸತೀಶ್, ಎಎಸ್​ಎಫ್​ಐ ರಾಜ್ಯ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ರೈತ ಸಂಘದ ಮುಖಂಡರಾದ ಭರಮಸಮುದ್ರ ಕುಮಾರ್, ಭೈರ ನಾಯಕನಹಳ್ಳಿ ರಾಜು, ಯುವ ಕರ್ನಾಟಕ ವೇದಿಕೆ ಉಪಾಧ್ಯಕ್ಷ ಮರೇನಹಳ್ಳಿ ನಾಗರಾಜ್, ಪದಾಧಿಕಾರಿಗಳಾದ ಮರೇನಹಳ್ಳಿ ಪ್ರವೀಣ್, ಮೆಹಬೂಬ್ ಅಲಿ, ತಮಲೇಹಳ್ಳಿ ತಿಮ್ಮೇಶ್ ಕಾಮಗೇತನಹಳ್ಳಿ ಪ್ರಹ್ಲಾದ್, ಚಿಕ್ಕಮ್ಮನಹಟ್ಟಿ ಕಾಂತ್​ರಾಜ್, ಮರೇನಹಳ್ಳಿ ಗುರುರಾಜ್, ನರಸಿಂಹ ಮೂರ್ತಿ, ಗೌರಿಪುರ ಸತ್ಯಮೂರ್ತಿ, ಸಿದ್ದಮ್ಮನಹಳ್ಳಿ ಬಸವರಾಜ್ ಸೇರಿದಂತೆ ಮತ್ತಿತರರಿದ್ದರು.

Share This Article

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…