ವಿಶ್ವ ಅಥ್ಲೆಟಿಕ್ಸ್​ಗೆ ಕನ್ನಡತಿ ಪೂವಮ್ಮ

ನವದೆಹಲಿ: ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮ ಹಾಗೂ ವಿಶ್ವ ಜೂನಿಯರ್ ಚಾಂಪಿಯನ್ ಹಿಮಾ ದಾಸ್ ಸೆಪ್ಟೆಂಬರ್ 27ರಿಂದ ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಂಆರ್ ಪೂವಮ್ಮ 4/400 ಮೀಟರ್ ಮಹಿಳೆಯರ ಹಾಗೂ ಮಿಶ್ರ ರಿಲೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ವರ್ಲ್ಡ್ ಯೂನಿವರ್ಸಿಟಿ 100 ಮೀಟರ್ ಚಾಂಪಿಯನ್ ದ್ಯುತಿ ಚಂದ್, ವಿಶ್ವ ಚಾಂಪಿಯನ್​ಷಿಪ್​ಗೆ ಅರ್ಹತೆ ಪಡೆದಿಲ್ಲ. ಆದರೆ ಐಎಎಎಫ್​ನಿಂದ ಆಹ್ವಾನ ಬಂದರೆ ದ್ಯುತಿ ಜತೆಗೆ ಅರ್ಚನಾ ಸುಚಿತ್ರನ್ (200 ಮೀ) ಮತ್ತು ತೇಜಸ್ವಿನ್ ಶಂಕರ್ (ಹೈಜಂಪ್) ಪ್ರವೇಶ ಪಡೆಯಲಿದ್ದಾರೆ. ಹಿಮಾ ದಾಸ್ ಮಹಿಳೆಯರ 400 ಮೀಟರ್ ಓಟದಲ್ಲಿ ಅರ್ಹತೆ ಗಿಟ್ಟಿಸದಿದ್ದರೂ ಮಹಿಳೆಯರ ಹಾಗೂ ಮಿಶ್ರ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ಟಾರ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಸದ್ಯ ಪುನಶ್ಚೇತನ ಕಾರ್ಯಕ್ರಮದಲ್ಲಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮಹಿಳೆಯರ 400 ಮೀ. ವೈಯಕ್ತಿಕ ಓಟದಲ್ಲಿ ಅಂಜಲಿ ದೇವಿ ಸೆ. 21ರಂದು ಪಟಿಯಾಲಾದಲ್ಲಿ ಟ್ರಯಲ್ಸ್ ಎದುರಿಸಲಿದ್ದಾರೆ ಎಂದು ಎಎಫ್​ಐ ಆಯ್ಕೆ ಸಮಿತಿ ತಿಳಿಸಿದೆ.

ಭಾರತ ತಂಡ: ಪುರುಷರ ವಿಭಾಗ: ಜಿನ್ಸನ್ ಜಾನ್ಸನ್ (1500ಮೀ), ಅವಿನಾಶ್ ಸಾಬ್ಲೆ (3 ಸಾವಿ ಸ್ಟೀಪಲ್​ಚೇಸ್), ಕೆಟಿ ಇರ್ಫಾನ್ ಮತ್ತು ದೇವೇಂದರ್ ಸಿಂಗ್ (20 ಕಿಮೀ ನಡಿಗೆ), ಗೋಪಿ ಟಿ (ಮ್ಯಾರಾಥಾನ್), ಶ್ರೀಶಂಕರ್ ಎಂ (ಲಾಂಗ್-ಜಂಪ್), ತೇಜಿಂದರ್ ಪಾಲ್ ಸಿಂಗ್ ತೊರ್ (ಶಾಟ್​ಪುಟ್), ಶಿವಪಾಲ್ ಸಿಂಘ್ (ಜಾವೆಲಿನ್ ಥ್ರೋ), ಮೊಹಮದ್ ಅನಾಸ್, ನಿರ್ಮಲ್ ನೊಹ, ಅಲೆಕ್ಸ್ ಅಂಟೋನಿ, ಅಮೋಜ್ ಜಾಕಬ್, ಕೆಎಸ್ ಜೀವನ್, ಧರುಣ್ ಅಯ್ಯಸಾಮಿ, ಹರ್ಷ ಕುಮಾರ್ (4/400 ಪುರುಷರ, ಮಿಶ್ರ ರಿಲೇ).

ಮಹಿಳಾ ವಿಭಾಗ: ಪಿಯು ಚೈತ್ರಾ (1500ಮೀ), ಅನು ರಾಣಿ (ಜಾವೆಲಿನ್ ಥ್ರೋ), ಹಿಮಾ ದಾಸ್, ವಿಸ್ಮಯ ವಿಕೆ, ಪೂವಮ್ಮ ಎಂಆರ್, ಜಿಸ್ನಾ ಮ್ಯಾಥ್ಯೂ, ರೇವತಿ ವಿ, ಶುಭಾ ವೆಂಕಟೇಸನ್, ವಿತ್ಯಾ ಆರ್ (4/400 ಮಹಿಳೆಯರ, ಮಿಶ್ರ ರಿಲೇ).

Leave a Reply

Your email address will not be published. Required fields are marked *