Wednesday, 12th December 2018  

Vijayavani

Breaking News

ಮೊಳಕಾಲ್ಮೂರು ಅಖಾಡದಲ್ಲಿ ಸವಾಲ್‌ ಪ್ರತೀ ಸವಾಲ್‌ !

Saturday, 14.04.2018, 1:27 PM       No Comments

ಮೊಳಕಾಲ್ಮೂರು: ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದ ಟಿಕೆಟ್​ ವಿಚಾರವಾಗಿ ಸಂಸದ ಶ್ರೀರಾಮು ಮತ್ತು ಶಾಸಕ ತಿಪ್ಪೇಸ್ವಾಮಿ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಸವಾಲು ಹಾಕಿಕೊಂಡಿದ್ದಾರೆ.

ಶ್ರೀರಾಮುಲು ಅವರನ್ನು ಸೋಲಿಸುವುದೇ ನನ್ನ ಮುಂದಿನ ಗುರಿ. ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಕೆಲಸ ಮಾಡುವುದೇ ನನ್ನ ಗುರಿ ಎಂದು ತಿಪ್ಪೇಸ್ವಾಮಿ ಅವರು ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮೂರಿಗೆ ಭದ್ರಾ ಚಾನೆಲ್​ ಮಂಜೂರು ಮಾಡಿಸಿದ್ದು ನಾನು, ಈ ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈಗ ಶ್ರೀ ರಾಮುಲು ಅವರು ಬಂದು ಏನು ಮಾಡುತ್ತಾರೆ? ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ ಎಂದು ತಿಪ್ಪೇಸ್ವಾಮಿ ಅವರು ಶ್ರೀ ರಾಮುಲು ವಿರುದ್ಧ ಹರಿ ಹಾಯ್ದಿದ್ದಾರೆ.

ಶ್ರೀರಾಮುಲು ಪ್ರತಿ ಸವಾಲು

ತಿಪ್ಪೇಸ್ವಾಮಿ ಅವರಿಗೆ ಶಕ್ತಿ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಲಿ, ಇಲ್ಲವೇ ಬೇರೆಯವರಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸಲಿ ಎಂದು ಶ್ರೀರಾಮುಲು ಬಹಿರಂಗ ಸವಾಲು ಹಾಕಿದ್ದಾರೆ.

ನಿನ್ನೆ ನಡೆದ ಘಟನೆ ನನಗೆ ಮತ್ತು ನಮ್ಮ ಸಮಾಜಕ್ಕೆ ಮಾಡಿದ ಅಪಮಾನ, ನಿನ್ನೆಯ ಘಟನೆಯಲ್ಲಿ ನನ್ನ ಕಾರು ಜಖಂ ಆಗಿದೆ. ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ. ಘಟನೆ ಬಗ್ಗೆ ಪಕ್ಷದ ನಾಯಕರು ಮಾಹಿತಿ ಪಡೆದಿದ್ದಾರೆ. 2013ರಲ್ಲಿ ನಾನು ತಿಪ್ಪೇಸ್ವಾಮಿ ಅವರ ಕೈ ಹಿಡಿದು ಗೆಲ್ಲಿಸಿದ್ದೆ. ಆದರೆ, ಅವರು ನನ್ನಿಂದ ಗೆದ್ದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top